ETV Bharat / state

ಹೊಸಪೇಟೆಯ ಸರ್ದಾರ್ ಪಟೇಲ್ ಸರ್ಕಾರಿ ಪ್ರೌಢಶಾಲೆಗೆ ಪುಂಡ-ಪೋಕರಿಗಳ ಕಾಟ: ಕ್ರಮಕ್ಕೆ ಪೋಷಕರ ಆಗ್ರಹ - etv bharat kannada

ಶಾಲೆಯನ್ನು ಅನೈತಿಕ ಚಟುವಟಿಕೆಗಳ ತಾಣ ಮಾಡಿಕೊಂಡು, ಪರಿಕರಗಳನ್ನು ಧ್ವಂಸಗೊಳಿಸಿ, ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ ಘಟನೆ ಹೊಸಪೇಟೆಯಯಲ್ಲಿ ನಡೆದಿದೆ.

Etv Bharathooligans damaging  Sardar Patel Government High School in  Hospet
ಹೊಸಪೇಟೆಯ ಸರ್ದಾರ್ ಪಟೇಲ್ ಸರ್ಕಾರಿ ಪ್ರೌಢಶಾಲೆಗೆ ಪುಂಡ-ಪೋಕರಿಗಳ ಕಾಟ
author img

By

Published : Jun 7, 2023, 5:59 PM IST

Updated : Jun 7, 2023, 7:11 PM IST

ಡಿಡಿಪಿಐ ಕೊಟ್ರೇಶ್

ವಿಜಯನಗರ: ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಕಾಣುತ್ತವೆ. ಶಾಲೆಯ ಮೂಲಸೌಕರ್ಯಕ್ಕಾಗಿ ಸರ್ಕಾರವನ್ನು ಒತ್ತಾಯಿಸಬೇಕಿದ್ದ ಸ್ಥಳೀಯರೇ, ಶಾಲೆಯಲ್ಲಿನ ಪರಿಕರಗಳನ್ನು ಧ್ವಂಸಗೊಳಿಸಿ, ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ ಘಟನೆ ಹೊಸಪೇಟೆಯ ಸರ್ದಾರ್ ಪಟೇಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಕೆಲ ಪುಂಡ-ಪೋಕರಿಗಳು ಶಾಲೆಯ ಕಾಂಪೌಂಡ್ ಲಾಕ್ ಮಾಡಿದ್ರು, ಹಿಂದಿನಿಂದ ಬಂದು ಗೋಡೆ ಕೆಡವುತ್ತಾರೆ. ಸರ್ಕಾರಿ ಶಾಲೆಯೊಳಗೆ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಶಾಲೆಯಲಿರು ವಸ್ತುಗಳನ್ನು ಕಳ್ಳತನ ಮಾಡ್ತಿದ್ದಾರೆ. ಕಿಟಕಿಗಳು ಮುರಿತಾರೆ, ಮುರಿದ ಕಿಟಕಿಗಳನ್ನು ಸರಿಪಡಿಸಿದರು ಮತ್ತೆ ಮಾರನೇ ದಿನವೇ ಅವುಗಳನ್ನು ಮುರಿದು ಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸರ್ಕಾರಿ ಶಾಲೆಯನ್ನು ಅನೈತಿಕ ಚಟುವಟಿಕೆ ತಾಣಾ ಮಾಡಿಕೊಂಡಿರುವ ಪುಂಡರು, ಶಾಲೆಗಳ ರಜೆ ಹಾಗೂ ರಾತ್ರಿ ಹೊತ್ತಲ್ಲಿ ಅಕ್ರಮವಾಗಿ ಶಾಲೆಯೊಳಗೆ ನುಗ್ಗಿ ಮದ್ಯ ಸೇವನೆ, ಧೂಮಪಾನ ಮಾಡುವುದು ಸೇರಿದಂತೆ ಇತರೆ ಅನೈತಿಕ ಚಟುವಟಿಕೆಗಳನ್ನು ಶಾಲೆಯಲ್ಲಿ ಮಾಡುತ್ತಿದ್ದು, ಶಾಲೆಯ ವಾತಾವರಣವನ್ನೇ ಹಾಳುಗೆಡವಿದ್ದಾರೆ. ಇದಕ್ಕೆ ಆದಷ್ಟು ಬೇಗ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು, ಶಾಲೆಯಲ್ಲಿನ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಪ್ರತಿಭಟನೆ ನಡೆಸುವುದಾಗಿ ವಿವಿಧ ಸಂಘಟನೆಗಳ ಅಧ್ಯಕ್ಷರು, ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.

ಈ ಶಾಲೆಗೆ ಪುಂಡರ, ಕಳ್ಳರ ಹಾವಳಿ ಇಂದು ನಿನ್ನೆಯದಲ್ಲ. ಶಾಲೆ ಆರಂಭ ಆರಂಭದಿಂದಲು ಇದೆ. ಘಟನೆ ನಡೆದಾಗಲೆಲ್ಲಾ ಶಾಲೆಯ ಮುಖ್ಯಾ ಶಿಕ್ಷಕರು ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ತನಿಖೆ ನಡೆಯುತ್ತೊ ಇಲ್ಲವೋ ಗೊತ್ತಿಲ್ಲ. ಆದರೆ ನಿರಂತರವಾಗಿ ಶಾಲೆಯಲ್ಲಿನ ಪರಿಕರಗಳ ಧ್ವಂಸ ಸೇರಿದಂತೆ ಕಬ್ಬಿಣದ ಚೇರು, ಬೀರುವಿನಲ್ಲಿದ್ದ ಬೆಲೆ ಬಾಳುವ ಸಾಮಾನುಗಳನ್ನು ಕಳವಾಗುತ್ತಿದೆ. ಸಂಬಂಧಪಟ್ಟರು ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಲೆಯ ಶಿಕ್ಷಕರು ಆರೋಪಿಸುತ್ತಿದ್ದಾರೆ.

ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಬೇಕಾಗಿರು ಶಾಲೆಗಳು ಅನೈತಿ ಚಟುವಟಿಕೆಗಳ ತಾಣಾವಾಗಿ ಮಾರ್ಪಟ್ಟಿದೆ. ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಶಾಲೆಯಲ್ಲಿ ಪದೇ ಪದೆ ಕಳವು ನಡೆಯುತ್ತಲೇ ಇರುತ್ತದೆ. ಹಲವು ಬಾರಿ ದಾಖಲಾತಿ ಸೇರಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ದಾಖಲೆಗಳು ಮತ್ತು ಪರಿಕರಗಳನ್ನು ಕಳವು ಅಥವಾ ಧ್ವಂಸ ಮಾಡಿರುವ ಘಟನೆಗಳು ನಡೆದಿವೆ. ಅಧಿಕಾರಿಗಳು ಆದಷ್ಟು ಬೇಗ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಪೋಷಕರು ಆಗ್ರಹಿಸುತ್ತಿದ್ದಾರೆದ.

ಈ ಬಗ್ಗೆ ಡಿಡಿಪಿಐ ಕೊಟ್ರೇಶ್​ ಮಾತನಾಡಿ, ಸಾರ್ವಜನಿಕರು ಸಂಜೆ ಮತ್ತು ರಜೆ ದಿನಗಳಲ್ಲಿ ಶಾಲೆ ಆವರಣಕ್ಕೆ ಬಂದು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಇದರಿಂದ ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಮುಜುಗರ ಉಂಟಾಗುತ್ತಿದೆ. ಶಾಲೆ ಎಂದರೆ ಪವಿತ್ರವಾದಂತಹ ಸ್ಥಳ, ಅದೊಂದು ದೇಗುಲ ಇದ್ದಹಾಗೇ. ಅದನ್ನು ರಕ್ಷಣೆ ಮಾಡುವುವಂತದ್ದು ಮತ್ತು ಪವಿತ್ರ್ಯೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ಸಂಜೆಯ ವೇಳೆ ಶಾಲೆಯಲ್ಲಿ ಯಾರು ಇರುವುದಿಲ್ಲ ಎಂದು ಅನೈಕ ಚಟುವಟಿಕೆಗಳಿಗಾಗೀ ಬಳಸಿಕೊಳ್ಳುವುದು ಅಘಾತಕಾರಿ ವಿಷಯ. ದಯವಿಟ್ಟು ಸಾರ್ವಜನಿಕರು ಯಾರೂ ಈ ರೀತಿ ಮಾಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಮಹಿಳಾ ಹಾಸ್ಟೆಲ್‌ನಲ್ಲಿ ನಗ್ನ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಶಂಕಿತ ಆರೋಪಿ ಆತ್ಮಹತ್ಯೆ

Last Updated : Jun 7, 2023, 7:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.