ETV Bharat / state

ಹೊಸಪೇಟೆ: ಕುರುಬರ ಸಂಘದಿಂದ ಸನ್ಮಾನ ಕಾರ್ಯಕ್ರಮ - Hosapete latest news

ಹೊಸಪೇಟೆಯಲ್ಲಿ ಕುರುಬ ಸಂಘದ ವತಿಯಿಂದ ಸಮುದಾಯದ ವಿವಿಧ ರಂಗಗಳಲ್ಲಿ ಕೆಲಸ ಮಾಡಿದ 12 ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಹೊಸಪೇಟೆ
ಹೊಸಪೇಟೆ
author img

By

Published : Sep 13, 2020, 7:38 PM IST

ಹೊಸಪೇಟೆ: ತಾಲೂಕು ಕುರುಬರ ಸಂಘದ ವತಿಯಿಂದ ಇಂದು ಸಮುದಾಯದ ನಾನಾ ರಂಗಗಳಲ್ಲಿ ಕೆಲಸ ಮಾಡಿದ 12 ಗಣ್ಯ ವ್ಯಕ್ತಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.

ಈ ವೇಳೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಮಾತನಾಡಿ, ಸಮುದಾಯದ ಏಳಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು.‌ ಅಲ್ಲದೇ ಸಮಾಜ ಸೇವೆಯನ್ನು ಮಾಡುವಂತವರನ್ನು ಗುರುತಿಸಿ ಮುಖ್ಯ ವೇದಿಕೆ ತರುವಂತ ಕೆಲಸ ಮಾಡಬೇಕು. ಸಮುದಾಯದ ಬೆನ್ನುಲುವಾಗಿ ಸದಾ ಇರುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದಮ್ಮೂರ್ ಶೇಖರ್ ಅವರು ವೈಯಕ್ತಿಕವಾಗಿ ತಾಲೂಕು ಕುರುಬರ ಸಂಘಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಯರ್ರೇಗೌಡ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷ ಬಿ.ಎಂ. ಪಾಟೀಲ್ , ತಾಲೂಕು ಕುರುಬರ ಸಂಘದ ಅಧ್ಯಕ್ಷ ಭರಮನಗೌಡ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.