ETV Bharat / state

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ತರಾತುರಿಯಲ್ಲಿ ಸ್ಥಾಪನೆ: ಹೆಚ್​​​​.ಎಂ. ರೇವಣ್ಣ

author img

By

Published : Jan 4, 2021, 3:51 PM IST

ನಾವು ಎಸ್​​ಟಿ ಮೀಸಲಾತಿ ಹೋರಾಟ ಮಾಡಿದರೆ ರಾಜಕೀಯವಾದರೆ ಬೇರೆಯವರು ಮಾಡೋದು ಏನು..? ನಾನು ಮಾತನಾಡಿದರೆ ರಾಜಕೀಯ ಅಂತಾರೆ‌. ಹೀಗಾಗಿ, ಕುರುಬ ಸಮುದಾಯಕ್ಕೂ ಎಸ್​​ಟಿ ಮೀಸಲಾತಿ ಕೇಳೋದು ಕೂಡ ರಾಜಕೀಯ ಪ್ರೇರಿತ ಅಂತಾರೆ ಅನ್ನಲಿ ಬಿಡಿ. ಅದಕ್ಕೆ ನಾನೇನು ಮಾಡೋದಕ್ಕೆ ಬರೋದಿಲ್ಲ ಎಂದು ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

Former minister HM Revanna
ಮಾಜಿ ಸಚಿವ ಹೆಚ್.ಎಂ.ರೇವಣ್ಣ

ಬಳ್ಳಾರಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮಾಜಿ ಸಚಿವ ಹೆಚ್.ಎಂ. ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಅತ್ಯಂತ ತರಾತುರಿಯಲ್ಲಿ ಸ್ಥಾಪನೆ ಮಾಡಿದೆ ಎಂದಿದ್ದಾರೆ.‌

ಅದಕ್ಕೆ ಶಾಶ್ವತ ಹಿಂದುಳಿದ ಆಯೋಗದಿಂದ ಸರ್ವೇಕಾರ್ಯ ಮಾಡಬೇಕಿತ್ತು. ಆ ಸಮುದಾಯದಲ್ಲಿ ಎಷ್ಟು ಮಂದಿ ಬಡವರಿದ್ದಾರೆಂಬ ಮಾಹಿತಿ ಕೂಡ ಇರಬೇಕಿತ್ತಾದರೂ ಅದನ್ನು ಮಾಡದೇ ತರಾತುರಿಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡೋದು ತರವಲ್ಲ. ನಾನು ಮಾತನಾಡಿದರೆ ರಾಜಕೀಯ ಅಂತಾರೆ‌. ಹೀಗಾಗಿ, ಕುರುಬ ಸಮುದಾಯಕ್ಕೂ ಎಸ್​​ಟಿ ಮೀಸಲಾತಿ ಕೇಳೋದು ಕೂಡ ರಾಜಕೀಯ ಪ್ರೇರಿತ ಅಂತಾರೆ ಅನ್ನಲಿ ಬಿಡಿ. ಅದಕ್ಕೆ ನಾನೇನು ಮಾಡೋದಕ್ಕೆ ಬರೋದಿಲ್ಲ ಎಂದು ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಮಾಜಿ ಸಚಿವರ ಪ್ರತಿಕ್ರಿಯೆ

ವೀರಶೈವ ಲಿಂಗಾಯತ ಸಮುದಾಯ ಅತ್ಯಂತ ಮುಂದುವರೆದಿದ್ದು, ಅಂತಹ ಸಮುದಾಯಕ್ಕೇನೇ ನಿಗಮ ಮಂಡಳಿ ಕೊಡ್ತಾರೆ. ಹಿಂದುಳಿದ ಆಯೋಗದಿಂದ ಶಿಫಾರಸ್ಸು ಮಾಡದೇ ಇರೋ ಸಮಾಜಕ್ಕೆ ನಿಗಮ ಮಂಡಳಿ ನೀಡ್ತಾರೆ. ರಾಜಕೀಯ ಸ್ಥಾನಮಾನ ಪಡೆಯದ ಮತ್ತು ಯಾವುದೇ ಮೀಸಲಾತಿ ಇಲ್ಲದ ಸಮುದಾಯಕ್ಕೆ ಸವಲತ್ತು ನೀಡಲ್ಲ ಎಂದು ಮಾಜಿ ಸಚಿವ ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾವು ಎಸ್​​ಟಿ ಮೀಸಲಾತಿ ಹೋರಾಟ ಮಾಡಿದರೆ ರಾಜಕೀಯವಾದರೆ ಬೇರೆಯವರು ಮಾಡೋದು ಏನು..? ಎಂದು ಮಾಜಿ ಸಚಿವ ಹೆಚ್.ಎಂ‌. ರೇವಣ್ಣ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮೀಸಲಾತಿ ನೀಡಲು ನಿರ್ಣಯ ಕೈಗೊಳ್ಳದಿದ್ದರೆ ವಿಧಾನಸೌಧ ಮುತ್ತಿಗೆ: ಕೂಡಲಸಂಗಮ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.