ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿನ ಕಮಲ ಮಹಲ್ ಬಳಿ ಅಳಿಯ ರಾಮರಾಯನ ಕೋಟೆ ಅರಮನೆಯ ಗೋಡೆ ಕುಸಿದಿರುವ ಘಟನೆ ನಡೆದಿದೆ.
ಕಮಲ ಮಹಲ್ ಕೋಟೆಯ ಹೊರ ಭಾಗ ಕುಸಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಒಂದು ವೇಳೆ ಒಳಭಾಗದಲ್ಲಿ ಕುಸಿತವಾಗಿದ್ದರೆ ಮತ್ತಷ್ಟು ಸ್ಮಾರಕಗಳಿಗೆ ಹಾನಿಯಾಗುವ ಸಂಭವವಿತ್ತು ಎನ್ನಲಾಗುತ್ತಿದೆ.
ಇಲ್ಲಿ ಶೌಚಾಲಯ ಕಾಮಗಾರಿ ನಡೆಯುತ್ತಿದ್ದು, ವಾಹನಗಳ ಸಂಚಾರದಿಂದ ಭಾರಿ ಪ್ರಮಾಣದ ಕಂಪನದಿಂದ ಕೋಟೆ ಗೋಡೆ ಕುಸಿದಿದೆ. ಕೂಡಲೇ ಇದನ್ನು ಸರಿಪಡಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.