ETV Bharat / state

ಗಣಿನಾಡಿಗೆ ಸಿಸಿಟಿವಿ ಕಣ್ಗಾವಲು: ಜಿಲ್ಲಾ ಪೊಲೀಸ್ ಇಲಾಖೆಯ ದಿಟ್ಟ ಹೆಜ್ಜೆ - ಬಳ್ಳಾರಿ ಇತ್ತೀಚಿನ ಸುದ್ದಿ

ಕರ್ನಾಟಕ ಪಬ್ಲಿಕ್ ಸೇಫ್ಟಿ ಆ್ಯಕ್ಟ್ - 2017ರ ಅಡಿ ಅಂದಾಜು 550 ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಿಸಿಟಿವಿ ಕ್ಯಾಮರಾಗಳು ಬಳ್ಳಾರಿ ಮಹಾನಗರದ ನಾನಾ ಪ್ರದೇಶಗಳಲ್ಲಿ ಅಳವಡಿಸುವಂತೆ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು ವಾಣಿಜ್ಯ ಹಾಗೂ ವ್ಯಾಪಾರೋದ್ಯಮಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.

CCTV  implement
ಸಿಸಿಟಿವಿ ಕಣ್ಗಾವಲು
author img

By

Published : Mar 9, 2021, 10:01 AM IST

Updated : Mar 9, 2021, 10:30 AM IST

ಬಳ್ಳಾರಿ: ಗಣಿನಗರಿ ಬಳ್ಳಾರಿ‌ ಮಹಾನಗರವು ಇನ್ಮುಂದೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲಿಗೆ ಒಳಪಡಲಿದೆ. ಫುಲ್ ಹೆಚ್​ಡಿ ಕ್ವಾಲಿಟಿಯ ಸಿಸಿಟಿವಿ ಕ್ಯಾಮರಾಗಳು ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಹದ್ದಿನ ಕಣ್ಣಿಡಲಿವೆ.

ಕರ್ನಾಟಕ ಪಬ್ಲಿಕ್ ಸೇಫ್ಟಿ ಆ್ಯಕ್ಟ್ - 2017ರ ಅಡಿ ಅಂದಾಜು 550 ಅತ್ಯಾಧುನಿಕ ತಂತ್ರಜ್ಞಾನವುಳ್ಳ ಈ ಸಿಸಿಟಿವಿ ಕ್ಯಾಮರಾಗಳು ಬಳ್ಳಾರಿ ಮಹಾನಗರದ ನಾನಾ ಪ್ರದೇಶಗಳಲ್ಲಿ ಅಳವಡಿಸುವಂತೆ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು ವಾಣಿಜ್ಯ ಹಾಗೂ ವ್ಯಾಪಾರೋದ್ಯಮಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.

ಇದನ್ನು ಓದಿ: ಬೆಳ್ಳಂ ಬೆಳಗ್ಗೆ ಅಧಿಕಾರಿಗಳಿಗೆ ಶಾಕ್ ನೀಡಿದ ಎಸಿಬಿ: ರಾಜ್ಯಾದ್ಯಂತ 11 ಜಿಲ್ಲೆಗಳ 28 ಕಡೆ ದಾಳಿ

ಆ ಪೈಕಿ ಅಂದಾಜು 250 ಸಿಸಿಟಿವಿ ಕ್ಯಾಮರಾಗಳನ್ನ ಅಲ್ಲಲ್ಲಿ ವಾಣಿಜ್ಯ ಮತ್ತು ವ್ಯಾಪಾರೋದ್ಯಮಿಗಳು ಅಳವಡಿಸಿಕೊಂಡಿದ್ದು, ಅವುಗಳನ್ನ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು ಪರಿಶೀಲನೆ ನಡೆಸಿದೆ. ಅವುಗಳು ಈ ಕರ್ನಾಟಕ ಪಬ್ಲಿಕ್ ಸೇಫ್ಟಿ ಆ್ಯಕ್ಟ್ 2017 ಅಡಿ ಬರಲಿದೆ. ಉಳಿದ 300 ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಈಗಾಗಲೇ ಸ್ಥಳಗಳನ್ನ ಗುರುತಿಸಿ ಅಲ್ಲಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಅತೀ ಶೀಘ್ರದಲ್ಲೇ ಈ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಕಾರ್ಯ ನಡೆಯುತ್ತೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಎಸ್​ಪಿ ಸೈದುಲ್​ ಅಡಾವತ್

ಏನಿದರ ಉದ್ದೇಶ: ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಬಹುಮುಖ್ಯ ಕಾರಣ ಏನೆಂದರೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟಾಗಬಾರದು, ಭಾರಿ ಪ್ರಮಾಣದ ದರೋಡೆ, ಕಾನೂನು ಸುವ್ಯವಸ್ಥೆ ಹದಗೆಡೋದನ್ನ ಕೂಡ ತಡೆಯಲು ಈ ಸಿಸಿಟಿವಿ ಕ್ಯಾಮರಾಗಳು ಸಹಕಾರಿಯಾಗುತ್ತವೆ. ಇದಲ್ಲದೇ, ಅಪರಾಧಗಳನ್ನ ಬಹುಬೇಗನೆ ಡಿಟೆಕ್ಟಿವ್‌ ಮಾಡಬಹುದಾಗಿದೆ.

ಪೊಲೀಸ್ ಇಲಾಖೆಯಲ್ಲಿವೆ ಏಳು ವರ್ಷಗಳ ಹಿಂದಿನ ಹಳೆಯ ಸಿಸಿಟಿವಿ ಕ್ಯಾಮರಾಗಳು: ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಏಳು ವರ್ಷಗಳ ಹಿಂದಿನ ಹಳೆಯದಾದ ಸಿಸಿಟಿವಿ ಕ್ಯಾಮರಾಗಳಿವೆ. ಅವುಗಳ ನಿರ್ವಹಣೆಗೆ ಬಹಳ ಖರ್ಚು- ವೆಚ್ಚ ತಗುಲುತ್ತದೆ. ಅಂದಾಜು 42 ಸಿಸಿಟಿವಿ ಕ್ಯಾಮರಾಗಳು ಅತ್ಯಂತ ಹಳೆಯ ತಂತ್ರಜ್ಞಾನ ಉಳ್ಳದ್ದಾಗಿವೆ. ಆಗಾಗ, ರಿಪೇರಿ ಬರೋದರಿಂದ ಅವುಗಳಿಗೂ ಕೂಡ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲು ಜಿಲ್ಲಾ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ಈ ಕುರಿತು ಈ ಟಿವಿ ಭಾರತಗೆ ಪ್ರತಿಕ್ರಿಯಿಸಿರುವ ಎಸ್​ಪಿ ಸೈದುಲ್​ ಅಡಾವತ್, "ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಸಾರ್ವಜನಿಕ ವಲಯ ಹಾಗೂ ವ್ಯಾಪಾರೋದ್ಯಮಿಗಳ ಸಹಭಾಗಿತ್ವ ಸಕಾರಾತ್ಮಕವಾಗಿದೆ. ಹೀಗಾಗಿ, ಆದಷ್ಟು ಬೇಗನೆ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಕ್ರಮವಹಿಸಲಾಗುವುದು. ಈಗಾಗಲೇ ಸಿಸಿಟಿವಿ ಕ್ಯಾಮರಾಗಳ ಸ್ವರೂಪ ಹೇಗಿರಬೇಕು ಎಂದು ತಿಳಿಸಿಕೊಡಲಾಗಿದೆ. 920x1080 ಮೆಗಾ ಫಿಕ್ಸಲ್ ಫುಲ್ ಹೆಚ್ ಡಿ ಕ್ವಾಲಿಟಿಯುಳ್ಳ ಕ್ಯಾಮರಾಗಳನ್ನ ಅಳವಡಿಸಬೇಕು. ಅಂದಾಜು 30 ದಿನಗಳ ಕಾಲ ಸ್ಟೋರೇಜ್ ಸಾಮರ್ಥ್ಯವನ್ನ ಹೊಂದಿರಬೇಕು ಎಂದು ಈಗಾಗಲೇ ತಿಳಿ ಹೇಳಲಾಗಿದೆ ಎಂದರು.

Last Updated : Mar 9, 2021, 10:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.