ETV Bharat / state

ವಿಜಯನಗರ ಜಿಲ್ಲಾದ್ಯಂತ ಭಾರೀ ಮಳೆ... ಜನ ಜೀವನ ಅಸ್ತವ್ಯಸ್ತ

ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಭಾರಿ ಮಳೆಗೆ ಮರ, ಗಿಡಗಳು ಉರುಳಿ ಬಿದ್ದಿವೆ.

ವಿಜಯನಗರ ಜಿಲ್ಲಾದ್ಯಂತ ಭಾರೀ ಮಳೆ
ವಿಜಯನಗರ ಜಿಲ್ಲಾದ್ಯಂತ ಭಾರೀ ಮಳೆ
author img

By

Published : Oct 17, 2022, 6:37 AM IST

ವಿಜಯನಗರ: ಜಿಲ್ಲೆಯಾದ್ಯಂತ ಇಂದು ಉತ್ತಮ ಮಳೆಯಾಗಿದ್ದು, ಅದರಲ್ಲೂ ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಮರಗಿಡಗಳು, ವಿದ್ಯುತ್ ಕಂಬಗಳು ಉರುಳಿವೆ. ಜನಜೀವನ ಅಸ್ತವ್ಯಸ್ತವಾಗಿದೆ.

ರಸ್ತೆಗಳಲ್ಲೂ ನೀರು ನಿಂತಿದ್ದು, ಮನೆಗಳಿಗೂ ನೀರು ನುಗ್ಗಿದೆ. ನಗರದಲ್ಲಿ ಗಗನದೆತ್ತರದ ಮಹಲ್​ಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ವ್ಯವಸ್ಥಿತ ಚರಂಡಿ, ಪಾರ್ಕಿಂಗ್ ನಿರ್ಮಾಣ ಮಾಡದೇ ರಸ್ತೆಗಳಲ್ಲೇ ನೀರು ನಿಲ್ಲುವಂತಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ನಗರಸಭೆ ಅಸಮರ್ಪಕ ಯೋಜನೆ ರೂಪಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವಂತಾಗಿದೆ. ಹಾಗಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಮನೆ ಮಂದಿಯೆಲ್ಲಾ ನೀರು ಹೊರ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯನಗರ ಜಿಲ್ಲಾದ್ಯಂತ ಭಾರೀ ಮಳೆ

ಅತ್ತ ಮನೆ ಮಂದಿಯೆಲ್ಲಾ ನೀರು ಹೊರಹಾಕುತ್ತಿದ್ದರೆ, ಇತ್ತ ತಹಶೀಲ್ದಾರ್ ವಿಶ್ವಜಿತ್ ಮೆಹತಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಿಟಿ ರೌಂಡ್ ಹಾಕಿ ಪರಿಶೀಲನೆ ನಡೆಸಿತು. ನಗರದಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿದ್ದರಿಂದ ಕೂಡಲೇ ಕಾರ್ಯಾಚರಣೆ ನಡೆಸಲು ತಹಶೀಲ್ದಾರ್​ ಸೂಚಿಸಿದರು.

ಪಾದಚಾರಿಗಳಿಂದ ಪರದಾಟ: ನಗರದ ಕಾಲೇಜು ರಸ್ತೆ, ಮೇನ್ ಬಜಾರ್, ಹಂಪಿ ರಸ್ತೆ, ಡ್ಯಾಂ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಬರೋಬ್ಬರಿ ಒಂದು ತಾಸು ಭರ್ಜರಿ ಮಳೆ ಸುರಿದಿದ್ದರಿಂದ ನಗರದ ಇಡೀ ಚಿತ್ರಣವೇ ಬದಲಾಗಿತ್ತು. ನಳನಳಿಸುತ್ತಿದ್ದ ಡಾಂಬಾರು ರಸ್ತೆಗಳಲ್ಲೂ ನೀರು ನಿಂತು, ಹೊಂಡವಾಗಿ ಮಾರ್ಪಟ್ಟಿದ್ದವು.

ಮಳೆಯಿಂದ ಅವಾಂತರ ಸೃಷ್ಠಿ: ನಗರದ ಥಿಯೋಸಾಫಿಕಲ್ ಕಾಲೇಜ್, ತಹಶೀಲ್ದಾರ್​ ಕಚೇರಿ ಸೇರಿದಂತೆ ವಿವಿಧ ಶಾಲಾ ಆವರಣದಲ್ಲೂ ನೀರು ನಿಂತಿದೆ. ಇನ್ನೂ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಮರಗಳು, ವಿದ್ಯುತ್ ಕಂಬಗಳು ಉರುಳಿವೆ. ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕುಗಳಲ್ಲೂ ಮಳೆಯಾಗಿದೆ.

ಓದಿ: ರಾಜ್ಯದ 21 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ: ಆರೆಂಜ್, ಯಲ್ಲೋ ಅಲರ್ಟ್ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.