ಹೊಸಪೇಟೆ: ಕಂಪ್ಲಿಯಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಹಳ್ಳಗಳಿಗೆ ಹೊಂದಿಕೊಂಡಿರುವ ಹೊಲಗಳಿಗೆ ನೀರು ನುಗ್ಗಿದೆ.
ನಿನ್ನೆ 12 ಗಂಟೆ ತಡರಾತ್ರಿಗೆ ಪ್ರಾರಂಭವಾದ ಮಳೆ ಎಡಬಿಡದೆ ಸುರಿದಿರುವುದರಿಂದ ಹಳ್ಳಗಳಿಗೆ ಹೊಂದಿಕೊಂಡಿರುವ ಹೊಲಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ರೈತರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನು ಕಂಪ್ಲಿ ತಾಲೂಕಿನಲ್ಲಿ ಸೆ.8 ರಂದು 17.4 ಎಂ.ಎಂ., 9 ರಂದು 20 ಎಂ.ಎಂ ಮಳೆಯಾಗಿದೆ ಎಂದು ವರದಿಯಾಗಿದೆ.