ETV Bharat / state

ಹೊಸಪೇಟೆಗೆ ಸದ್ದಿಲ್ಲದೆ ಲಗ್ಗೆ ಇಟ್ಟ ಮಣ್ಣಿನ ಮಡಿಕೆಗಳು - Heavy demand for clay pots at Hospet

ಹೊಸಪೇಟೆಯ ಕೂಡ್ಲಿಗಿ ಮತ್ತು ಹಾರೋನಹಳ್ಳಿಯಲ್ಲಿ ತಯಾರಾಗುವ ಮಡಿಕೆಗಳು ಜಿಲ್ಲೆಯ ಹಾಗೂ ತಾಲೂಕಿನ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.‌ ಒಂದು ಮಣ್ಣಿನ ಗಡಿಗೆ ಮತ್ತು ಬಿಂದಿಗೆಗೆ 150ರಿಂದ 200 ರೂಪಾಯಿ ದರ ನಿಗದಿ ಮಾಡಲಾಗಿದೆ.

Heavy demand for clay pots
ಹೊಸಪೇಟೆಯಲ್ಲಿ ರಾರಾಜಿಸುತ್ತಿವೆ ಮಣ್ಣಿನ ಮಡಿಕೆಗಳು
author img

By

Published : Mar 17, 2020, 7:52 PM IST

Updated : Mar 17, 2020, 8:16 PM IST

ಹೊಸಪೇಟೆ: ಬಡವರ ಫ್ರಿಡ್ಜ್ ಎಂದೇ ಕರೆಸಿಕೊಳ್ಳುವ ಮಣ್ಣಿನ ಮಡಿಕೆಗಳತ್ತ ಜನರ ಚಿತ್ತ ಹರಿದಿದೆ. ನಗರಕ್ಕೆ ಮಡಿಕೆಗಳು ಸದ್ದಿಲ್ಲದೇ ಲಗ್ಗೆ ಇಡುತ್ತಿವೆ. ಕೇಳುವವರೇ ಇಲ್ಲದ ಮಣ್ಣಿನ ಮಡಿಕೆ, ಗಡಿಗೆಗಳಿಗೆ ಈಗ ವಿಪರೀತ ಬೇಡಿಕೆ ಬಂದಿದೆ.

ಒಂದು ಕಾಲಕ್ಕೆ ಮಣ್ಣಿನ ಗಡಿಗೆ, ಮಡಿಕೆಗಳಿಗೆ ಎಲ್ಲಿಲ್ಲದ ಮಹತ್ವವಿತ್ತು. ಆದರೆ, ಆಧುನಿಕತೆ ಬೆಳೆದಂತೆಲ್ಲ ಗಡಿಗೆ ಮೂಲೆಗುಂಪಾಗಿದೆ. ಕುಂಬಾರರು ಮಣ್ಣಿನ ಸಾಮಗ್ರಿಗಳನ್ನು ಮಾಡುವುದನ್ನು ನಿಲ್ಲಸಿ ಬೇರೆ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಬೆರಳೆಣಿಕೆಯಷ್ಟು ಜನ ಮಾತ್ರ ಮೂಲ ವೃತ್ತಿಯನ್ನೇ ನೆಚ್ಚಿಕೊಂಡಿದ್ದಾರೆ. ಜಿಲ್ಲೆಯ ಕೂಡ್ಲಿಗಿ ಮತ್ತು ಹಾರೋನಹಳ್ಳಿಯಲ್ಲಿ ತಯಾರಾಗುವ ಮಡಿಕೆಗಳು ಜಿಲ್ಲೆ ಹಾಗೂ ತಾಲೂಕಿನ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.‌ ಒಂದು ಮಣ್ಣಿನ ಗಡಿಗೆ ಮತ್ತು ಬಿಂದಿಗೆಗೆ 150ರಿಂದ 200 ರೂಪಾಯಿ ದರ ನಿಗದಿ ಮಾಡಲಾಗಿದೆ.

ಹೊಸಪೇಟೆಯಲ್ಲಿ ರಾರಾಜಿಸುತ್ತಿವೆ ಮಣ್ಣಿನ ಮಡಿಕೆಗಳು

ಮಡಿಕೆಗಳಿಗೆ ಪ್ಲಾಸ್ಟಿಕ್ ನಳವನ್ನು ಜೊಡಿಸಿ ಆಧುನಿಕ ವಸ್ತಗಳಂತೆ ತಯಾರಿಸಲಾಗಿದೆ. ಬಿಸಿಲು ಏರಿದಷ್ಟು ಮಣ್ಣಿನ ಮಡಿಕೆಗಳ ಬೇಡಿಕೆ ಹೆಚ್ಚಲಿದ್ದು, ಹೆಚ್ಚಿನ ಲಾಭ ತರಲಿದೆ ಎನ್ನುತ್ತಾರೆ ಮಡಿಕೆ ಮಾರುವವರು.

Last Updated : Mar 17, 2020, 8:16 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.