ಹೊಸಪೇಟೆ : ಕೊರೊನಾ ವೈರಸ್ ನಗರದಲ್ಲಿ ಹರಡಿರುವುದನ್ನು ನಿಯಂತ್ರಿಸಲು ನಗರದ ಹೊರ ವಲಯದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಇದ್ರ ಜೊತೆ ಜೊತೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಚೆಕ್ ಪೋಸ್ಟ್ನಲ್ಲಿ ಬರುವಂತಹ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ನಗರದ ಮರಿಯಮ್ಮನಹಳ್ಳಿಯ ರಸ್ತೆ ತುಂಗಭದ್ರಾ ಜಲಾಶಯದ ರಸ್ತೆ, ಬಳ್ಳಾರಿಯ ಬೈಪಾಸ್ ರಸ್ತೆ, ಹಂಪಿ ರಸ್ತೆಗಳೂ ಸೇರಿದಂತೆ ಪೊಲೀಸರು ಬಿಗಿ ಬಂದೊಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ. ಜೊತೆಗೆ ನಗರದೊಳಗೆ ಜನರಿಗೆ ಪ್ರವೇಶ ನಿರ್ಬಂಧಿಸುತ್ತಿದ್ದಾರೆ.
ಕೊವಿಡ್ -19 ಪ್ರಕರಣಗಳು ಕಂಡುಬಂದ ಕ್ಷಣದಿಂದ ಅಧಿಕಾರಿಗಳು ಅಲಟ್೯ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ರಸ್ತೆಗಿಳಿಯದೆ ಎಲ್ಲರೂ ಮನೆಯಲ್ಲಿರಿ ಎಂದು ಅವರಿಗೆ ಸಾರ್ವಜನಿಕರಿಗೆ ಖಡಕ್ ಆಗಿ ಸೂಚನೆ ನೀಡುತ್ತಿದ್ದಾರೆ.