ETV Bharat / state

ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ನಡುವೆ ಕಾಳಗ - ಬಳ್ಳಾರಿ ಸುದ್ದಿ

ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಪ್ತರಾಗಿರುವ ಪ್ರಕಾಶ್​ ಬೆಂಬಲಿಗ ಬ್ಯಾನರ್​ಗೆ ಕಲ್ಲು ತೂರಾಟ ನಡೆಸಿ, ಬ್ಯಾನರ್ ಹರಿದು ಹಾಕಿದ್ದಾನೆ. ಪೊಲೀಸರ ಮಧ್ಯ ಪ್ರವೇಶದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ನಡುವೆ ಕಾಳಗ
author img

By

Published : Oct 15, 2019, 10:40 PM IST

Updated : Oct 16, 2019, 1:17 AM IST

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಹಿನ್ನೆಲೆ ಗಾಂಧಿನಗರದ ವಾಲ್ಮೀಕಿ ಹಾಸ್ಟೆಲ್​ ಬಳಿ ಶುಭಕೋರಿ ಹಾಕಲಾಗಿದ್ದ ಬ್ಯಾನರ್​ಗೆ ಕಲ್ಲುತೂರಿ, ಹರಿದು ಹಾಕಲಾಗಿದ್ದು, ಈ ಹಿನ್ನೆಲೆ ರೆಡ್ಡಿ ಬಳಗದ ಆಪ್ತರ ಮಧ್ಯೆ ಕಾಳಗ ನಡೆದಿದೆ.

ಶುಭಕೋರಿದ್ದ ಬ್ಯಾನರ್​ನಲ್ಲಿ ಕಾಂಗ್ರೆಸ್ ಮುಖಂಡ ಎನ್.ಸೂರ್ಯನಾರಾಯಣರೆಡ್ಡಿ ಅವರ ಭಾವಚಿತ್ರ ಇದ್ದಿದ್ದಕ್ಕೆ , ಮಾಜಿ ಸಚಿವರೊಬ್ಬರ ಆಪ್ತರಾಗಿರುವ ಪ್ರಕಾಶ್​ ಬೆಂಬಲಿಗ ಬ್ಯಾನರ್​ಗೆ ಕಲ್ಲು ತೂರಾಟ ನಡೆಸಿ, ಬ್ಯಾನರ್ ಹರಿದು ಹಾಕಿದ್ದಾನೆ. ಈ ವೇಳೆ ಅಲ್ಲಿಗೆ ಆಗಮಿಸಿದ ಕಾಂಗ್ರೆಸ್​ ನಾಯಕರೊಬ್ಬರ ಬೆಂಬಲಿಗರು ಬ್ಯಾನರ್​ ಹರಿದ ವ್ಯಕ್ತಿಯ ಜೊತೆ ಕಾದಾಟಕ್ಕೆ ಇಳಿದಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ನಡುವೆ ಕಾಳಗ

ಈ ಘಟನೆ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಗಾಂಧಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Intro:ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿಬಳಗದ ಆಪ್ತರ ಕಾಳಗ
ಬಳ್ಳಾರಿ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಶುಭ ಕೋರಿ ಹಾಕಲಾಗಿದ್ದ ಬ್ಯಾನರ್ ಗೆ ಕಲ್ಲುತೂರಿ ಹರಿದು ಹಾಕಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ಮಧ್ಯೆ ಕಾಳಗ ನಡೆದಿರೋದು ಪ್ರಸಂಗವು ತಡ ವಾಗಿ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಮುಖಂಡ ಎನ್.ಸೂರ್ಯನಾರಾಯಣರೆಡ್ಡಿಯವ್ರ ಭಾವಚಿತ್ರವುಳ್ಳ ಸೂರ್ಯನಾರಾಯಣರೆಡ್ಡಿಯವ್ರು ಹಾಕಿದ್ದಾರೆಂಬ ಉದ್ದೇಶ ದೊಂದಿಗೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವ್ರ ಆಪ್ತರಾದ ಪ್ರಕಾಶ ಅವರ ಬೆಂಬಲಿಗರೊಬ್ಬರು ಮಹರ್ಷಿ ವಾಲ್ಮೀಕಿ ಜಯಂತಿ ಶುಭ ಕೋರಿದ ಬ್ಯಾನರ್ ಗೆ ಕಲ್ಲು ತೂರಾಟ ನಡೆಸಿದ್ದಾರೆ. ಆ ಬಳಿಕ ಬ್ಯಾನರ್ ಹರಿದು ಹಾಕಿರೊ ವಿಡಿಯೊ ವೈರಲ್ ಆಗಿದೆ.
ಬಳ್ಳಾರಿಯ ಗಾಂಧಿನಗರ ವಾಲ್ಮೀಕಿ ಹಾಸ್ಟೆಲ್ ಬಳಿ ನಿನ್ನೆಯ ದಿನ ತಡರಾತ್ರಿ ಈ ಘಟನೆಯು ನಡೆದಿದ್ದು, ಸರಿಯಾದ ಸಮಯಕ್ಕೆ ಗಾಂಧಿನಗರ ಠಾಣೆಯ ಪೋಲಿಸರ ಮಧ್ಯೆ ಪ್ರವೇಶಿಸಿದ್ದು, ಅದರಿಂದ ಭಾರೀ ಅನಾಹುತ ತಪ್ಪಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಗ ಪ್ರಕಾಶ ಅವರ ಕಡೆಯಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತದೆ. Body:ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ ಬೆಂಬಲಿಗರಿಂದ ಆರೋಪ ಸೂರ್ಯನಾರಾಯಣ ರೆಡ್ಡಿ ವಾಲ್ಮೀಕಿ ಜಯಂತಿ ಅಂಗವಾಗಿ ಶುಭಕೋರಿ ಹಾಕಿಸಿದ್ದ ಬ್ಯಾನರ್. ಈ ಘಟನೆ ಸಂಬಂಧ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೋಲಿಸರು. ಗಾಂಧಿ ನಗರ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು-ಪ್ರತಿ ದೂರು ದಾಖಲಾಗಿಲ್ಲ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_REDY_FOLLOWERS_KALAGA_7203310

KN_BLY_4e_REDY_FOLLOWERS_KALAGA_7203310

KN_BLY_4f_REDY_FOLLOWERS_KALAGA_7203310
Last Updated : Oct 16, 2019, 1:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.