ETV Bharat / state

ವಿಜಯ್​ ಪ್ರಕಾಶ್​ ಹಾಡಿಗೆ ಹೆಜ್ಜೆ ಹಾಕಿದ ಬಳ್ಳಾರಿ ಡಿಸಿ, ಎಸ್ಪಿ, ಸಂಸದ ಉಗ್ರಪ್ಪ, ಸಚಿವ ತುಕಾರಾಂ!

ಹಂಪಿ ಉತ್ಸವ 2019ನೇ ಸಾಲಿನ ಸಮಾರೋಪ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್​ ಪ್ರಕಾಶ್ ಪಾಲ್ಗೊಂಡಿದ್ದರು.

ವಿಜಯ್​ ಪ್ರಕಾಶ್
author img

By

Published : Mar 4, 2019, 1:25 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಉತ್ಸವ 2019ನೇ ಸಾಲಿನ ಸಮಾರೋಪ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್​ ಪ್ರಕಾಶ್ ಅವರ ಜೈಹೋ ಹಾಡಿಗೆ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ವಿ.ರಾಮ್ ಪ್ರಸಾದ್ ಮನೋಹರ ಕುಣಿದು ಕುಪ್ಪಳಿಸಿದರು.

ವಿಜಯ್​ ಪ್ರಕಾಶ್

ಜೊತೆಗೆ ವೈದ್ಯಕೀಯ ಸಚಿವ ಇ.ತುಕಾರಾಂ ಸಹ ಹೆಜ್ಜೆ ಹಾಕಿದರು.ಜೈಹೋ ಗೀತೆಗೆ ನೃತ್ಯ ಮಾಡಿ ಪೊಲೀಸ್ ಸಿಬ್ಬಂದಿಗೆ ಮತ್ತು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದರು.

ನಂತರ ರಸಮಂಜರಿ ತಂಡದ ಸದಸ್ಯ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್​ ಯಾವುದೋ ಎನ್ನುವ ಹಾಡಿಗೆ ವೇದಿಕೆಯ ಮೇಲೆ ಜಿಲ್ಲಾಧಿಕಾರಿ ಡಾ. ವಿ.ರಾಮ್ ಪ್ರಸಾದ್ ಮನೋಹರ್, ಜಿಲ್ಲಾ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್, ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ, ಸಂಸದ ವಿ.ಎಸ್.ಉಗ್ರಪ್ಪ ಹೆಜ್ಜೆ ಹಾಕಿ ಪ್ರೇಕ್ಷಕರ ಗಮನ ಸೆಳೆದರು.

ಈ ಸಮಯದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಹಂಪಿ ಉತ್ಸವ 2018- 2019 ನೇ ಸಾಲಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಹಾಡುಗಳು ಬಹಳ ಸಂತೋಷವನ್ನು ಉಂಟುಮಾಡಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯನಗರ ಸಾಮ್ರಾಜ್ಯದ ಮರು ನೆನಪು ಮಾಡಲು ವಿಜಯಪ್ರಕಾಶ್ ಹಾಡಲು ಬಂದಿದ್ದಾರೆ. ವಿಜಯನಗರಕ್ಕೆ ಮತ್ತು ವಿಜಯ ಪ್ರಕಾಶ್​ಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

Intro:Body:

vijay prakash

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.