ಬಳ್ಳಾರಿ: ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿಯೂ ಹಂಪಿ ಬೈ ಸ್ಕೈಗೆ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ಎರಡು ಹೆಲಿಕಾಪ್ಟರ್ಗಳು ಬಂದಿದ್ದು, ಒಂದು ಹಂಪಿ ಉತ್ಸವಕ್ಕೆ, ಮತ್ತೊಂದು ಆನೆಗುಂದಿ ಉತ್ಸವಕ್ಕೆ ತರಿಸಲಾಗಿದೆ.
ಹಂಪಿಯ ವಿಹಂಗಮ ನೋಟ, ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠ್ಠಲ ಟೆಂಪಲ್, ಲೋಟಸ್ ಮಹಲ್ ಸೇರಿದಂತೆ ವಿವಿಧ ಸ್ಮಾರಕಗಳು, ತುಂಗಾಭದ್ರಾ ನದಿ, ಬೆಟ್ಟ-ಗುಡ್ಡಗಳ ನೈಸರ್ಗಿಕ ಸೌಂದರ್ಯವನ್ನು ಆಗಸದಿಂದ ನೋಡುವುದರ ಮೂಲಕ ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಲಭಿಸಿದೆ.
2 ವರ್ಷದ ಮೇಲ್ಪಟ್ಟ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ 3,000 ಸಾವಿರ ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ದಿನಕ್ಕೆ 9ರಿಂದ 10 ಟ್ರಿಪ್ ವ್ಯವಸ್ಥೆ ಮಾಡಲಾಗಿದೆ. ಒಂದು ಟ್ರಿಪ್ನಲ್ಲಿ ಒಮ್ಮೆಗೆ 6 ಜನ ಹಂಪಿಯ ಸೌಂದರ್ಯವನ್ನು ಸವಿಯಬಹುದಾಗಿದೆ.
ಹಂಪಿ ಬೈ ದಿ ಸ್ಕೈ ಬೆಳಗ್ಗೆ 11 ಗಂಟೆಯಿಂದ ಸಂಜೆ 6ರವರೆಗೆ ಇರುತ್ತದೆ. ಒಂದು ಸುತ್ತಿಗೆ 8 ನಿಮಿಷದ ಕಾಲಮಿತಿ ನಿಗದಿ ಮಾಡಿದ್ದು, ಜನವರಿ 14ರವರೆಗೆ ಈ ಹಂಪಿ ಬೈ ದಿ ಸ್ಕೈ ನಡೆಯಲಿದೆ ಎಂದು ಹೆಲಿಕಾಪ್ಟರ್ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.