ಬಳ್ಳಾರಿ : ಶ್ರೀ ಕಾಗಿನೆಲೆ ಮಹಾಸಂಸ್ಥಾನ (ತಿಂಥಿಣಿ ಬ್ರಿಡ್ಜ್) ಕನಕ ಗುರುಪೀಠದ ವತಿಯಿಂದ ಜನವರಿ 12 ರಿಂದ 14ರವರೆಗೆ ಹಾಲುಮತ ಸಂಸ್ಕೃತಿ ವೈಭವ ಸಮಾರಂಭವನ್ನು ಆಚರಿಸಲಾಗುತ್ತದೆ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲುಮತ ಸಂಸ್ಕೃತಿ ವೈಭವ ಸಮಾರಂಭದ ವೇಳೆ ತಲಾ 50,000 ರೂ. ಮೊತ್ತದ ಪ್ರಶಸ್ತಿಗಳಾದ ಹಾಲುಮತ ಭಾಸ್ಕರ, ಸಿದ್ದಶ್ರೀ, ಕನಕ ರತ್ನ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಲಾಗುತ್ತದೆ ಎಂದರು.
ಇನ್ನು, ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಪಟ್ಟಿಯನ್ನು ಮಾಜಿ ಸಚಿವ ಹೆಚ್ ಎಂ ರೇವಣ್ಣ, ಬುಡಕಟ್ಟು ಅಧ್ಯಯನ ವಿಭಾಗ ಹಂಪಿ ವಿವಿ ಮುಖ್ಯಸ್ಥರಾದ ಆಯ್ಕೆ ಸಮಿತಿ ಅಧ್ಯಕ್ಷ ಕೆ ಎಂ ಮೇತ್ರೆ ತಿಳಿಸಿದರು.
ಪ್ರಶಸ್ತಿಗಳು :
1.ಹಾಲುಮತ ಭಾಸ್ಕರ ಪ್ರಶಸ್ತಿ : ಡಾ.ಹೆಚ್. ಜೆ ಲಕ್ಕಪ್ಪಗೌಡ, ಮೈಸೂರು.
2.ಸಿದ್ದಶ್ರೀ ಪ್ರಶಸ್ತಿ : ಎಂ.ಎಸ್ ಹೆಳವರ್, ಕಡೂರು
3.ಕನಕ ರತ್ನ ಪ್ರಶಸ್ತಿ : ಸುಭದ್ರಮ್ಮ ಗಂಡ ಕಾಡಮಂಚಪ್ಪ, ಗೊಸೆಲೇರು.