ETV Bharat / state

ರೂಲ್ಸ್​ ಬ್ರೇಕ್​ ಮಾಡಿಲ್ಲ, ಜನ ನನ್ನ ಹೆದರಿಸಿ ಮಾಸ್ಕ್​ ತೆಗೆಸಿ ಸೆಲ್ಫಿ ತೆಗೆದುಕೊಳ್ಳುತ್ತಾರೆ : ಶ್ರೀರಾಮುಲು - ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ

ನಾನು ಯಾವತ್ತೂ ಸರ್ಕಾರಿ ರೂಲ್ಸ್ ಬ್ರೇಕ್ ಮಾಡಿದೋನೇ ಅಲ್ಲ. ನನಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನನ್ನ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ‌. ಹೀಗಾಗಿ, ನನ್ನನ್ನೂ ಒಳಗೊಂಡಂತೆ ಐದು ಮಂದಿಯುಳ್ಳ ತಂಡದೊಂದಿಗೆ ಚುನಾವಣಾ ಪ್ರಚಾರಕ್ಕೆ‌ ಇಳಿದಿರುವೆ..

b-sriramulu
ಸಚಿವ ಬಿ.ಶ್ರೀರಾಮುಲು
author img

By

Published : Apr 23, 2021, 7:49 PM IST

Updated : Apr 23, 2021, 8:01 PM IST

ಬಳ್ಳಾರಿ: ನಾನು ಯಾವುದಾದರೊಂದು ಬಡಾವಣೆಗೆ ಹೋದಾಗ ನನ್ನ ನೋಡಿದ ತಕ್ಷಣವೇ ಜನರೇ ಮುಗಿ ಬೀಳುತ್ತಾರೆ. ಸೆಲ್ಫಿ ತೆಗೆದುಕೊಳ್ಳುವಾಗ ಮಾಸ್ಕ್ ತೆಗೀರಿ ಅಂತ ನನ್ನನ್ನೇ ಜಬರ್​​ದಸ್ತ್​ ಮಾಡ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬಾಲಿಶ ಹೇಳಿಕೆ ನೀಡಿದ್ದಾರೆ.

ಸಚಿವ ಬಿ.ಶ್ರೀರಾಮುಲು

ನಗರದ ಅವಂಭಾವಿ ಪ್ರದೇಶದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಮೃತ ಮಹೇಶರೆಡ್ಡಿ ಕುಟುಂಬಕ್ಕೆ ನಿರ್ಮಿಸಲಾಗಿದ್ದ ಬಿ. ಶ್ರೀರಾಮುಲು ನಿಲಯದ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.

ನಾನು ಯಾವತ್ತೂ ಸರ್ಕಾರಿ ರೂಲ್ಸ್ ಬ್ರೇಕ್ ಮಾಡಿದೋನೇ ಅಲ್ಲ. ನನಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನನ್ನ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ‌. ಹೀಗಾಗಿ, ನನ್ನನ್ನೂ ಒಳಗೊಂಡಂತೆ ಐದು ಮಂದಿಯುಳ್ಳ ತಂಡದೊಂದಿಗೆ ಚುನಾವಣಾ ಪ್ರಚಾರಕ್ಕೆ‌ ಇಳಿದಿರುವೆ.

ಆದರೆ, ನಾನು ಹೋದ ಕಡೆಯೆಲ್ಲಾ ಐದು ಜನಕ್ಕಿಂತ ಜಾಸ್ತಿ ಬರಬೇಡಿ ಅಂತ ಹೇಳ್ತೀನಿ. ಜನಗಳೇ ನುಗ್ಗಿ ನುಗ್ಗಿ ಬರ್ತಾರೆ.‌ ನಾನು ಎಷ್ಟು ತಡೆಯಲು ಪ್ರಯತ್ನಪಟ್ಟರೂ ಜನ ಬರ್ತಾರೆ. ಮುಂದೆ ಹೀಗಾಗದಂತೆ ನಾನು ನೋಡಿಕೊಳ್ಳುವೆ ಎಂದು ಸಬೂಬು ಹೇಳಿದ್ದಾರೆ.

Last Updated : Apr 23, 2021, 8:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.