ETV Bharat / state

ಚಳಿಯಲ್ಲಿ ನಡುಗುತ್ತಿದ್ದವರಿಗೆ ಹೊದಿಕೆ ನೀಡಿ ವಿಭಿನ್ನ ವರ್ಷಾಚರಣೆ - ಬಳ್ಳಾರಿ ನಗರದ ಕಾಳಮ್ಮ ಬೀದಿ

ಡಿಸೆಂಬರ್ 31ರಂದು ಗ್ರಾಮೀಣ ಠಾಣೆಯ ಪಿಎಸ್​ಐ ವೈ.ಎಸ್.ಹನುಮಂತಪ್ಪ ನೇತೃತ್ವದ ತಂಡವು ಬಳ್ಳಾರಿ ನಗರದ ಕಾಳಮ್ಮ ಬೀದಿ, ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಗಡಿಗಿ ಚೆನ್ನಪ್ಪ ವೃತ್ತ, ಹಳೆ ಬಸ್ ನಿಲ್ದಾಣ, ಕನಕ ದುರ್ಗಮ್ಮ ದೇಗುಲ, ಎಸ್.ಪಿ ವೃತ್ತದ ಫುಟ್​​​ಪಾತ್​​ನಲ್ಲಿ ಹೊದಿಕೆ ಇಲ್ಲದೇ ಮಲಗಿರುವವರಿಗೆ ಹೊದಿಕೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

give-a-blanket-to-those-who-are-chilling-in-cold
ಚಳಿಯಲ್ಲಿ ನಡುಗುತ್ತಿದ್ದವರಿಗೆ ಹೊದಿಕೆ ನೀಡಿ ವಿಭಿನ್ನ ವರ್ಷಾಚರಣೆಚಳಿಯಲ್ಲಿ ನಡುಗುತ್ತಿದ್ದವರಿಗೆ ಹೊದಿಕೆ ನೀಡಿ ವಿಭಿನ್ನ ವರ್ಷಾಚರಣೆ
author img

By

Published : Jan 1, 2021, 10:54 PM IST

ಬಳ್ಳಾರಿ: ಹೊಸ ವರ್ಷದಂದು ಬೀದಿಯಲ್ಲಿ ಮಲಗಿದ್ದ ಮಂದಿಗೆ ಬೆಡ್​ಶೀಟ್​ ವಿತರಿಸಿ ವಿಭಿನ್ನ ರೀತಿಯಲ್ಲಿ ವರ್ಷಾಚರಣೆ ಮಾಡಲಾಗಿದೆ. ಇಲ್ಲಿನ ಸನ್ಮಾರ್ಗ ಗೆಳೆಯರ ಬಳಗದಿಂದ ಕೊರೆಯುವ ಚಳಿಯಲ್ಲಿ ಮಲಗಿದ್ದವರಿಗೆ ಹೊದಿಕೆ ನೀಡಲಾಗಿದೆ.

ಡಿಸೆಂಬರ್ 31ರಂದು ಗ್ರಾಮೀಣ ಠಾಣೆಯ ಪಿಎಸ್​ಐ ವೈ.ಎಸ್.ಹನುಮಂತಪ್ಪ ನೇತೃತ್ವದ ತಂಡವು ಬಳ್ಳಾರಿ ನಗರದ ಕಾಳಮ್ಮ ಬೀದಿ, ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಗಡಿಗಿ ಚೆನ್ನಪ್ಪ ವೃತ್ತ, ಹಳೆ ಬಸ್ ನಿಲ್ದಾಣ, ಕನಕ ದುರ್ಗಮ್ಮ ದೇಗುಲ, ಎಸ್.ಪಿ ವೃತ್ತದ ಫುಟ್​​​​​ಪಾತ್​​ನಲ್ಲಿ ಹೊದಿಕೆ ಇಲ್ಲದೇ ಮಲಗಿರುವವರಿಗೆ ಹೊದಿಕೆ ವಿತರಿಸಿ ಮಾನವೀಯತೆ ಮೆರೆದಿದ್ದಲ್ಲದೆ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಈ ವೇಳೆ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ಲು ಬಿ.ಚಂದ್ರಶೇಖರ ಆಚಾರ್, ಖಜಾಂಚಿ ತೇಜಾ ರಘು ರಾಮರಾವ್, ಹಾಸ್ಯ ಕಲಾವಿದ ಎ.ಎರ್ರಿಸ್ವಾಮಿ, ಮುಖಂಡರಾದ ಸತ್ಯನಾರಾಯಣ ಮುಂತಾದವರು ಹಾಜರಿದ್ದರು.

ಓದಿ:ಪಕ್ಷದಲ್ಲಿ ನಡೆಯುತ್ತಿರುವ ಸಿಎಂ ಅಭ್ಯರ್ಥಿ ಚರ್ಚೆ ಅಪ್ರಸ್ತುತ: ಸತೀಶ್ ಜಾರಕಿಹೊಳಿ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.