ETV Bharat / state

ಸಿಲಿಂಡರ್ ಸ್ಫೋಟ: ಪ್ರಾಣಾಪಾಯದಿಂದ ಪಾರಾದ ಗುಡಿಸಲು ವಾಸಿಗಳು

ಹಗರಿಬೊಮ್ಮನಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಮೊದಲು ನಿಧಾನವಾಗಿ ಬೆಂಕಿ ಹೊತ್ತಿದ ಪರಿಣಾಮ ಗುಡಿಸಲಿನಿಂದ ಮನೆ ಮಂದಿಯೆಲ್ಲಾ ಓಡೋಡಿ ಬಂದಿದ್ದಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

blast
blast
author img

By

Published : Apr 28, 2020, 10:23 AM IST

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮದ ಗುಡಿಸಲು ಮನೆಯೊಳಗಿದ್ದ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಇಡೀ ಗುಡಿಸಲೇ ಸುಟ್ಟುಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಿಲಿಂಡರ್ ಸ್ಫೋಟ

ಬಿಸಿಲಿನ ತಾಪಮಾನ‌ ಹೆಚ್ಚಾದ ಹಿನ್ನೆಲೆಯಲ್ಲಿ ಈ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗ್ತಿದೆ. ನಿಧಾನವಾಗಿ ಬೆಂಕಿ ಹೊತ್ತಿದ ಪರಿಣಾಮ ಗುಡಿಸಲಿನಿಂದ ಹೊರಗೆ ಮನೆ ಮಂದಿಯೆಲ್ಲಾ ಓಡೋಡಿ ಬಂದ್ರು. ಅವರು ಹೊರಬಂದ ಕೆಲ ಕ್ಷಣಗಳಲ್ಲೇ ಸಿಲಿಂಡರ್ ಸ್ಫೋಟಗೊಂಡಿದೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ‌. ನೋಡನೋಡುತ್ತಲೇ ಸಿಲಿಂಡರ್ ಸ್ಫೋಟಗೊಂಡಿದೆ.

gas leak and blast
ಪೊಲೀಸರಿಂದ ಪರಿಶೀಲನೆ

ಈ ಗುಡಿಸಲು ಕಡಲಬಾಳು ಗ್ರಾಮದ ಶಿವಮ್ಮ-ಕೊಟ್ರೇಶ ಎಂಬ ದಂಪತಿಗೆ ಸೇರಿದೆ. ಸಿಲಿಂಡರ್ ಸ್ಫೋಟದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.