ETV Bharat / state

2ನೇ ಬಾರಿಗೆ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಸಚಿವ ಆನಂದಸಿಂಗ್ ನಾಂದಿ‌: ಶಾಸಕ ಗಾಲಿ ಸೋಮಶೇಖರರೆಡ್ಡಿ ವ್ಯಂಗ್ಯ

ಇದೀಗ ಪ್ರತ್ಯೇಕ ವಿಜಯನಗರ ಜಿಲ್ಲೆ ಇಬ್ಭಾಗಕ್ಕೆ ಕಾರಣರಾದ ಸಚಿವ ಆನಂದಸಿಂಗ್ ಅವರು, ಮುಂದೊಂದು ದಿನ ಹಂಪಿಯನ್ನೇ ಒಂದು ಜಿಲ್ಲೆಯನ್ನಾಗಿಸಬೇಕು ಎಂಬ ವಾದ ಮಂಡಿಸೋದರಲ್ಲೂ ಕೂಡ ನಿಸ್ಸೀಮರಾಗಿದ್ದಾರೆ ಎಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಛೇಡಿಸಿದರು.

gali somashekar reddy
ಶಾಸಕ ಗಾಲಿ ಸೋಮಶೇಖರರೆಡ್ಡಿ
author img

By

Published : Feb 10, 2021, 1:37 PM IST

ಬಳ್ಳಾರಿ: ಈಗಾಗಲೇ ವಿಜಯನಗರ ಸಾಮ್ರಾಜ್ಯದ ಪತನ ಒಂದು ಬಾರಿಗೆ ಆಗಿಬಿಟ್ಟಿದೆ. ಈಗ ಮತ್ತೊಮ್ಮೆ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಸಚಿವ ಆನಂದ ಸಿಂಗ್ ನಾಂದಿ ಹಾಡಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ವ್ಯಂಗ್ಯವಾಡಿದ್ದಾರೆ.

ಜಿಲ್ಲೆ ವಿಭಜನೆಗೆ ಶಾಸಕ ಗಾಲಿ ಸೋಮಶೇಖರರೆಡ್ಡಿ ಅಸಮಾಧಾನ

ಈ ಸುದ್ದಿಯನ್ನೂ ಓದಿ: ವಿಜಯನಗರ ಜಿಲ್ಲೆ ಘೋಷಣೆಯಲ್ಲಿ ಜನಪ್ರತಿನಿಧಿಗಳ ಮಾತಿಗೆ ಕಿಮ್ಮತ್ತೇ ಇಲ್ಲ: ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿ ಮಹಾನಗರ ಪಾಲಿಕೆ ಶಾಸಕರ ಕಚೇರಿಯಲ್ಲಿಂದು ಶಾಸಕ ಸೋಮಶೇಖರರೆಡ್ಡಿ ಅವರು ಮಾಧ್ಯಮಗಳೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ವಿಜಯನಗರ ಸಾಮ್ರಾಜ್ಯದ ಪತನ ಆಗಿ ಹೋಗಿದೆ‌.‌ ಇದೀಗ, ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿಸಿಕೊಂಡ ಸಚಿವ ಆನಂದಸಿಂಗ್ ಅವರು, ಬಹು ವಿಸ್ತಾರಗೊಂಡಿದ್ದ ಈ ಜಿಲ್ಲೆಯನ್ನು ಸಣ್ಣದಾಗಿಸಿ, ಮತ್ತೊಮ್ಮೆ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣರಾಗಿದ್ದಾರೆ. ಇಂತಹವರಿಗೆ ಈ ಜಿಲ್ಲೆಯ ಉಸ್ತುವಾರಿ ವಹಿಸಬಾರದೆಂದು ಬಳ್ಳಾರಿ ಜಿಲ್ಲೆಯ 5 ತಾಲೂಕಿನ ಶಾಸಕರ ನಿಯೋಗ ತೆರಳಿ, ಸಿಎಂ ಬಿಎಸ್​​ವೈಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.