ಬಳ್ಳಾರಿ : ಇಂದು ಬೆಳಿಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ಶಾಸಕ ಜಿ. ಸೋಮಶೇಖರ್ ರೆಡ್ಡಿ ನಗರದ ಸ್ವಚ್ಛತೆ ಕುರಿತಂತೆ ನಗರ ಪ್ರದಕ್ಷಿಣೆ ಹಾಕಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ಕಾರ್ಯವೈಖರಿ ವೀಕ್ಷಿಸಿದರು.
ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಜನರ ಕುಂದು ಕೊರತೆಗಳನ್ನು ಆಲಿಸಿ ಪರಿಸ್ಥಿತಿ ಸುಧಾರಿಸುವ ಭರವಸೆ ನೀಡಿದರು. ಸ್ವಚ್ಛತೆ ಕಾರ್ಯದ ಕುರಿತಾಗಿ ನಗರದ ಪ್ರತಿ ವಾರ್ಡ್ಗಳಲ್ಲಿ ಎಷ್ಟು ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ? ಕಸ ವಿಲೇವಾರಿ ಹೇಗೆ ಮಾಡುತ್ತಿದ್ದಿರಾ? 92 ಜನ ಕಾರ್ಮಿಕರು ಎಲ್ಲಿದ್ದಾರೆ? ಎಂದು ಆರೋಗ್ಯ ಅಧಿಕಾರಿ ಹನುಮಂತಪ್ಪರವರಿಗೆ ಪ್ರಶ್ನೆ ಮಾಡಿದರು.
ಪೊಲೀಸ್ ಸಿಬ್ಬಂದಿಗೆ ಕ್ಲಾಸ್
ನಗರದ ಟ್ರಾಫಿಕ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಹೊರಕರೆದ ಶಾಸಕರು,ಬೆಂಗಳೂರಿಗೆ ತೆರಳುವ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ, ಬಸ್ ಹಾಗೂ ಭಾರಿ ವಾಹನಗಳನ್ನು ನಿಲ್ಲಿಸದಂತೆ ಸೂಚನೆ ನೀಡಿದರು. ಈ ರೀತಿಯಾಗಿ ರಸ್ತೆಗಳ ಮೇಲೆ ವಾಹನಗಳು ನಿಲ್ಲಿಸಿದ್ದರಿಂದ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡಲು ತೊಂದರೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಮೌತ್ಕರ್ ಶ್ರೀನಿವಾಸ್ ರೆಡ್ಡಿ, ಮಲ್ಲನಗೌಡ, ವೀರಶೇಖರ್ ರೆಡ್ಡಿ ಶಾಸಕರ ಜೊತೆಗೆ ಹಾಜರಿದ್ದರು.