ETV Bharat / state

ಜಿ-20: ಆಫ್ರಿಕನ್ ಯೂನಿಯನ್ ಸೇರ್ಪಡೆಗೆ ಸದಸ್ಯ ರಾಷ್ಟ್ರಗಳ ಬೆಂಬಲ- ಅಮಿತಾಬ್ ಕಾಂತ್ - ಲೋಕ ಸಭೆ

ಜಿ-20 ಸದಸ್ಯ ರಾಷ್ಟ್ರಗಳ ಸಾಲಿಗೆ ಆಫ್ರಿಕನ್ ಯೂನಿಯನ್ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದ್ದ ಪ್ರಸ್ತಾವನೆಗೆ ಎಲ್ಲ ಸದಸ್ಯ ರಾಷ್ಟ್ರಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ ಎಂದು ಅಮಿತಾಬ್ ಕಾಂತ್ ತಿಳಿಸಿದರು.

Sherpa Chief Amitabh Kant
ಭಾರತೀಯ ಶೆರ್ಪಾ ಮುಖ್ಯಸ್ಥ ಅಮಿತಾಬ್ ಕಾಂತ್
author img

By

Published : Jul 16, 2023, 9:01 AM IST

Updated : Jul 16, 2023, 9:07 AM IST

ವಿಜಯನಗರ: ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಗುಂಪಿಗೆ ಆಫ್ರಿಕನ್ ಯೂನಿಯನ್ ಅನ್ನೂ ಕೂಡಾ ಸೇರ್ಪಡೆಗೊಳಿಸಲು ಪ್ರಸ್ತಾವನೆ ಮಂಡಿಸಿದ್ದರು. ಈ ಪ್ರಸ್ತಾವನೆಗೆ 3ನೇ ಶೆರ್ಪಾ ಸಭೆಯಲ್ಲಿ ಸದಸ್ಯ ರಾಷ್ಟ್ರಗಳಿಂದ ಸಹಮತದ ಸಂಪೂರ್ಣ ಬೆಂಬಲ ಸಿಕ್ಕಿದೆ ಎಂದು ಜಿ-20 ಭಾರತೀಯ ಶೆರ್ಪಾ ಮುಖ್ಯಸ್ಥ ಅಮಿತಾಬ್ ಕಾಂತ್ ಹೇಳಿದ್ದಾರೆ.

ಹಂಪಿ ಎವಾಲ್ವೋ ಬ್ಯಾಕ್ ಖಾಸಗಿ ರೆಸಾರ್ಟ್​ನಲ್ಲಿ ಶನಿವಾರ ನಡೆದ ಮೂರನೇ ದಿನದ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಯೂರೋಪ್ ಯೂನಿಯನ್ ರಾಷ್ಟ್ರಗಳು ಜಿ-20 ಸದಸ್ಯ ರಾಷ್ಟ್ರಗಳಾಗಿವೆ. ಆಫ್ರಿಕನ್ ರಾಷ್ಟ್ರಗಳ ಸೇರ್ಪಡೆಯಾಗುವುದರಿಂದ ಜಿ-20ಗೆ ಪ್ರಪಂಚದಲ್ಲಿ ಹೆಚ್ಚಿನ ರಾಷ್ಟ್ರಗಳು ಸೇರ್ಪಡೆಯಾಗಿ ದೊಡ್ಡ ಆರ್ಥಿಕ ವೇದಿಕೆಯಾಗಲಿದೆ. ಸೆಪ್ಟೆಂಬರ್ 9 ಹಾಗೂ 10ರಂದು ದೆಹಲಿಯಲ್ಲಿ ನಡೆಯಲಿರುವ ಜಿ-20 ನಾಯಕರ ಅಂತಿಮ ಸಭೆಯಲ್ಲಿ ಕೈಗೊಳ್ಳಲಿರುವ ಒಪ್ಪಂದದ ಪೂರ್ಣ ಪ್ರಮಾಣದ ಕರಡು ಪ್ರತಿ ರೂಪಿಸುವಲ್ಲಿ ಹಂಪಿಯಲ್ಲಿ ನಡೆಯುತ್ತಿರುವ ಶೆರ್ಪಾ ಸಭೆ ಯಶಸ್ವಿಯಾಗಿದೆ. ಸಭೆಯಲ್ಲಿ ಭಾರತ ಹಲವಾರು ಪ್ರಸ್ತಾವನೆಗಳನ್ನು ಸದಸ್ಯ ರಾಷ್ಟ್ರಗಳ ಮುಂದಿಟ್ಟಿದೆ. ಈ ಪ್ರಸ್ತಾವನೆಗಳು ಜಾಗತಿಕವಾಗಿ ಕಾರ್ಯಸೂಚಿಗಳನ್ನು ರೂಪಿಸುವಲ್ಲಿ ಹಾಗೂ ಪ್ರಸ್ತುತ ಜಾಗತಿಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ವದ್ದು. ಜಿ-20 ರಾಷ್ಟ್ರಗಳ ಸದಸ್ಯರು ಭಾರತ ರೂಪಿಸಿದ ಕರಡು ಪ್ರತಿಗೆ ರಚನಾತ್ಮಕ ಸಲಹೆ, ಸೂಚನೆ ನೀಡುವುದರೊಂದಿಗೆ ತಾತ್ವಿಕ ಒಪ್ಪಿಗೆ ಸೂಚಿಸಿವೆ. ಭಾರತದ ಕ್ರಿಯಾತ್ಮಕ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಕಾಂತ್ ಮಾಹಿತಿ ನೀಡಿದರು.

ಈ ಹಿಂದೆ ನಡೆದ ಜಿ-20 ರಾಷ್ಟ್ರಗಳಲ್ಲಿ ಮೂಡಿಬಂದ ಒಪ್ಪಂದಗಳ ಘೋಷಣೆಗಳಿಗಿಂತಲೂ ಭಾರತದ ಘೋಷಣೆ ಮಹತ್ವಾಕಾಂಕ್ಷಿಯಾಗಿದೆ. ಈ ಘೋಷಣೆಗಳು ಅಭಿವೃದ್ಧಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಬದಲಾವಣೆಗೆ ಸಹಕಾರಿ. ಇದು ಜಿ-20 ಶೃಂಗ ಸಭೆಯ ಮುಖ್ಯ ಆಶಯವೂ ಆಗಿದೆ ಎಂದು ತಿಳಿಸಿದರು. ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಗಮನದಲ್ಲಿರಿಸಿಕೊಂಡು ಆರ್ಥಿಕತೆಯ ಅಂತರ ಕಡಿಮೆ ಮಾಡುವುದು, ಅಂತಾರಾಷ್ಟ್ರೀಯ ಸಾಲ ಮರುಪಾವತಿ, ವಿವಿಧ ರಾಷ್ಟ್ರಗಳ ನಡುವಿನ ಹಣಕಾಸು ಸಂಸ್ಥೆಗಳ ಸ್ಥಾಪನೆ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆೆ ನೀಡಲಾಗುತ್ತಿದೆ. ಮಾನವ ಕಲ್ಯಾಣ, ಅಂತಾರಾಷ್ಟ್ರೀಯ ವ್ಯವಹಾರ, ಸಾರ್ವಜನಿಕ ಮೂಲಭೂತ ಸೌಕರ್ಯದ ಡಿಜಿಟಲೀಕರಣದ ಜೊತೆಗೆ ಆರ್ಥಿಕ ವ್ಯವಹಾರಗಳ ಡಿಜಿಟಲೀಕರಣಗೊಳಿಸಿ ಆರ್ಥಿಕತೆಯ ಲಾಭ ಎಲ್ಲ ಜನರಿಗೂ ತಲುಪುವಂತೆ ಮಾಡಲು ಶ್ರಮಿಸಲಾಗುತ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಶಾಂತಿ, ಭಯೋತ್ಪಾದನೆ ನಿಗ್ರಹ, ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ತಡೆ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ವಿವರ ಒದಗಿಸಿದರು.

ಹಸಿವು ಹಾಗೂ ಅಪೌಷ್ಟಿಕತೆ ಹೋಗಲಾಡಿಸುವುದು, ಸಾರ್ವತ್ರಿಕ ಸ್ವಾಸ್ಥ್ಯ ರಕ್ಷಣೆ, ಕೋವಿಡ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ, ಗುಣಮಟ್ಟದ ಶಿಕ್ಷಣ ನೀಡುವ ಕುರಿತಾದ ಪ್ರಮುಖ ವಿಷಯಗಳು, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಕ್ರಮಗಳ ಕುರಿತು ಶೆರ್ಪಾ ಸಭೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮುಕ್ತ ಜಾಗತಿಕ ವಹಿವಾಟು, ಸುಸ್ಥಿರ ಅಭಿವೃದ್ಧಿ, ಮುಂದಿನ ಜನಾಂಗದ ದೃಷ್ಟಿಯಿಂದ ಆಧುನಿಕ ನಗರಗಳ ನಿರ್ಮಾಣ, ಜಾಗತಿಕ ಆರ್ಥಿಕ ಸಹಕಾರ, ಜಾಗತಿಕ ವಹಿವಾಟು ಹಾಗೂ ಕೊಂಡುಕೊಳ್ಳುವಿಕೆ ಕುರಿತು ಅಂತಾರಾಷ್ಟ್ರೀಯ ಕಾನೂನು, ಭ್ರಷ್ಟಾಚಾರ ಹೋಗಲಾಡಿಸಲು ಕ್ರಮಗಳ ಕುರಿತು ಯೋಜನೆ ರೂಪಿಸಲಾಗಿದೆ. ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಕ್ರಿಪ್ಟೋ ಕರೆನ್ಸಿ ಕುರಿತು ರೂಪುರೇಷೆ, ತೆರಿಗೆ ಸೇರಿದಂತೆ ಹಲವಾರು ವಿಷಯಗಳನ್ನು ಶೆರ್ಪಾ ಸಭೆಯಲ್ಲಿ ಸರಳೀಕರಣಗೊಳಿಸಲು ಚರ್ಚಿಸಲಾಗಿದೆ. ಸುಸ್ಥಿರ ಅಭಿವೃದ್ಧಿಗಾಗಿ ಹಸಿರು ಒಪ್ಪಂದ, ಹವಾಮಾನ ಆರ್ಥಿಕತೆ, ನೀಲಿಸಾಗರ ಆರ್ಥಿಕತೆ, ಪರಿಸರ ಮೇಲೆ ಪ್ಲಾಸ್ಟಿಕ್‌ನಿಂದಾಗುವ ಮಾಲಿನ್ಯ ನಿಯಂತ್ರಣ, ಹವಾಮಾನ ವೈಪರೀತ್ಯ, ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಯೋಜನೆಗಳನ್ನು ರೂಪಿಸಲಾಗುವುದು.

ತಂತ್ರಜ್ಞಾನ ವಿನಿಮಯ: ಸಾರ್ವಜನಿಕ ಮೂಲಭೂತ ಸೌಕರ್ಯಗಳ ಡಿಜಿಟಲೀಕರಣ ಮಾಡುವ ಕ್ರಿಯಾ ಯೋಜನೆಗೆ ಅಂತಿಮ ರೂಪ ನೀಡಲಾಗುತ್ತದೆ. ಕೃತಕ ಬುದ್ದಿಮತ್ತೆಯನ್ನು (ಎಐ) ಅಳವಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಚರ್ಚಿಸಲಾಗಿದೆ. ಲಿಂಗ ಸಮಾನತೆ, ಭಯೋತ್ಪಾದನೆಯ ವಿರುದ್ಧ ಹೋರಾಟ, ಅಂತಾರಾಷ್ಟ್ರೀಯ ಶಾಂತಿ ಸ್ಥಾಪನೆಗೆ ಶೆರ್ಪಾ ಮಹತ್ವ ನೀಡಿದೆ ಎಂದು ಅಮಿತಾಬ್ ಕಾಂತ್‌ ವಿವರಿಸಿದರು.

ಹಂಪಿ ನಮ್ಮೆಲ್ಲರಿಗೂ ಗರ್ವ: ಹೆಚ್​ ಕೆ ಪಾಟೀಲ್... ಹಂಪಿಯಲ್ಲಿ ಶೆರ್ಪಾ ಸಭೆಯ ಬಳಿಕ ಸಂಜೆ ವಿಜಯವಿಠಲ ದೇವಸ್ಥಾನದ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ರಾಜ್ಯ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿದರು. ಹಂಪಿಯಲ್ಲಿ ಶೆರ್ಪಾ ಸಭೆ ನಡೆಯುತ್ತಿರುವುದು ಜಗತ್ತಿಗೆ ಹಂಪಿಯನ್ನು ಪರಿಚಯಿಸಿದಂತೆ. ಸಾಂಸ್ಕೃತಿಕ ರಾಜಧಾನಿ ಹಂಪಿ ನಮಗೆಲ್ಲರಿಗೂ ಗರ್ವ ಹಾಗೂ ಅಭಿಮಾನ. ಈ ಅದ್ಭುತ ಪ್ರದೇಶವನ್ನು ನೋಡದಿದ್ದರೆ ಜೀವನದಲ್ಲಿ ಏನೋ ಒಂದು ಕಳೆದುಕೊಂಡಂತೆ ಎಂದರು.

ಶೆರ್ಪಾ ಸಭೆಯಿಂದಾಗಿ ಜಗತ್ತಿನಲ್ಲಿ ಹಂಪಿ ಹೆಚ್ಚು ಪ್ರಚಲಿತವಾಗಲಿದೆ. ಹಂಪಿಗೆ ಹೆಚ್ಚು ಒತ್ತು ಕೊಡಬೇಕು ಹಾಗೂ ಶೆರ್ಪಾ ಪ್ರತಿನಿಧಿಗಳ ಅನಿಸಿಕೆ ಮತ್ತು ಅಭಿಪ್ರಾಯಗಳು ಮುಂದಿನ ದಿನಗಳಲ್ಲಿ ಹಂಪಿಯ ಅಭಿವೃದ್ಧಿಗೆ ಇನ್ನಷ್ಟು ಕಾರಣವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: Opposition partys meeting: ಜು.18 ರಂದು ತಾಜ್ ವೆಸ್ಟೆಂಡ್​​ನಲ್ಲಿ ವಿಪಕ್ಷಗಳ ಸಭೆ, ಸಿದ್ಧತೆ ವೀಕ್ಷಿಸಿದ ಕಾಂಗ್ರೆಸ್​ ನಾಯಕರು

Last Updated : Jul 16, 2023, 9:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.