ಬಳ್ಳಾರಿ: ತಾಲೂಕಿನ ಚಿಲಗೋಡು ಗ್ರಾಮದ ಯೋಧನ ಅಂತ್ಯ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
![ಬಳ್ಳಾರಿಯಲ್ಲಿ ಅಪಘಾತ ಸಂಭವಿಸಿ ಯೋಧ ಸಾವು , soldier who died in a road accident](https://etvbharatimages.akamaized.net/etvbharat/prod-images/5162171_249_5162171_1574589483166.png)
ಮೌನೇಶ್ ಬಡಿಗೇರ್ (26) ಮೃತ ಯೋಧ. ಶುಕ್ರವಾರ ರಾತ್ರಿ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಬಳಿಯ ರಸ್ತೆಯಲ್ಲಿ ಹೊಸಪೇಟೆ ಕಡೆಯಿಂದ ಬೈಕ್ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಡಿಗೇರ್ ಸೇನೆಗೆ ಸೇರಿ 9 ವರ್ಷಗಳಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ 9 ತಿಂಗಳುಗಳಿಂದ ಸೇವೆ ಸಲ್ಲಿಸುತ್ತಿದ್ದರು. ರಜೆಯ ಮೇಲೆ ಊರಿಗೆ ಬಂದಿದ್ದ ಮೌನೇಶ್ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.