ಬಳ್ಳಾರಿ : ಕೋವಿಡ್-19 ಎರಡನೇ ಅಲೆಯಿಂದ ನಗರದ ಒಪಿಡಿ ಆಸ್ಪತ್ರೆಯಲ್ಲಿ ತುಂಬಾ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಹೀಗಾಗಿ, ಗೆಳೆಯರ ಬಳಗದ ನೇತೃತ್ವದಲ್ಲಿ ಬಡ ಜನರಿಗೆ, ರೋಗಿಯ ಸಹಾಯಕರಿಗೆ ಉಚಿತ ಊಟ, ನೀರು ಮತ್ತು ಹಣ್ಣು ವಿತರಣೆ ಮಾಡಲಾಯಿತು.
ನಗರದ ವಿಮ್ಸ್ ಆವರಣದಲ್ಲಿರುವ ಹಸಿದವರಿಗೆ ಮಧ್ಯಾಹ್ನದ ಊಟ, ಹಣ್ಣುಗಳನ್ನು ಲಾಕ್ಡೌನ್ ಮುಗಿಯುವವರೆಗೆ (ಅಂದರೆ ನಾಳೆಯಿಂದ ದಿನಾಂಕ 08-05-2021ರಿಂದ 24-05-2021ರವರೆಗೆ) ಸ್ನೇಹಿತರ ಸಹಕಾರದೊಂದಿಗೆ ವಿತರಿಸಲಾಗುತ್ತದೆ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದರು.
ಈ ಹಿಂದೆ ಇದೇ ಒಪಿಡಿ ಆವರಣದಲ್ಲಿ 13 ದಿನಗಳ ಕಾಲ ಲಾಕ್ಡೌನ್ ಮಾಡಿದ ಸಂದರ್ಭದಲ್ಲಿ 500 ಜನರಿಗೆ ಪ್ರತಿದಿನ ಊಟ, ಹಣ್ಣು ವಿತರಣೆ ಮಾಡಿದ್ದರು.
ಈ ಸಮಯದಲ್ಲಿ ಗೆಳೆಯರ ಬಳಗದ ಸ್ನೇಹಿತರಾದ ಓಂ ಪ್ರಕಾಶ್, ಗೋವಿಂದರೆಡ್ಡಿ, ಅಜಯ್, ನಾಗರಾಜ್, ಹಿತೇಶ್, ಸಾಯಿ, ರಾಜು, ರುದ್ರ, ರಾಮು ಮತ್ತು ಧನಶೇಖರ್ ಮತ್ತಿತರರಿದ್ದರು.
ಓದಿ: ಸಿಎಂ ಬಿಎಸ್ವೈಗೆ ಕರೆ ಮಾಡಿ ಕೋವಿಡ್ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ