ಬಳ್ಳಾರಿ: ಗೋಡೆಗೆ ಹಚ್ಚುವ ಪೇಂಟ್ ಜೊತೆ ಬೆರೆಸುವ ಥಿನ್ನರ್ ಕುಡಿದು 4 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಮೋಕಾ ಗ್ರಾಮದಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ ಘಟನೆ ನಡೆದಿದ್ದು, ಭೈರಾಪುರ ಗ್ರಾಮದ ಗೋವಿಂದಪ್ಪ ಅವರ ಮಗ ಅಶೋಕ್ (4) ಮೃತ ಬಾಲಕ. ತಾಲೂಕಿನ ಮೋಕಾ ಗ್ರಾಮದಲ್ಲಿ ಹಬ್ಬಕ್ಕೆಂದು ಅಶೋಕ್ ಪೋಷಕರ ಜೊತೆ ಬಂದಿದ್ದ. ಮಾ. 5 ರಂದು ಮೋಕಾ ಗ್ರಾಮದಲ್ಲಿ ಮಲ್ಲೇಶ್ವರ ರಥೋತ್ಸವ ನಡೆಯಲಿದೆ. ಹೀಗಾಗಿ, ಮನೆಗೆ ಸುಣ್ಣ- ಬಣ್ಣ ಹಚ್ಚಲಾಗ್ತಿತ್ತು. ಬಣ್ಣದ ಡಬ್ಬಿ ಜೊತೆ ಇಟ್ಟಿದ್ದ ಥಿನ್ನರ್ ನೋಡಿ ಬಾಲಕ ನೀರೆಂದು ಭಾವಿಸಿ ಕುಡಿದಿದ್ದಾನೆ. ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಈ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಚಿಕ್ಕಬಳ್ಳಾಪುರ: ನಾಡಬಂದೂಕು ಮಾರಾಟ ಮಾಡುತ್ತಿದ್ದ ಮೂವರು ಅರೆಸ್ಟ್