ಹೊಸಪೇಟೆ: ಹೆಚ್ಚಿನ ಬೆಲೆಗೆ ಹಾಲು ಮಾರಾಟ ಮಾಡುತ್ತಿದ್ದ ನಗರದ ಕೆಲ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಚಿತ್ತವಾಡಿಗಿ ಬೇಕರಿ, ಲಕ್ಷ್ಮೀ ಬೇಕರಿ ಮತ್ತು ಕೆಲ ಅಂಗಡಿಗಳಲ್ಲಿ ಹಾಲು ಮತ್ತು ಮೊಸರನ್ನು ಎಂಆರ್ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಗ್ರಾಹಕರೊಬ್ಬರು ಕೋವಿಡ್ -19 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ದೂರಿನನ್ವಯ ಆಹಾರ ಶಿರಸ್ತೇದಾರ ನಾಗರಾಜ ಹೆಚ್. ಆಹಾರ ನಿರೀಕ್ಷಕ ಅಜಿತ್ ಕುಮಾರ್ .ಆರ್ ಹಾಗೂ ಕಾನೂನು ಮಾಪನ ಅಧಿಕಾರಿ ಪ್ರೇಮಾ ಅವರನ್ನೊಳಗೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಗ್ರಾಹಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಅಂಗಡಿ ಮಾಲೀಕರು 22 ರೂ. ಬೆಲೆಯ ಅರ್ಧ ಲೀಟರ್ ಹಾಲನ್ನು 23 ರೂ.ಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಅಂಗಡಿ ಮಾಲೀಕರ ವಿರುದ್ಧ ಕಾನೂನು ಮಾಪನ ಕಾಯ್ದೆ 2011 ಕಲಂ 18(2) ರಡಿಯಲ್ಲಿ ದೂರು ದಾಖಲಾಗಿದೆ.