ವಿಜಯನಗರ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲವೊಂದನ್ನು ಭೇದಿಸುವಲ್ಲಿ ಹೊಸಪೇಟೆ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಭಾನುವಾರ ಐವರು ಆರೋಪಿಗಳನ್ನು ಬಂಧಿಸಿ, 500 ರೂ. ಮುಖ ಬೆಲೆಯ 1 ಲಕ್ಷದ 56 ಸಾವಿರ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಕುಬೇರಪ್ಪ (58), ಶಿವಮೊಗ್ಗ ಜಿಲ್ಲೆಯ ರುದ್ರೇಶ್ (39), ಮಂಡ್ಯ ಜಿಲ್ಲೆಯ ಎಸ್. ರಾಜೇಶ್ (28), ಮೈಸೂರು ಜಿಲ್ಲೆಯ ಪ್ರಶಾಂತ್ (30) ಮತ್ತು ಮಂಡ್ಯ ಜಿಲ್ಲೆಯ ರವಿ (30) ಬಂಧಿತರು. ಇವರು ಹೊಸಪೇಟೆ ನಗರದ ರಾಣಿಪೇಟೆಯ ಲಾಡ್ಜ್ವೊಂದರಲ್ಲಿ ತಂಗಿದ್ದರು. ಖಚಿತ ಮಾಹಿತಿ ಮೇರೆಗೆ ಸಿಪಿಐ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಉತ್ತರ ಕನ್ನಡದಲ್ಲಿ ಖೋಟಾ ನೋಟು ಚಲಾವಣೆ ; ಸಣ್ಣಪುಟ್ಟ ವ್ಯಾಪಾರಸ್ಥರೇ ಟಾರ್ಗೆಟ್!