ಬಳ್ಳಾರಿ: ಗಣಿ ನಗರಿಗೆ ಮುಜರಾಯಿ, ಮೀನುಗಾರಿಕೆ ಮತ್ತು ಒಳನಾಡು ಬಂದರು ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಂದಿಳಿದರು.
ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹೂವಿನಹಾರ ಹಾಕುವ ಮುಖೇನ ಸ್ವಾಗತ ಕೋರಿದರು. ಬಿಪಿಎಸ್ಸಿ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ ಡಾ.ಮಹಿಪಾಲ ಹಾಗೂ ಸಿರಿಗೇರಿ ಅನ್ನಪೂರ್ಣ ಕ್ರಿಯೇಷನ್ಸ್ನ ಸಿರಿಗೇರಿ ಯರಿಸ್ವಾಮಿ ಅವರು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಬಳಿಕ, ಬಿಪಿಎಸ್ಸಿ ಶಾಲೆಯ ಆಡಳಿತ ಮಂಡಳಿ ಕಚೇರಿಗೆ ಸಚಿವ ಶ್ರೀನಿವಾಸ ಪೂಜಾರಿ ಅವರನ್ನ ಕರೆದೊಯ್ದ ಮುಖಂಡರು, ಕನಕ ದುರ್ಗಮ್ಮ ಹಾಗೂ ದರೂರು ವೀರಭದ್ರೇಶ್ವರಸ್ವಾಮಿ ಅಭಿವೃದ್ಧಿ ಕುರಿತಾದ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಕೆ ಮಾಡಲಾಯಿತು.
ದರೂರು ಪುರುಷೋತ್ತಮ ಗೌಡ, ಜಾಲಿಹಾಳು ಶ್ರೀಧರಗೌಡ, ಗಂಗಾವತಿ ವೀರೇಶ, ಪ್ರಭುದೇವ ಕಪ್ಪಗಲ್ಲು, ಕೆ.ಆರ್.ಮಲ್ಲೇಶ ಕುಮಾರ, ಬಿಪಿಎಸ್ ಸಿ ಶಾಲೆಯ ಮುಖ್ಯಶಿಕ್ಷಕ ಜೆ.ಅನಿಲ್ ಹಾಗೂ ಮುಜರಾಯಿ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇತರರಿದ್ದರು.