ಬಳ್ಳಾರಿ: ನನ್ನ ಮೊದಲ ಆದ್ಯತೆ ಸಚಿವನಾಗುವುದಲ್ಲ, ವಿಜಯನಗರ ಜಿಲ್ಲೆ ರಚನೆಗೆ ಒತ್ತು ನೀಡುವುದು ಎಂದು ವಿಜಯನಗರ ಶಾಸಕ ಆನಂದ್ ಸಿಂಗ್ ಹೇಳಿದರು.
ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಪಿ ಉತ್ಸವವನ್ನು ಮೈಸೂರು ದಸರಾದಂತೆ ಆಚರಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಶಾಸಕರು ಗೈರು: ಉತ್ಸವದ ಚಾಲನೆ ವೇಳೆ ಕಾಂಗ್ರೆಸ್ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಶಾಸಕರಾದ ಜೆ.ಎನ್.ಗಣೇಶ, ಪಿ.ಟಿ.ಪರಮೇಶ್ವರ ನಾಯ್ಕ, ತುಕಾರಾಂ, ಬಿ.ನಾಗೇಂದ್ರ, ಭೀಮಾ ನಾಯ್ಕ ಉತ್ಸವಕ್ಕೆ ಆಗಮಿಸದೆ ದೂರ ಉಳಿದಿದ್ದರು. ಇದಲ್ಲದೆ, ಬಿಜೆಪಿ ಶಾಸಕರಾದ ಸೋಮಲಿಂಗಪ್ಪ, ಕರುಣಾಕರ ರೆಡ್ಡಿ ಕೂಡಾ ಗೈರಾಗಿದ್ದರು.