ETV Bharat / state

ಅಗ್ನಿ ಅವಘಡದಲ್ಲೂ ಬಳ್ಳಾರಿ ಫಸ್ಟ್... 3 ವರ್ಷದಲ್ಲಿ 1991 ಪ್ರಕರಣ ದಾಖಲು!

ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳನ್ನೊಳಗೊಂಡ ಪ್ರಾದೇಶಿಕ ಅಗ್ನಿಶಾಮಕ ದಳ ಕಚೇರಿ ಬಳ್ಳಾರಿಲ್ಲಿದ್ದು, ಮೂರು ಜಿಲ್ಲೆಗಳ ಪೈಕಿ ಗಣಿನಾಡು ಅಗ್ನಿ ಅವಘಡದಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರಾದೇಶಿಕ ಅಗ್ನಿಶಾಮಕ ದಳ ಬಳ್ಳಾರಿ
author img

By

Published : May 13, 2019, 5:46 PM IST

ಬಳ್ಳಾರಿ: ರಾಜ್ಯ ರಾಜಕೀಯದ ಕೇಂದ್ರ ಬಿಂದುವಾದ ಗಣಿನಾಡು ಸದಾ ಒಂದಲ್ಲ ಒಂದು ರೀತಿಯ ಸುದ್ದಿಯಲ್ಲಿರುತ್ತದೆ. ಸದ್ಯ ಅಗ್ನಿ ಅವಘಡದಲ್ಲಿಯೂ ಮುಂದಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳನ್ನೊಳಗೊಂಡ ಪ್ರಾದೇಶಿಕ ಅಗ್ನಿಶಾಮಕ ದಳ ಕಚೇರಿ ಬಳ್ಳಾರಿಲ್ಲಿದ್ದು, ಮೂರು ಜಿಲ್ಲೆಗಳ ಪೈಕಿ ಗಣಿನಾಡು ಅಗ್ನಿ ಅವಘಡದಲ್ಲಿ ಮೊದಲ ಸ್ಥಾನದಲ್ಲಿದೆ.

ಕಳೆದ ಮೂರು ವರ್ಷಗಳಿಗೆ ಮೂರು ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಗಣಿನಾಡು ಬಳ್ಳಾರಿಯೇ ಮುಂದಿದೆ. ಈವರೆಗೆ ಸುಮಾರು 1991 ಅಗ್ನಿ ಅವಘಡ ಸಂಭವಿಸಿರುವುದರ ಕುರಿತು ಪ್ರಾದೇಶಿಕ ಅಗ್ನಿ ಶಾಮಕ ದಳದ ಕಚೇರಿಯ ಅಂಕಿ-ಅಂಶಗಳೇ ಸ್ಪಷ್ಟಪಡಿಸಿವೆ. 2017ರಿಂದ ‌2019ರವರೆಗೆ 1991 ಅಗ್ನಿ ಅವಘಡ ಪ್ರಕರಣಗಳು ದಾಖಲಾಗಿವೆ.

ಹಿಂದಿನ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಸಾಲಿನಲ್ಲೇ ಅತ್ಯಂತ ಕಡಿಮೆ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ. 2017ರಲ್ಲಿ 801, 2018ರಲ್ಲಿ 875, 2019ರಲ್ಲಿ ಕೇವಲ 315 ಅಗ್ನಿ ಅವಘಡ ಪ್ರಕರಣಗಳು ದಾಖಲಾಗಿವೆ. ಎರಡನೇ ಸ್ಥಾನದಲ್ಲಿ ರಾಯಚೂರು ಮತ್ತು ಮೂರನೇ ಸ್ಥಾನದಲ್ಲಿ ಕೊಪ್ಪಳ ಜಿಲ್ಲೆಯಿದೆ. ಆದರೆ ಯಾವುದೇ ಗಂಭೀರ ಸ್ವರೂಪ ಮಾತ್ರ ಪಡೆದುಕೊಂಡಿಲ್ಲ.

ಪ್ರಾದೇಶಿಕ ಅಗ್ನಿಶಾಮಕ ದಳ ಕಚೇರಿ

ಬಳ್ಳಾರಿ ವಲಯದ ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಎಸ್.ರವಿಪ್ರಸಾದ ಅವರು ಈಟಿವಿ ಭಾರತ್ ಜೊತೆ ಮಾತನಾಡಿ, ರಾಯಚೂರು ಮತ್ತು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಪ್ರಾದೇಶಿಕ ಅಗ್ನಿ ಶಾಮಕದಳ ಕಚೇರಿಯಲ್ಲಿ ಯಾವುದೇ ಸಿಬ್ಬಂದಿ ಕೊರತೆಯಿಲ್ಲ. ಇಲಾಖೆಗೆ 621 ಹುದ್ದೆಗಳು ಮಂಜುರಾತಿಯಾಗಿದ್ದು, ಈಗಾಗಲೇ 454 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 167 ಹುದ್ದೆಗಳು ಮಾತ್ರ ಖಾಲಿಯಾಗಿ ಉಳಿದಿವೆಯಷ್ಟೇ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಅಂದಾಜು 27 ಅಗ್ನಿಶಾಮಕ ವಾಹನ ಹಾಗೂ ನಾಲ್ಕು ಅಗ್ನಿಶಾಮಕ ಬೈಕ್​ಗಳಿವೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 15 ಅಗ್ನಿಶಾಮಕ ವಾಹನ ಮತ್ತು ಮೂರು ಅಗ್ನಿಶಾಮಕ ಬೈಕ್​ಗಳು, ರಾಯಚೂರು ಜಿಲ್ಲೆಯಲ್ಲಿ ಅಂದಾಜು 19 ಅಗ್ನಿಶಾಮಕ ವಾಹನಗಳು, ಮೂರು ಅಗ್ನಿಶಾಮಕ ಬೈಕ್​ಗಳಿವೆ ಎಂದು ಮಾಹಿತಿ ನೀಡಿದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಕೋಟ್ಯಂತರ ರೂ. ವ್ಯಯ ಮಾಡಿ ಅಗ್ನಿಶಾಮಕ ಕಚೇರಿಗಳನ್ನ ತೆರೆಯಲಾಗಿದೆ.‌ ಕೇವಲ ಮೂರು ಸಾವಿರ ಜನವಸತಿ ಇರುವ ಪ್ರದೇಶಗಳಲ್ಲಿ ಅಗ್ನಿಶಾಮಕ ದಳದ‌ ಕಚೇರಿಗಳನ್ನ ಪ್ರಾರಂಭಿಸಿದ ಕೀರ್ತಿ ತಮಗೆ ಸಲ್ಲುತ್ತದೆ ಎಂದರು.

Intro:ಅಗ್ನಿ ಅವಘಡದಲ್ಲೂ ಗಣಿನಾಡು ಬಳ್ಳಾರಿ ಫಸ್ಟ್
ಕಳೆದ ಮೂರುವರ್ಷದಲ್ಲಿ 1991 ಅಗ್ನಿ ಅವಘಡ ಪ್ರಕರಣ ದಾಖಲು!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯು ಒಂದಲ್ಲ ಒಂದು ರೀತಿಯ ಸುದ್ದಿಯಲ್ಲಿರುತ್ತದೆ. ಮೊನ್ನೆತಾನೆ ಎಸಿಬಿ ದಾಳಿ ಕಾರ್ಯಾಚರಣೆಯಲ್ಲಿ ಪ್ರಾದೇಶಿಕ ವಲಯದಲ್ಲೇ ಮುಂದಾಳತ್ವ ಕಾಯ್ದುಕೊಂಡ ಈ ಜಿಲ್ಲೆಯು ಈಗ ಅಗ್ನಿ ಅವಘಡದಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನೊಳ ಗೊಂಡ ಪ್ರಾದೇಶಿಕ ಅಗ್ನಿಶಾಮಕ ದಳದ ಕಚೇರಿಯಲ್ಲಿ ಗಣಿ ನಗರಿ ಬಳ್ಳಾರಿಯಲ್ಲೇ ಇದೆ. ಆಗಾಗಿ, ಮೂರು ಜಿಲ್ಲೆಗಳ ಪೈಕಿ ಬಳ್ಳಾರಿ ಜಿಲ್ಲೆಯೇ ಅಗ್ನಿ ಅವಘಡ ಸಂಭವಿಸಿದ್ದರಲ್ಲಿ ಮುಂ ಚೂಣಿಯಲ್ಲಿದೆ. ಕಳೆದಮೂರು ವರ್ಷಗಳಿಗೆ ಆ ಮೂರು ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ, ಗಣಿನಾಡು ಬಳ್ಳಾರಿಯೇ ಮುಂದಿದೆ. ಈವರೆಗೆ ಸರಿಸುಮಾರು 1991 ಅಗ್ನಿ ಅವಘಡ ಸಂಭವಿಸಿರುವುದರ ಕುರಿತ ಪ್ರಾದೇಶಿಕ ಅಗ್ನಿ ಶಾಮಕ ದಳದ ಕಚೇರಿಯ ಅಂಕಿ- ಅಂಶಗಳೇ ಸ್ಪಷ್ಟಪಡಿಸಿವೆ. 2017 ರಿಂದ ‌2019ರವರೆಗೆ 1991 ಅಗ್ನಿ ಅವಘಡ ಪ್ರಕರಣಗಳು ದಾಖಲು ಆಗಿವೆ. ಹಿಂದಿನ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ಸಾಲಿನಲ್ಲೇ ಅತ್ಯಂತ ಕಡಿಮೆ ಪ್ರಕರಣಗಳು ಜಿಲ್ಲೆಯಲ್ಲಿ ದಾಖ ಲಾಗಿವೆ. 2017ರಲ್ಲಿ 801, 2018ರಲ್ಲಿ 875, 2019ರಲ್ಲಿ ಕೇವಲ 315 ಅಗ್ನಿ ಅವಘಡ ಪ್ರಕರಣಗಳು ದಾಖಲಾಗಿವೆ ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.
ಎರಡನೇ ಸ್ಥಾನದಲ್ಲಿ ರಾಯಚೂರು ಜಿಲ್ಲೆ ಜಿಗಿದರೆ, ಕೊಪ್ಪಳ ಜಿಲ್ಲೆಯು ಮೂರನೇ ಸ್ಥಾನಕ್ಕೆ ಕುಸಿದಿದೆ. ಬಣವೆಗೆ ಬೆಂಕಿ, ಅಲ್ಲೊಂದು, ಇಲ್ಲೊಂದು ಗುಡಿಸಲಿಗೆ ಬೆಂಕಿ, ವಿದ್ಯುತ್ ಸ್ಪರ್ಶ ಇನ್ನಿತರೆ ಅಗ್ನಿ ಅವಘಡಗಳು ಸಂಭವಿಸುತ್ತವೆ. ಈವರೆಗೂ ಯಾವುದೇ ಗಂಭೀರ ಸ್ವರೂಪದ ಪ್ರಕರಣಗಳು ಸಂಭವಿಸಿಲ್ಲ.

Body:ಬಳ್ಳಾರಿ ವಲಯದ ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಎಸ್.ರವಿಪ್ರಸಾದ ಅವರು ಈ ಟಿವಿ ಭಾರತ್ ದೊಂದಿಗೆ ಮಾತನಾಡಿ, ರಾಯಚೂರು ಮತ್ತು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಪ್ರಾದೇಶಿಕ ಅಗ್ನಿಶಾಮಕದಳ ಕಚೇರಿ ಯಲ್ಲಿ ಯಾವುದೇ ಸಿಬ್ಬಂದಿ ಕೊರತೆಯಿಲ್ಲ. ಇಲಾಖೆಗೆ 621 ಹುದ್ದೆಗಳು ಮಂಜುರಾತಿಯಾಗಿದ್ದು, ಈಗಾಗಲೇ 454 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 167 ಹುದ್ದೆಗಳು ಮಾತ್ರ ಖಾಲಿಯಾಗಿ ಉಳಿದಿವೆಯಷ್ಟೇ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಅಂದಾಜು 27 ಅಗ್ನಿಶಾಮಕ ವಾಹನ ಹಾಗೂ ನಾಲ್ಕು ಅಗ್ನಿಶಾಮಕ ಬೈಕ್ ಗಳಿವೆ. ಕೊಪ್ಪಳ ಜಿಲ್ಲೆ ಯಲ್ಲಿ ಸುಮಾರು 15 ಅಗ್ನಿಶಾಮಕ ವಾಹನ ಮತ್ತು ಮೂರು ಅಗ್ನಿ ಬೈಕ್ ಗಳು, ರಾಯಚೂರು ಜಿಲ್ಲೆಯಲ್ಲಿ ಅಂದಾಜು 19 ಅಗ್ನಿಶಾಮಕ ವಾಹನಗಳು, ಮೂರು ಅಗ್ನಿ ಬೈಕ್ ಗಳಿವೆ ಎಂದರು.
ಎರಡು ಕಡೆ ಅಗ್ನಿಶಾಮಕ ಕಚೇರಿ ಆರಂಭ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಸರಿಸುಮಾರು ಕೋಟ್ಯಾಂತರ ರೂ.ಗಳ ವ್ಯಯಮಾಡಿ ಅಗ್ನಿಶಾಮಕ ಕಚೇರಿಗಳನ್ನ ತೆರೆಯಲಾಗಿದೆ.‌ ಕೇವಲ ಮೂರು ಸಾವಿರ ಜನವಸತಿ ಇರುವ ಆ ಪ್ರದೇಶಗಳಲ್ಲಿ ಅಗ್ನಿಶಾಮಕ ದಳದ‌ ಕಚೇರಿಗಳನ್ನ ಪ್ರಾರಂಭಿಸಿದ ಕೀರ್ತಿ ತಮಗೆ ಸಲ್ಲುತ್ತದೆ ಎಂದರು.
ಬ್ರಿಟಿಷರ ಆಳ್ವಿಕೆಕಾಲದ ಅಗ್ನಿಶಾಮಕ ದಳ ವಾಹನವೊಂದಿದೆ. ಅದನ್ನ ವಿಶೇಷ ಕಾರ್ಯಕ್ರಮದ ಸಂದರ್ಭ ಆ ವಾಹನವನ್ನ ಪ್ರದರ್ಶನ ಮಾಡಲಾಗುತ್ತದೆ. ಆದರೆ, ಆ ವಾಹನವನ್ನೇನು ಅಗ್ನಿ ಅವಘಡ ಸಂಭವಿಸಿದಾಗ ಬಳಕೆ ಮಾಡಲು‌ ಹೋಗೋದಿಲ್ಲ ಎನ್ನುತ್ತಾರೆ ಅವರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_13_BALLARI_FIRE_ACCIDENT_VISUALS_7203310

KN_BLY_01a_13_BALLARI_FIRE_ACCIDENT_VISUALS_7203310

KN_BLY_01_13_BALLARI_FIRE_ACCIDENT_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.