ETV Bharat / state

ಜು. 21ರಂದು ಬೆಳಗಾವಿಯಲ್ಲಿ ರೈತರ ಬೃಹತ್​​ ಸಮಾವೇಶ: ಚಾಮರಸ ಮಾಲೀ ಪಾಟೀಲ್ - undefined

ಬರಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಮತ್ತು ರಾಜ್ಯ ಸಮ್ಮಿಶ್ರ ಸರ್ಕಾರದ ವೈಪಲ್ಯ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದರು.

ಚಾಮರಸ ಮಾಲೀ ಪಾಟೀಲ್
author img

By

Published : Jul 6, 2019, 11:16 PM IST

ಬಳ್ಳಾರಿ: ಬರಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಮತ್ತು ರಾಜ್ಯ ಸಮ್ಮಿಶ್ರ ಸರ್ಕಾರದ ವೈಪಲ್ಯ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದರು. 39ನೇ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಜುಲೈ 21ರಂದು ರೈತರ ಬೃಹತ್ ಸಮಾವೇಶ ಬೆಳಗಾವಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಚಾಮರಸ ಮಾಲೀ ಪಾಟೀಲ್

ನಗರದ ಖಾಸಗಿ ಹೋಟಲ್​​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೇಂದ್ರ ಸಿಂಗ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಎಸ್.ಆರ್.ಹೀರೆಮಠ, ಅಡ್ವೋಕೇಟ್ ಜನರಲ್ ರವೀಂದ್ರ ವರ್ಮ ಕುಮಾರ್ ಹಾಗೂ ಸಾವಿರಾರು ರೈತರು ಭಾಗವಹಿಸುತ್ತಾರೆ ಎಂದು ಹೇಳಿದರು.
ಕಳೆದ ವರ್ಷ 156 ತಾಲೂಕುಗಳಲ್ಲಿ ಬರಗಾಲ‌ ನಿರ್ಮಾಣವಾಗಿ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಸರಿಯಾಗಿ ಆಗದೇ ರೈತರು ಆತಂಕದಲ್ಲಿ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು.

Intro:ಬರಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಮತ್ತು ರಾಜ್ಯ ಸಮ್ಮಿಶ್ರ ಸರ್ಕಾರದ ವೈಪಲ್ಯ ಹಾಗೂ ವಿರೋಧ ಪಕ್ಷದ ದಿವಾಳಿತವನ್ನು ಬಯಲಿಗೆಳೆಯಲು ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವ ಆಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದರು.

39ನೇ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಜುಲೈ 21 ರಂದು ರೈತರ ಬೃಹತ್ ಸಮಾವೇಶ ಬೆಳಗಾವಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

Body:ನಗರದ ಖಾಸಗಿ ಹೋಟಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವರ್ಷದ 156 ತಾಲೂಕುಗಳಲ್ಲಿ ಬರಗಾಲ‌ ನಿರ್ಮಾಣವಾಗಿ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಸರಿಯಾಗಿ ಆಗಿಲ್ಲದೇ ರೈತರು ಆತಂಕದಲ್ಲಿ ಇದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಬರಗಾಲದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ರಾಜೇಂದ್ರ ಸಿಂಗ ಅವರ ಈ ಕಾರ್ಯಕ್ರಮ ವನ್ನು ಉದ್ಘಾಟನಾ ಮಾಡುತ್ತಾರೆ. ಈ‌ ಸಮಯದಲ್ಲಿ ಎಸ್.ಆರ್ ಹೀರೆಮಠ, ಅಡ್ವಕೇಟ್ ಜನರಲ್ ರವೀಂದ್ರ ವರ್ಮ ಕುಮಾರ್ ಅವರು ಹಾಗೂ ಸಾವಿರಾರು ರೈತರು ಭಾಗವಹಿಸುತ್ತಾರೆ ಎಅಮದು ತಿಳಿದಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯ ಬೇಡಿಕೆಗಳು :

ಸಾಲ ಮನ್ನಾ ಗೊಂದಲ ನಿವಾರಣೆಯಾಗಬೇಕು ಹಾಗೇ ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.
ಕೇಂದ್ರ ಸರ್ಕಾರ ಎಂ.ಎಸ್ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕು - ರಾಜ್ಯ ಸರ್ಕಾರದ ಕೃಷಿ ಬೆಲೆ ಆಯೋಗದ ವರದಿಯನ್ನು ಅನುಷ್ಠಾನ ಮಾಡಬೇಕು.
ಭೂ ಸ್ವಾಧಿನ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು - ಗುತ್ತಿಗೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ಕೈಬಿಡಬೇಕು.
ಮಹದಾಯಿ ತೀರ್ಪು ಗೆಜೆಟ್ ಆಗಲೇಬೇಕು.
ಕಬ್ಬಿನ ಬಾಕಿ ಪಾವತಿಯಾಗಲೇ ಬೇಕು - ಈ ಸಾಲಿನ ಕಬ್ಬಿನ ಬೆಲೆ ನಿಗದಿಯಾಗಬೇಕು.
ಜಿಂದಾಲ್ ಕಂಪನಿಗೆ ಭೂಮಿಯನ್ನು ಮಾರಾಟ ಮಾಡಕೂಡದು.

Conclusion:ಝ ಸುದ್ದಿಗೋಷ್ಠಿಯಲ್ಲಿ ರೈತರಾದ ಜೆ.ಎಂ ವೀರಸಂಗಯ್ಯ, ಕೃಷ್ಣ, ಎಂ.ಎಲ್.ಕೆ‌ ನಾಯ್ಕ, ವಿಜಯಲಕ್ಷ್ಮಿ, ಗಂಗಾ ಧಾರವಾಡಕರ್ ,ಅಂಬಣ್ಣ, ವಿರೂಪಾಕ್ಷಿ ಮತ್ತು ಇನ್ನಿತರ ರೈತರು ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.