ETV Bharat / state

ಬೆಳೆದ ಬೆಳೆ ಮಾರಲಾಗದೆ ನೊಂದ ಯುವ ರೈತ, ಆತ್ಮಹತ್ಯೆಗೆ ಶರಣು

ದೇಶದಲ್ಲಿ ಲಾಕ್​ಡೌನ್​ ಉಂಟಾದ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದು, ಬಳ್ಳಾರಿ ಜಿಲ್ಲೆಯ ಹುಲಿಕೆರೆ ಗ್ರಾಮದ ಯುವ ರೈತನೋರ್ವ ತಾನು ಬೆಳೆದ ಬೆಳೆ ಮಾರಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

Farmer committed Suicide
ಯುವ ರೈತ ಆತ್ಮಹತ್ಯೆ
author img

By

Published : May 13, 2020, 1:46 PM IST

ಬಳ್ಳಾರಿ: ಕೊರೊನಾ ಲಾಕ್​ಡೌನ್​​ನಿಂದಾಗಿ ಹೊಲದಲ್ಲಿ ಬೆಳೆದಿದ್ದ ಬೆಳೆಗಳನ್ನು ಮಾರಲಾಗದೆ ನಷ್ಟ ಉಂಟಾಗಿದ್ದು, ಈ ಹಿನ್ನೆಲೆ ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.

ಜಗದೀಶ್(24) ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಐದು ಎಕರೆ ವಿಸ್ತೀರ್ಣದಲ್ಲಿ ಟೊಮೋಟೊ ಮತ್ತು ನಿಂಬೆಹಣ್ಣಿನ ಬೆಳೆ ಬೆಳೆದಿದ್ದ ಈತ, ಸರ್ಕಾರ ವಿಧಿಸಿದ ಲಾಕ್​ಡೌನ್​ನಿಂದಾಗಿ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ​ ಮನನೊಂದು ವಿಷ ಸೇವಿಸಿದ್ದ, ಚಿಕಿತ್ಸೆಗೆಂದು ಚಿತ್ರದುರ್ಗದ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸಿಂಡಿಕೇಟ್ ಬ್ಯಾಂಕ್ ಮತ್ತು ಹೆಚ್​​ಡಿಎಫ್​ಸಿ ಬ್ಯಾಂಕುಗಳಲ್ಲಿ 6 ಲಕ್ಷ ಸೇರಿದಂತೆ ಇನ್ನಿತರ ಕೈ ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಈ ಕುರಿತು ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.