ETV Bharat / state

ಬಳ್ಳಾರಿ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ - Bellary 15th Team Women Police

8 ಸ್ನಾತಕೋತ್ತರ ಪದವಿ, 44 ಪದವಿ, 6 ಪಿಯುಸಿ ಸರ್ಟಿಫಿಕೇಟ್​ ಪಡೆದಿರುವ ಮಹಿಳಾ ಪೊಲೀಸರು ತರಬೇತಿ ಪಡೆದಿದ್ದಾರೆ. 58 ಪ್ರಶಿಕ್ಷಣಾರ್ಥಿಗಳು ಪಥಸಂಚಲನ ಮಾಡುವ ಮೂಲಕ ಐಜಿಪಿ ಎಂ.ನಂಜುಂಡಸ್ವಾಮಿ ಅವರಿಗೆ ಗೌರವ ಸಲ್ಲಿಸಿದರು.

exit-path-of-bellary-15th-team-women-police-inspectors
ಬಳ್ಳಾರಿ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ
author img

By

Published : Feb 26, 2021, 6:55 PM IST

Updated : Feb 26, 2021, 7:13 PM IST

ಬಳ್ಳಾರಿ: ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಬಳ್ಳಾರಿ 15ನೇ ತಂಡದ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಐಜಿಪಿ ಎಂ‌.ನಂಜುಂಡಸ್ವಾಮಿ, ಮಹಿಳಾ ಕಾನ್ಸ್​​ಟೇಬಲ್​ಗಳು ನಿಮ್ಮ ಜಿಲ್ಲೆಗಳ ಠಾಣೆಗಳಿಗೆ ನೇಮಕವಾದ ನಂತರ ನಿಮ್ಮ ಮೇಲಿನ ಅಧಿಕಾರಿಗಳಿಗೆ ಡೆಸ್ಕ್ ಕೆಲಸ ಕೊಡಿ, ಕಂಪ್ಯೂಟರ್​ ಕೆಲಸ ಕೊಡಿ ಎಂದು ಕೇಳಬೇಡಿ. ಯಾವುದೇ ಕೆಲಸ ಕೊಟ್ಟರೂ ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಮಾತನಾಡಿ, ಈ 15ನೇ ತಂಡದ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕಳೆದ ಎಂಟು ತಿಂಗಳಗಳಿಂದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ದೈಹಿಕ ಮತ್ತು ಆಂತರಿಕ, ಸೈಬರ್ ಕ್ರೈಮ್, ಟ್ರಾಫಿಕ್, ನ್ಯಾಯಾಲಯ, ಜಿಲ್ಲಾ ಆಸ್ಪತ್ರೆ, ಕರಾಟೆ ಸೇರಿದಂತೆ ಇನ್ನಿತರೆ ತರಬೇತಿ ನೀಡಲಾಗಿದೆ ಎಂದರು.‌

ಇವರಲ್ಲಿ 8 ಸ್ನಾತಕೋತ್ತರ ಪದವಿ, 44 ಪದವಿ, 6 ಪಿಯುಸಿ ಸರ್ಟಿಫಿಕೇಟ್​ ಪಡೆದಿರುವ ಮಹಿಳಾ ಪೊಲೀಸರು ತರಬೇತಿ ಪಡೆದಿದ್ದಾರೆ. 58 ಪ್ರಶಿಕ್ಷಣಾರ್ಥಿಗಳು ಪಥಸಂಚಲನ ಮಾಡುವ ಮೂಲಕ ಐಜಿಪಿ ಎಂ.ನಂಜುಂಡಸ್ವಾಮಿ ಅವರಿಗೆ ಗೌರವ ಸಲ್ಲಿಸಿದರು.

ಒಳಾಂಗಣ ಪರೀಕ್ಷೆಯಲ್ಲಿ ಗೆದ್ದವರು:
ಪ್ರಥಮ ಸಾವಿತ್ರಿ, ದ್ವಿತೀಯ ಶಿವಲೀಲಾ ಬಿರಾದಾರ, ತೃತೀಯ ಸಾಂವಕ್ಕಾ ಗದಾಡಿ

ಹೊರಾಂಗಣ ವಿಷಯ ಪರೀಕ್ಷೆ:
ಪ್ರಥಮ ರೋಜಾ, ದ್ವಿತೀಯ ಸುಮಾ ಕೆ., ತೃತೀಯ ಅಕ್ಷತಾ ಬಾಡದವರ

ಹೊರಾಂಗಣ ವಿಷಯದ ಬಂದೂಕು ಗುರಿ ಅಭ್ಯಾಸ:
ಪ್ರಥಮ ಸುಮಾ ಕೆ., ದ್ವಿತೀಯ ಪೂಜಾ ಮಂಡಲ್, ತೃತೀಯ ಬಿಂದುಶ್ರೀ

Last Updated : Feb 26, 2021, 7:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.