ಹೊಸಪೇಟೆ: ನಗರದ ಗಾಂಧಿ ವೃತ್ತದಲ್ಲಿ ಗಾಂಧೀಜಿ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಪಿ.ವಿಜಯ ಲಕ್ಷ್ಮೀ ಭಾಗಿಯಾಗಿದ್ರು.
ಈ ವೇಳೆ ಮಾತನಾಡಿದ ನಗರಸಭೆ ಆಯುಕ್ತೆ ಪಿ.ವಿಜಯ ಲಕ್ಷ್ಮೀ, ಮಹಾತ್ಮ ಗಾಂಧೀಜಿ ತುಂಬಾ ಸರಳ ಜೀವಿಯಾಗಿದ್ದರು. ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು. ಗಾಂಧೀಜಿಯವರು ದೇಶದ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರಲ್ಲಿ ಅಗ್ರ ಗಣ್ಯ ವ್ಯಕ್ತಿಯಾಗಿದ್ದರು. ಅಲ್ಲದೇ ಅವರು ಗುಡಿ ಕೈಗಾರಿಕೆಗಳಿಗೆ ಹೆಚ್ವು ಮಹತ್ವ ನೀಡುತ್ತಿದ್ದರು ಎಂದು ವಿಜಯ ಲಕ್ಷ್ಮೀ ಹೇಳಿದ್ರು.
ಗಾಂಧೀಯವರು ದೇಶದಲ್ಲಿ ಉತ್ಪಾದನೆಯಾಗುವ ದೇಶಿಯ ವಸ್ತುಗಳನ್ನು ಉಪಯೋಗಿಸುತ್ತಿದ್ದರು. ನಾವು ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವುದು ಬಿಡೋಣ. ಅವರ ಮಾರ್ಗದಲ್ಲಿ ನಾವು ಬದುಕನ್ನು ಕಟ್ಟಿಕೊಳ್ಳೋಣ ಎಂದರು.