ETV Bharat / state

ಬಳ್ಳಾರಿ: ಒಳಚರಂಡಿ ಕಾಲುವೆಯಲ್ಲೇ ಕುಡಿಯುವ ನೀರು ಪೂರೈಕೆ ಸಂಪರ್ಕ

author img

By

Published : Mar 18, 2021, 6:21 PM IST

ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದಲ್ಲಿ ಸತತ ಮೂರ್ನಾಲ್ಕು ವರ್ಷಗಳಿಂದಲೂ ಒಳಚರಂಡಿ ಗುಂಡಿ ಆಳದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ನಲ್ಲಿ ಸಂಪರ್ಕ ಮಾಡಲಾಗಿದೆ. ‌ಅದರೊಳಗಿಂದಲೇ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲಾಗ್ತಿದೆ. ನೀರು ತುಂಬುವ ಸಂದರ್ಭದಲ್ಲಿ ಕ್ರಿಮಿಕೀಟಗಳು ಕೂಡ ಕೊಡದಲ್ಲಿ ಸೇರುತ್ತಿವೆ.

Bellary
ಒಳಚರಂಡಿ ಕಾಲುವೆಯಲ್ಲೇ ಕುಡಿಯುವ ನೀರು ಪೂರೈಕೆ ನಲ್ಲಿ

ಬಳ್ಳಾರಿ: ಬಿರು ಬೇಸಿಗೆ ಆರಂಭಕ್ಕೂ ಮುನ್ನವೇ ಗಣಿನಾಡು ಬಳ್ಳಾರಿ-ವಿಜಯನಗರ ಜಿಲ್ಲಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಅಗತ್ಯಕ್ಕೆ ಅನುಗುಣವಾಗಿ ನೀರಿನ ಸಂಪನ್ಮೂಲ ಲಭ್ಯವಿದ್ದರೂ, ಇದೀಗ ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಮತ್ತೊಂದೆಡೆ, ಒಳಚರಂಡಿಯ ಕೆಳಭಾಗಕ್ಕೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸಿದ್ದು, ಹಲವು ವರ್ಷಗಳಿಂದಲೂ ಒಳಚರಂಡಿ ಕೆಳಭಾಗಕ್ಕೆ ಇಳಿದೆ ಕುಡಿಯುವ ನೀರನ್ನ ಕೊಡಗಳಲ್ಲಿ ತುಂಬಿಸಿ ಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ಒಳಚರಂಡಿ ಕಾಲುವೆಯಲ್ಲೇ ಕುಡಿಯುವ ನೀರು ಪೂರೈಕೆ ನಲ್ಲಿ..

ಹೌದು, ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದಲ್ಲಿ ಸತತ ಮೂರ್ನಾಲ್ಕು ವರ್ಷಗಳಿಂದಲೂ ಒಳಚರಂಡಿ ಗುಂಡಿ ಆಳದಲಿ ಕುಡಿಯುವ ನೀರು ಪೂರೈಕೆ ಮಾಡುವ ನಲ್ಲಿ ಸಂಪರ್ಕ ಮಾಡಲಾಗಿದೆ. ‌ಅದರೊಳಗಿಂದಲೇ ಕುಡಿಯುವ ನೀರನ್ನ ತೆಗೆದುಕೊಂಡು ಹೋಗಲಾಗ್ತಿದೆ. ನೀರು ತುಂಬುವ ಸಂದರ್ಭದಲ್ಲಿ ಕ್ರಿಮಿಕೀಟಗಳು ಕೂಡ ಕೊಡದಲಿ ಸೇರುತ್ತಿವೆ. ಆದರೂ ಕುಡಿಯುವ ನೀರು ತುಂಬಿಸಿಕೊಳ್ಳುವುದು ನಮಗೆ ಅನಿವಾರ್ಯ ಅಂತಾರೆ ಕಾಲೋನಿಯ ನಿವಾಸಿಗಳು.

ಶುದ್ಧೀಕರಣ ಘಟಕವಿದ್ದರೂ ಪ್ರಯೋಜನವಿಲ್ಲ:

ಶಂಕರಬಂಡೆ ಗ್ರಾಮದಲ್ಲಿ ಎರಡು ಶುದ್ಧೀಕರಣ ಘಟಕಗಳಿದ್ದರೂ ಕೂಡ ಯಾವುದೇ ಪ್ರಯೋಜನವಿಲ್ಲ. ಒಂದು ಘಟಕ ದುರಸ್ತಿಯಲ್ಲಿದ್ದು, ಇನ್ನೊಂದು ಘಟಕ ಆಗೊಮ್ಮೆ-ಈಗೊಮ್ಮೆ ಕಾರ್ಯ ನಿರ್ವಹಿಸುತ್ತದೆಯಷ್ಟೆ. ಹೀಗಾಗಿ, ಮೇಲ್ಭಾಗದ ಜನರಿಗೆ ಮಾತ್ರ ಈ ಶುದ್ಧ ಕುಡಿಯುವ ನೀರಿನ ಘಟಕ ಸೀಮಿತವಾಗಿದೆ.

ಗಡಿಭಾಗದಿಂದ ಶುದ್ಧೀಕರಿಸಿದ ನೀರು ಪೂರೈಕೆ:

ನೆರೆಯ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ನಾನಾ ಗ್ರಾಮಗಳಿಂದ ಖಾಸಗಿ ಶುದ್ಧೀಕರಿಸಿದ ಘಟಕಗಳಿಂದ ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ. ಒಂದು ಕೊಡಕ್ಕೆ ಹತ್ತು ರೂ.ನಂತೆ ನೀರನ್ನ ಮಾರಲಾಗುತ್ತದೆ. ಅನಿವಾರ್ಯವಾಗಿ ಶುದ್ಧೀಕರಿಸಿದ ನೀರನ್ನು‌ ಶಂಕರಬಂಡೆ ಹರಿಜನ ಕಾಲೋನಿಯ ನಿವಾಸಿಗಳು ಖರೀದಿಸುತ್ತಾರೆ.

ಜಿಲ್ಲಾ ಪಂಚಾಯಿತಿ ಪಾತ್ರ ಶೂನ್ಯ:

ಇಷ್ಟೆಲ್ಲಾ ನಡೆದರೂ ಕೂಡ ಜಿಲ್ಲಾ ಪಂಚಾಯಿತಿ ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದೆ. ಕ್ರಿಮಿ ಕೀಟಗಳು ಹಾಗೂ ಒಳಚರಂಡಿ ನಾಲೆಯೊಳಗೆ ನಲ್ಲಿ ಸಂಪರ್ಕ ಮಾಡಿರೋದನ್ನ ಕಣ್ಣಾರೆ ಕಂಡರೂ ಸಹಿತ ಏನೂ ಕ್ರಮ ಕೈಗೊಳ್ಳಲು ಮುಂದಾಗದೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಲೋನಿ ನಿವಾಸಿ ಯಂಕಮ್ಮ ನಮಗೇನೂ ಇದು ಹೊಸತಲ್ಲ. ಪ್ರತಿ ಬೇಸಿಗೆ ಬಂದಾಗಲೂ ನಮಗೆ ಕ್ರಿಮಿ, ಕೀಟಗಳ ಮಿಶ್ರಿತ ನೀರು ಆರು ದಿನಕ್ಕೊಮ್ಮೆ ಪೂರೈಕೆಯಾಗುತ್ತದೆ. ಹಾಗಾಗಿ ಶುದ್ಧೀಕರಿಸಿದ ನೀರನ್ನ ಖರೀದಿಸುವುದು ಅನಿವಾರ್ಯ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.