ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ಅಧ್ಯಾಪಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಡಾ.ವಾಸುದೇವ ಬಡಿಗೇರ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇನ್ನು ಡಾ.ಕೆ.ಎಂ.ಮೇತ್ರಿ ಅವರು ಉಪಾಧ್ಯಕ್ಷರಾಗಿ, ಡಾ.ವಿಠಲರಾವ್ ಗಾಯಕ್ವಾಡ್ ಅವರು ಕಾರ್ಯದರ್ಶಿಯಾಗಿ ಮತ್ತು ಡಾ.ಗೀತಮ್ಮ ಕೆ ಅವರು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಡಾ.ವೆಂಕಟಗಿರಿ ದಳವಾಯಿ,
ಡಾ.ಅಮರೇಶ ಯತಗಲ್, ಡಾ.ಎರ‍್ರಿಸ್ವಾಮಿ ಈ, ಡಾ.ಸುಚೇತ ನವರತ್ನ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮತ್ತು ಡಾ.ಎನ್ ಚಿನ್ನಸ್ವಾಮಿ ಸೋಸಲೆ, ಡಾ.ಸಿ.ಟಿ.ಗುರುಪ್ರಸಾದ್ ಅವರು ಪದನಿಮಿತ್ತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.