ETV Bharat / state

ಶಿಸ್ತಿನ ಸಿಪಾಯಿ ಡಿಕೆಶಿ ಯಾವುದೇ  ಅಪರಾಧ ಮಾಡಿಲ್ಲ: ಉಗ್ರಪ್ಪ ಸ್ಪಷ್ಟನೆ - ಅಧಿಕಾರದ ದುರ್ಬಳಕೆ

ಸಿಬಿಐಗೆ ಬಿಜೆಪಿ ಪಕ್ಷದ ಅನೇಕ ಪ್ರಕರಣಗಳನ್ನು ನೀಡಿದ್ದೇವೆ. ಅದರಲ್ಲೂ ಸಿಬಿಐ ದುರ್ಬಳಕೆ ಮಾಡಿಕೊಂಡು ಪ್ರಹ್ಲಾದ್ ಜೋಷಿಯ ತಮ್ಮನ ಪ್ರಕರಣ, ಯಡಿಯೂರಪ್ಪ, ಅಮಿತ್ ಶಾ ಪ್ರಕರಣಗಳನ್ನು ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿದರು.

ಬಳ್ಳಾರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಮಾತನಾಡಿದರು.
author img

By

Published : Sep 2, 2019, 5:11 AM IST

ಬಳ್ಳಾರಿ: ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ ಮತ್ತು ಕಾನೂನು ಹೋರಾಟದಲ್ಲಿ ಪಕ್ಷ ಡಿಕೆಶಿ ಜೊತೆಗೆ ಇದೆ ಎಂದು ಬಳ್ಳಾರಿ ಜಿಲ್ಲೆಯ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ತಿಳಿಸಿದರು.

ಬಳ್ಳಾರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಮಾತನಾಡಿದರು.

ನಗರದ ಹೊರವಲಯದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಪಕ್ಷವು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಈ ರೀತಿಯ ದುರ್ಬಳಕೆ ಮಾಡಿಕೊಂಡಿಲ್ಲ ಎಂದರು.

ಸಿಬಿಐಗೆ ಬಿಜೆಪಿ ಪಕ್ಷದ ಅನೇಕ ಪ್ರಕರಣಗಳನ್ನು ನೀಡಿದ್ದೇವೆ. ಅದರಲ್ಲೂ ಸಿಬಿಐ ದುರ್ಬಳಕೆ ಮಾಡಿಕೊಂಡು ಪ್ರಹ್ಲಾದ್ ಜೋಷಿಯ ತಮ್ಮನ ಪ್ರಕರಣ, ಯಡಿಯೂರಪ್ಪ, ಅಮಿತ್ ಶಾ ಪ್ರಕರಣಗಳನ್ನು ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿದರು.

ವಾದ್ರಾ, ಚಿದಂಬರಂ ಮತ್ತು ಡಿಕೆಶಿ ಅವುರುಗಳನ್ನು ಸಿಕ್ಕಿಹಾಕಿಸಿದ್ದಾರೆ. 2007ರ ಚಿದಂಬರಂ ಪ್ರಕರಣದಲ್ಲಿ ಈಗ ಚಾರ್ಚ್ ಶೀಟ್ ಹಾಕಿದ್ದಾರೆ. ಡಿಕೆಶಿ ಮೇಲೆ ಸೂಮೋಟೊ ಕೇಸ್ ಮಾಡಿ ಸಿಲುಕಿಸುತ್ತಿದ್ದಾರೆ. ಸದನದಲ್ಲಿ ಶಾಸಕ ಶ್ರೀನಿವಾಸ ಐದು ಕೋಟಿ ಹಣ ಕೋಡೋಕೆ ಬಂದಿದ್ದರು ಎಂದು ಹೇಳಿದ್ದರು. ಯಡಿಯೂರಪ್ಪ ಆಡಿಯೋ ಪ್ರಕರಣ ಬಿಡುಗಡೆ ‌ಪ್ರಕರಣ ಏನಾಗಿದೆ ಸ್ವಾಮಿ. ಈ ಬಗ್ಗೆ ಸಿಬಿಐ ಏನು ಮಾಡುತ್ತಿದೆ, ಡಿಕೆಶಿ ಯಾವುದೇ ಅಪರಾಧ ಎಸಗಿಲ್ಲ. ಇದೆಲ್ಲವೂ ರಾಜಕೀಯ ಪ್ರೇರಿತ ಕೃತ್ಯವಾಗಿದೆ ಎಂದು ಉಗ್ರಪ್ಪ ದೂರಿದರು.

ನಾಲಾಯಕ್​ಗಳಿಗೆ ಮಂತ್ರಿಗಿರಿ:

ನಿತ್ಯ ಬೆಳಿಗ್ಗೆ ಬಿಜೆಪಿ ಪಕ್ಷದವರು ಆರ್.ಎಸ್. ಎಸ್ ಶಾಖೆಗೆ ಹೋಗಿ ನಮಸ್ತೆ ಸದವಸ್ಸಲೇ ಮಾತೃಭೂಮಿ ಎಂದು ಹೇಳುತ್ತಾರೆ. ಆದರೆ, ಅವರುಗಳು ಮಂತ್ರಿಗಳಾಗಲು ನಾಲಾಯಕ್. ಪಕ್ಷಕ್ಕೆ ದುಡಿದ ಹಿರಿಯರು ಮಂತ್ರಿಗಳಾಗಿಲ್ಲ. ಈಗ ಮಂತ್ರಿಗಳಾಗಿರುವವರು ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಹೋಗಿದ್ದವರೇ ಎಂದು ವ್ಯಂಗ್ಯವಾಡಿದರು.

Intro:ಡಿಕೆ ಶಿವಕುಮಾರ್ ಕಾಂಗ್ರೇಸ್ ಪಕ್ಷದ ಶಿಸ್ತಿನ ಸಿಪಾಯಿ, ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ ಮತ್ತು ಕಾನೂನು ಹೋರಾಟದಲ್ಲಿ ಪಕ್ಷ ಡಿಕೆಸಿ ಜೊತೆಗೆ ಇದೆ ಎಂದು ಬಳ್ಳಾರಿ ಜಿಲ್ಲೆಯ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ತಿಳಿಸಿದರು.

Body:ನಗರದ ಹೊರವಲಯದ ಕಾಂಗ್ರೇಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಕೇಂದ್ರದ ಬಿಜೆಪಿ ಪಕ್ಷವು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ ಮತ್ತು ಕಾಂಗ್ರೇಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ದುರ್ಬಲಕೆ ಮಾಡಿಕೊಂಡಿಲ್ಲ ವಿ.ಎಸ್ ಉಗ್ರಪ್ಪ ದೂರಿದರು.

ಸಿಬಿಐಗೆ ಬಿಜೆಪಿ ಪಕ್ಷದ ಅನೇಕ ಪ್ರಕರಣಗಳನ್ನು ನೀಡಿದ್ದೆವೆ. ಅದರಲ್ಲಿ ಸಿಬಿಐ ದುರ್ಬಳಕೆ ಮಾಡಿಕೊಂಡು ಪ್ರಹ್ಲಾದ್ ಜೋಷಿಯ ತಮ್ಮನ ಪ್ರಕರಣ, ಯಡಿಯೂರಪ್ಪ, ಅಮಿತ್ ಷಾ ಪ್ರಕರಣಗಳನ್ನು ಕ್ಲೋಸ್ ಮಾಡಿದ್ದಾರೆ.

ರಾಬಟ್ ವಾದ್ರಾ, ಚಿದಂಬರಂ ಮತ್ತು ಡಿಕೆಶಿ ಸಿಕ್ಕಿ ಹಾಕ್ತಿದ್ದಾರೆ.
2007 ರ ಚಿದಂಬರಂ ಪ್ರಕರಣದಲ್ಲಿ ಈಗ ಚಾರ್ಚ್ ಶೀಟ್ ಹಾಕ್ತಾರೆ, ಡಿಕೆಶಿ ಮೇಲೆ ಸೂಮೋಟ ಕೇಸ್ ಮಾಡಿ ಸಿಲುಕಿಸುತ್ತಿದ್ದಾರೆ. ಸದನದಲ್ಲಿ ಶಾಸಕ ಶ್ರೀನಿವಾಸ ಐದು ಕೋಟಿ ಹಣ ಕೋಡೋಕೆ ಬಂದ್ರು ಅಂತಾ ಹೇಳಿದ್ರು ಮತ್ತು ಯಡಿಯೂರಪ್ಪ ಆಡಿಯೋ ಪ್ರಕರಣ ಬಿಡುಗಡೆ ‌ಪ್ರಕರಣ ಏನಾಗಿದೆ ಸ್ವಾಮಿ, ಈ ಬಗ್ಗೆ ಸಿಬಿಐ ಏನು ಮಾಡ್ತಿದೆ, ಡಿಕೆಶಿ ಯಾವುದೇ ಅಪರಾಧ ಎಸಗಿಲ್ಲ, ರಾಜಕೀಯ ಪ್ರೇರಿತ ಕೃತ್ಯವಾಗಿದೆ ಎಂದು ವಿ.ಎಸ್ ಉಗ್ರಪ್ಪ ದೂರಿದರು.

ನಾಲಾಯಕ್ ಅವರಿಗೆ ಮಂತ್ರಿಗಿರಿ:-

ಬೆಳಿಗ್ಗೆ ಬಿಜೆಪಿ ಪಕ್ಷದವರು ಆರ್.ಎಸ್. ಎಸ್ ಶಾಖೆಗೆ ಹೋಗಿ ನಮಸ್ತೆ ಸದವಸ್ಸಲೇ ಮಾತೃಭೂಮಿ ಎಂದು ಹೇಳುವಂತವರು ಮಂತ್ರಿಗಳಾಗಲು ನಾಲಾಯಕ್, ಪಕ್ಷಕ್ಕೆ ದುಡಿದ ಹಿರಿಯರು ನಾಲಾಯಕ್ ಮತ್ತು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಚಾಕು ಹಾಕಿ‌ಬಂದವರು ಅವರೇ ಮಂತ್ರಿಗಳಾದರೇ ಬಿಜೆಪಿಯ ಪಕ್ಷ ದವರು ನಾಲಾಯಕ್ ಆಗಿದ್ದಾರೆ ಎಂದು ವ್ಯಂಗ್ಯವಾಗಿ ಮಾತನಾಡಿದರು. ಬಿಜೆಪಿಯ ಹಿರಿಯ ನಾಯಕರಿಗೆ ಅಭಿನಂದಿಸುತ್ತೇನೆ ಎಂದರು.

Conclusion:ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಪಕ್ಷದ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಕಲ್ಲುಕಂಬ ಪಂಪಾಪತಿ,
ETV Bharat Logo

Copyright © 2025 Ushodaya Enterprises Pvt. Ltd., All Rights Reserved.