ಬಳ್ಳಾರಿ: ಪುರಂದರ ದಾಸರು ಹೇಳಿದಂತೆ ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದಪೂಜೆಯೇ ಪರಮ ಸುಖವಯ್ಯ ಎನ್ನುವ ಮಾತಿನಂತೆ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವದ ಉದ್ಘಾಟನೆಯ ಭಾಗ್ಯ ನನಗೆ ದೊರೆತಿದೆ. ಇದು ನನ್ನ ಭಾಗ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಡಿ ಕೆ ಶಿವಕುಮಾರ್ ಅವರು ದೇವಿ ವಿಗ್ರಹಕ್ಕೆ ಪುಷ್ಪವನ್ನು ಹಾಕಿ ಸಾಷ್ಟಾಂಗ ನಮಸ್ಕಾರ ಮಾಡಿ ದೇವಿಯ ಆಶೀರ್ವಾದ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಂದ ಬಳಿಕ ಇದೇ ಮೊದಲ ಬಾರಿಗೆ ಉದ್ಘಾಟನೆಗೆ ಅವಕಾಶ ದೊರೆತಿದೆ. ಇದು ನನ್ನ ಭಾಗ್ಯ ಎಂದರು.
ಸಿಎಂ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಅವರಿಗೆ ಬೇರೆ ಬೇರೆ ಕಾರ್ಯಕ್ರಮಗಳಿವೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ವಿಜಯಪುರ ಸೇರಿದಂತೆ ಇತರೆ ಭಾಗಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿವಹಿಸಿದ್ದಾರೆ. ಕುಮಾರಸ್ವಾಮಿ ಸಹ ಬರುತ್ತಾರೆ ಎಂದು ತಿಳಿಸಿದರು.
ಶಾಸಕರಾದ ಆನಂದ ಸಿಂಗ್ ಮತ್ತು ಗಣೇಶ ಅವರ ಗಲಾಟೆ ವಿಡಿಯೋ ಬಿಡುಗಡೆ ವಿಚಾರವಾಗಿ ಪ್ರಕ್ರಿಯಿಸಿ ಈ ಗಲಾಟೆ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಈಗ ಬಂದಿದೀನಿ. ರಾಜಿ ಸಂಧಾನ ಮಾಡಿಸ್ತಿರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರೆಲ್ಲ ಒಂದೇ ಕಂಡ್ರಿ. ಇಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ ನಡೆಯುತ್ತಿದೆ. ಸಂತೋಷದ, ವೈಭವದಿಂದ ನೀವು ಆಚರಿಸಿ. ನಾನು ಆಚರಣೆ ಮಾಡುತ್ತೇನೆ ಎಂದು ಸಚಿವ ಡಿಕೆಶಿ ಹೇಳಿದ್ರು.