ಹೊಸಪೇಟೆ: ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಪುನರ್ ಪರಿಶೀಲಿಸಿ ಮೈಲಾರ ಜಾತ್ರೆಗೆ ಅನುಮತಿ ನೀಡಬೇಕು ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಆಗ್ರಹಿಸಿದ್ದಾರೆ.
ಜಿಲ್ಲೆಯ ಹೂವಿನಹಡಗಲಿಯಲ್ಲಿ ಮಾತನಾಡಿದ ಅವರು, ಮೈಲಾರಲಿಂಗನ ಕಾರ್ಣಿಕ ಕೇಳಲು ಸದ್ಭಕ್ತರು ಬರುತ್ತಾರೆ. ಈಗಾಗಲೇ ಭಕ್ತರಿಂದ ಸಾವಿರಾರು ಕರೆ ಬರುತ್ತಿವೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸುವುದಕ್ಕೆ ಬರುವುದಿಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ಮೂಲಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಈಗ ಎಲ್ಲಾ ಜಾತ್ರೆಗಳು ನಡೆಯುತ್ತಿವೆ. ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಸರಳವಾಗಿ ನಡೆದಿದೆ. ಅದೇ ರೀತಿ ಮೈಲಾರ ಜಾತ್ರೆಯನ್ನು ನಡೆಸಬೇಕು. ಜಾತ್ರೆಯನ್ನು ಅದ್ಧೂರಿಯಾಗಿ ಮಾಡುವ ಉದ್ದೇಶ ನಮ್ಮದಲ್ಲ. ಮೈಲಾರ ಜಾತ್ರೆಗೆ ಸಾವಿರಾರು ವರ್ಷದ ಇತಿಹಾಸವಿದೆ. ಜಿಲ್ಲಾಧಿಕಾರಿ ಏಕಪಕ್ಷೀಯ ನಿರ್ಣಯ ತಗೆದುಕೊಳ್ಳದೆ ಶಾಸಕರು, ಭಕ್ತರು, ಸ್ಥಳೀಯರ ಸಮ್ಮುಖದಲ್ಲಿ ಜಾತ್ರೆಯ ಕುರಿತು ನಿರ್ಣಯ ತಗೆದುಕೊಳ್ಳಬೇಕು ಎಂದರು.