ಬಳ್ಳಾರಿ: ಸೂಕ್ಷ್ಮ ನೀರಾವರಿ ಪದ್ಧತಿಯ ಮಾರ್ಗ ಸೂಚಿಗಳನ್ನು ಸರ್ಕಾರ ಬದಲಿಸಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕೆಂದು ಜಿಲ್ಲಾ ಸೂಕ್ಷ್ಮ ನೀರಾವರಿ ಪರಿಕರಗಳ ವಿತರಕರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.
ಅಲ್ಲದೆ ರೈತರು ಆರ್.ಟಿ.ಜಿ.ಎಸ್ ಮೂಲಕ ತಮ್ಮ ಪಾಲಿನ ಹಣ ತುಂಬಬೇಕು ಎಂದಿದೆ. ಇದರಿಂದ ರೈತರಿಗೆ ಯೋಜನೆಯು ಸಮರ್ಪಕವಾಗಿ ತಲುಪುವುದು ಕಷ್ಟವಾಗಲಿದೆ. ಅದಕ್ಕಾಗಿ ಈ ಹಿಂದಿನಂತೆ ವಿತರಕರಿಂದ ಬಿಲ್ ಪಡೆದು ವಂತಿಗೆ ಹಣವನ್ನು ವಿತರಕರಿಗೆ ನೀಡಬೇಕು. ಆರ್ಥಿಕ ವರ್ಷ ಪ್ರಾರಂಭದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡಿ ಕಾರ್ಯಾದೇಶ ನೀಡಬೇಕು. ಬೆಲೆ ಏರಿಕೆಗೆ ಬದಲಾಗಿ ದರ ಪಟ್ಟಿ ಬದಲಿಸಬೇಕು ಎಂದು ಅವರು ಒತ್ತಾಯಿಸಿದರು.