ಬಳ್ಳಾರಿ: ಜಿಲ್ಲಾಡಳಿತ ನೀಡಿದ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿದ್ದು, ಪ್ಲಾಂಟ್ ಕಾರ್ಯನಿರ್ವಹಣೆ ಕೂಡ ಇಳಿಮುಖಗೊಳಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಮಾರ್ಚ್ 5ರಂದು 35,398 ಕಾರ್ಮಿಕರು ವಿವಿಧ ಪ್ಲಾಂಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಾ. 28ಕ್ಕೆ ಅದರ ಪ್ರಮಾಣವನ್ನ ಜಿಲ್ಲಾಡಳಿತ ಸೂಚನೆ ಮೇರೆಗೆ 13,303 ಗೆ ಇಳಿಸಲಾಗಿತ್ತು. ಮಾ. 31ರಂದು ಜಿಲ್ಲಾಧಿಕಾರಿ ನೀಡಿದ ಸೂಚನೆ ಅನ್ವಯ ಕಾರ್ಮಿಕರ ಬಳಕೆಯನ್ನು 12 ಸಾವಿರದಿಂದ 9,294ಕ್ಕೆ ಏ. 3ರಿಂದ ಅನ್ವಯವಾಗುವಂತೆ ಇಳಿಸಲಾಗಿದೆ. ನಿತ್ಯ 12 ಸಾವಿರ ಟನ್ ಕಬ್ಬಿಣದ ಕಚ್ಛಾ ವಸ್ತು ಪ್ಲಾಂಟ್‍ಗೆ ಬರುತ್ತಿದೆ. ಈ ಎಲ್ಲ ಕಾರ್ಮಿಕರನ್ನು 24 ಗಂಟೆಗಳ ಕಾರ್ಯನಿರ್ವಹಣೆಗೆ ಶಿಪ್ಟ್ ಅನುಸಾರ ಬಳಸಿಕೊಳ್ಳಲಾಗುತ್ತಿದೆ.
ಈ ಪ್ಲಾಂಟ್‍ಗಳಲ್ಲಿ ಒಂದೇ ಬಾರಿಗೆ 4500ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿಲ್ಲ. ಈ ಎಲ್ಲ ಕಾರ್ಮಿಕರು ನಮ್ಮ ಟೌನ್‍ಶಿಪ್ ವ್ಯಾಪ್ತಿಯಲ್ಲಿದ್ದಾರೆ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿದೆ. ಆರೋಗ್ಯ ಹಾಗೂ ಇನ್ನಿತರ ತಾವು ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಅವರು ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತದಲ್ಲಿ ಬಳ್ಳಾರಿ ಮಾರ್ಚ್ 24 ರಂದು ವರದಿ ಪ್ರಸಾರವಾಗಿತ್ತು.