ETV Bharat / state

ರಾಜ್ಯದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಜನಸೈನ್ಯ ಸಂಘಟನೆ ಆಗ್ರಹ - central Government

ರಾಜ್ಯದಲ್ಲಿ ಉಂಟಾದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಲು ಜನಸೈನ್ಯ ಸಂಘಟನೆ ಆಗ್ರಹಿಸಿದೆ. ರಾಜ್ಯದಲ್ಲಿ ನೆರೆ ಪರಿಹಾರವಾಗಿ ಘೋಷಿಸಿರುವ ಮೊತ್ತ ಯಾವುದಕ್ಕೂ ಸಾಲದು. ಆದ್ದರಿಂದ ರಾಷ್ಟ್ರೀಯ ವಿಪತ್ತಾಗಿ ಘೋಷಿಸಿ ಹೆಚ್ಚಿನ ಪರಿಹಾರಧನವನ್ನು ನೀಡಬೇಕು ಎಂದು ಒತ್ತಾಯಿಸಿದೆ.

ರಾಷ್ಟ್ರೀಯ ವಿಪತ್ತಾಗಿ ಘೋಷಿಸಲು ಜನಸೈನ್ಯ ಸಂಘಟನೆ ಆಗ್ರಹ
author img

By

Published : Aug 22, 2019, 11:13 AM IST

ಬಳ್ಳಾರಿ: ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ನೀಡುವ ಸಲುವಾಗಿ ರಾಜ್ಯದ ನೆರೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಕರ್ನಾಟಕ ಜನಸೈನ್ಯ ಸಂಘಟನೆ ಆಗ್ರಹಿಸಿದೆ.

ನಗರದ ಡಿಸಿ ಕಚೇರಿ ಆವರಣದಲ್ಲಿ ಜನಸೈನ್ಯ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಯರಿಸ್ವಾಮಿ ಮಾತನಾಡಿ, ನೆರೆ ಹಾವಳಿಯಿಂದ ಮುಂಗಾರು ಹಂಗಾಮಿನಲ್ಲಿ ಸರಿಸುಮಾರು 67,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ಅದಕ್ಕೆ ಸೂಕ್ತ ಪರಿಹಾರ ಒದಗಿಸಲು ಉಭಯ ಸರ್ಕಾರಗಳು ಮುಂದಾಗಬೇಕು. ಅಲ್ಲದೇ, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಆಯ್ದ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ನೂರಾರು ಮನೆಗಳು ಕುಸಿತ ಕಂಡಿವೆ. ಕೇವಲ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಆ ಪರಿಹಾರ ಶೆಡ್ ಹಾಕಿಕೊಳ್ಳಲಿಕ್ಕೂ ಸಾಲದು. ಅದನ್ನು 25 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ವಿಪತ್ತಾಗಿ ಘೋಷಿಸಲು ಜನಸೈನ್ಯ ಸಂಘಟನೆ ಆಗ್ರಹ

ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಖರೀದಿಗೆ ಕೇವಲ 10,000 ರೂ.ಗಳನ್ನು ಮಾತ್ರ ಹೆಚ್ಚಿಸಿದ್ದು, ಅದು ಕೂಡ ಹೆಚ್ಚಿಸಬೇಕು. ಹಾಗೂ ನೆರೆ ಹಾವಳಿಯಲ್ಲಿ ಸಾವನ್ನಪ್ಪಿದ್ದ ಅವಲಂಬಿತ ಕುಟುಂಬ ಸದಸ್ಯರ ಜೀವನೋಪಾಯಕ್ಕಾಗಿ ಕೇವಲ 5 ಲಕ್ಷ ರೂ.ಗಳ ಪರಿಹಾರ ಧನ ಘೋಷಣೆ ಮಾಡಿದ್ದಾರೆ.‌ ಅದನ್ನು 20-25 ಲಕ್ಷದವರೆಗೆ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ.

Intro:ನೆರೆ ಸಂತ್ರಸ್ಥರಿಗೆ ಪರಿಹಾರ: ರಾಷ್ಟ್ರೀಯ ವಿಪತ್ತು ಘೋಷಣೆಗೆ ಜನಸೈನ್ಯ ಸಂಘಟನೆ ಆಗ್ರಹ
ಬಳ್ಳಾರಿ: ಇಡೀ ದೇಶವ್ಯಾಪಿ ಕುಂಭದ್ರೋಣ ಮಳೆ ಸುರಿದಿದ್ದು, ನೆರೆ ಹಾವಳಿಯಿಂದ ತತ್ತರಿಸಿದವರಿಗೆ ಸಮಾರೋಪಾದಿಯಲ್ಲಿ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಬೇಕೆಂದು ಕರ್ನಾಟಕ ಜನಸೈನ್ಯ ಸಂಘಟನೆಯು ಆಗ್ರಹಿಸಿದೆ.
ಬಳ್ಳಾರಿ ನಗರದ ಡಿಸಿ ಕಚೇರಿಯ ಆವರಣದಲ್ಲಿರುವ
ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ
ಜನಸೈನ್ಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಯರಿಸ್ವಾಮಿ ಅವರು ಮಾತನಾಡಿ, ಕೇಂದ್ರ ಮತ್ತು
ರಾಜ್ಯ ಸರ್ಕಾರಗಳು ಈ ನೆರೆ ಸಂತ್ರಸ್ಥರಿಗೆ ಅಗತ್ಯ ಸೌಕರ್ಯಗಳನ್ನು ನೀಡುವ ಸಲುವಾಗಿ ಕೂಡಲೇ
ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಬೇಕೆಂದು
ಒತ್ತಾಯಿಸಿದ್ದಾರೆ.
ಈ ನೆರೆ ಹಾವಳಿಯಿಂದ ಮುಂಗಾರು ಹಂಗಾಮಿನಲ್ಲಿ ಸರಿಸುಮಾರು 67,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟ ಉಂಟಾಗಿದೆ. ಅದಕ್ಕೆ ಸೂಕ್ತ ಪರಿಹಾರ ಒದಗಿಸಲು ಉಭಯ ಸರ್ಕಾರಗಳು ಮುಂದಾಗಬೇಕೆಂದರು‌.

Body:ಅಲ್ಲದೇ, ಉತ್ತರ ಕರ್ನಾಟಕ ಭಾಗದಲ್ಲಿನ ನೆರೆ ಹಾವಳಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಆಯ್ದ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಅಪಾರ ಪ್ರಮಾಣದ ಮನೆಗಳು ಕುಸಿತ ಕಂಡಿವೆ. ಕೇವಲ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಬಿಎಸ್ ವೈ ಘೋಷಣೆ ಮಾಡಿದ್ದಾರೆ. ಆ ಪರಿಹಾರ ಶೆಡ್ ಹಾಕಿಕೊಳ್ಳಲಿ ಕ್ಕೂ ಸಾಲದು. ಅದನ್ನು 25 ಲಕ್ಷಕ್ಕೇ ಏರಿಕೆ ಮಾಡಬೇಕೆಂದರು.
ನೆರೆ ಸಂತ್ರಸ್ಥರ ಅಗತ್ಯ ವಸ್ತುಗಳ ಖರೀದಿಗೆ ಕೇವಲ 10,000 ರೂ.ಗಳನ್ನು ಮಾತ್ರ ಹೆಚ್ಚಿಸಿದ್ದು, ಅದು ಕೂಡ ಹೆಚ್ಚಿಸಬೇಕು. ಹಾಗೂ ನೆರೆ ಹಾವಳಿಯಲ್ಲಿ ಸಾವನ್ನಪ್ಪಿದ್ದ ಅವಲಂಬಿತ ಕುಟುಂಬ ಸದಸ್ಯರ ಜೀವನೋಪಾಯಕ್ಕಾಗಿ ಕೇವಲ 5 ಲಕ್ಷ ರೂ.ಗಳ ಪರಿಹಾರಧನ ಘೋಷಣೆ ಮಾಡಿದ್ದಾರೆ.‌ ಅದು ಕೂಡ 20-25 ಲಕ್ಷದವರೆಗೆ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಈ ನೆರೆ ಸಂತ್ರಸ್ಥರ ತತ್ ಕ್ಷಣ ನೆರವಿಗೆ ಅನುಕೂಲ ಆಗುವಂತಹ ಕಾರ್ಯಗಳು ಆಗಬೇಕಿದೆ. ಆಗಾಗಿ, ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_JANA_SAINY_SANGHATNE_PRESS_MEET_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.