ETV Bharat / state

ಕರ್ತವ್ಯ ನಿರ್ಲಕ್ಷ್ಯ- ಅಧಿಕಾರ ದುರುಪಯೋಗ: ಮೂವರ ಅಮಾನತು ಮಾಡಿದ ಡಿಸಿ

author img

By

Published : Nov 21, 2019, 5:53 PM IST

ಕರ್ತವ್ಯ ನಿರ್ಲಕ್ಷ್ಯ ಮತ್ತು ಅಧಿಕಾರ ದುರುಪಯೋಗ ಆಧಾರದ ಮೇಲೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗ್ರಾಮಲೆಕ್ಕಾಧಿಕಾರಿ, ದ್ವಿತೀಯ ಹಾಗೂ ಪ್ರಥಮ‌  ದರ್ಜೆ ಸಹಾಯಕರು ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕರ್ತವ್ಯ ನಿರ್ಲಕ್ಷ್ಯ ಮತ್ತು ಅಧಿಕಾರ ದುರುಪಯೋಗ: ಮೂವರ ಅಮಾನತಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ

ಬಳ್ಳಾರಿ: ಕರ್ತವ್ಯ ನಿರ್ಲಕ್ಷ್ಯ ಮತ್ತು ಅಧಿಕಾರ ದುರುಪಯೋಗ ಆಧಾರದ ಮೇಲೆ ಗ್ರಾಮಲೆಕ್ಕಾಧಿಕಾರಿ, ದ್ವಿತೀಯ ಹಾಗೂ ಪ್ರಥಮ‌ ಸಹಾಯಕ ದರ್ಜೆ ಸಹಾಯಕರನ್ನು ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಹಡಗಲಿ ತಾಲೂಕಿನ ಅಡವಿ ಮಲ್ಲನಕೇರಿ, ಗೋವಿಂದಪುರ ತಾಂಡಾ-01, ಹುಗಲೂರು, ಸೋಗಿ ಪ್ರಭಾರೆಯ ಗ್ರಾಮಲೆಕ್ಕಾಧಿಕಾರಿ ಶಂಭುಲಿಂಗ ಹಾಗೂ ಬಳ್ಳಾರಿ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ನಾಗವೇಣಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ನಿಲಂಬನೆಗೊಳಿಸಿ ಆದೇಶಿಸಲಾಗಿದೆ.

D C  S.S Nakul, suspended the three officers

ಸದರಿ ನೌಕರರು ನಿಲಂಬನಾ ಅವಧಿಯಲ್ಲಿ ಕೆಸಿಎಸ್‍ಆರ್ 1958ರ ನಿಯಮ 98ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಈ ಅಮಾನತು ಅವಧಿಯಲ್ಲಿ ಸಕ್ಷಮ ಅಧಿಕಾರಿಗಳ ಪರವಾನಗಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ‌ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದರ ಆಧಾರದ ಮೇರೆಗೆ ಸಿರಗುಪ್ಪ ತಾಲೂಕು ಕಚೇರಿ ಪ್ರಥಮ‌ದರ್ಜೆ ಸಹಾಯಕ ಮದ್ದಿಲೆಟ್ಟಿ ಅವರನ್ನು ಅಮಾನತುಗೊಳಿಸಿ ಡಿಸಿ ನಕುಲ್ ಅವರು ಆದೇಶ ಹೊರಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಅಮಾನತು ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಮತ್ತು ಅಮಾನತು ಅವಧಿಯಲ್ಲಿ ನೌಕರರು ಸಕ್ಷಮ ಅಧಿಕಾರಿಗಳ ಪರವಾನಗಿ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದಲ್ಲ ಎಂದು ಆದೇಶಿಸಲಾಗಿದೆ.

ಮದ್ದಿಲೆಟ್ಟಿ ಅವರು ಸಿರಗುಪ್ಪ ತಾಲೂಕು ಕಚೇರಿ ಸಿರಿಗೇರಿ‌ ಗ್ರಾಮದ ಸ.ನಂ.189(ಪೈಕಿ) ವಿಸ್ತೀರ್ಣ: 13.45 ಎಕರೆ ಸರ್ಕಾರಿ(ತೆಕ್ಕಲಕೋಟೆ) ಜಮೀನನ್ನು ಅನಧಿಕೃತವಾಗಿ ತೆಕ್ಕಲಕೋಟೆಪ್ಪ ದುರುಗಪ್ಪ ಸಿರಿಗೇರಿ ಗ್ರಾಮ ಇವರ ಹೆಸರಿಗೆ ಹಕ್ಕುಬದಲಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆ ಅಮಾನತುಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:Body:
ಕರ್ತವ್ಯ ನಿರ್ಲಕ್ಷ್ಯ ಮತ್ತು ದುರುಪಯೋಗ ಆಧಾರದ ಮೇಲೆ ಗ್ರಾಮಲೆಕ್ಕಾಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕರೊಬ್ಬರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ(ವರ್ಗಿಕರಣ ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಗಳು 1957ರ ನಿಯಮ 10(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಡಗಲಿ ತಾಲೂಕಿನ ಅಡವಿ ಮಲ್ಲನಕೇರಿ,ಗೋವಿಂದಪುರ ತಾಂಡಾ-01,ಹುಗಲೂರು,ಸೋಗಿ ಪ್ರಭಾರೆಯ ಗ್ರಾಮಲೆಕ್ಕಾಧಿಕಾರಿ ಶಂಭುಲಿಂಗ ಹಾಗೂ ಬಳ್ಳಾರಿ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ನಾಗವೇಣಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸರಕಾರಿ ಸೇವೆಯಿಂದ ನಿಲಂಬನೆಗೊಳಿಸಿ ಆದೇಶಿಸಲಾಗಿದೆ.

ಸದರಿ ನೌಕರರು ನಿಲಂಬನಾ ಅವಧಿಯಲ್ಲಿ ಕೆಸಿಎಸ್‍ಆರ್ 1958ರ ನಿಯಮ 98ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಈ ಅಮಾನತು ಅವಧಿಯಲ್ಲಿ ಸಕ್ಷಮ ಅಧಿಕಾರಿಗಳ ಪರವಾನಿಗೆ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಅವರು ತಿಳಿಸಿದ್ದಾರೆ.

ಗ್ರಾಮಲೆಕ್ಕಾಧಿಕಾರಿ ಶಂಭುಲಿಂಗ ಅವರ ಲೀನ್ ಅನ್ನು ಸಿರಗುಪ್ಪ ತಾಲೂಕಿಗೆ ಹಾಗೂ ನಾಗವೇಣಿ ಅವರ ಲೀನ್ ಅನ್ನು ಕೂಡ್ಲಿಗಿ ತಾಲೂಕಿಗೆ ವರ್ಗಾಯಿಸಿ ಡಿಸಿ ನಕುಲ್ ಅವರು ಆದೇಶ ಹೊರಡಿಸಿದ್ದಾರೆ.

ಬಳ್ಳಾರಿ ತಾಲೂಕು ಕಚೇರಿಯಲ್ಲಿರುವ ದ್ವಿತೀಯ ದರ್ಜೆ ಸಹಾಯಕಿ ನಾಗವೇಣಿ ಅವರು ಕಂದಾಯ ನಿರೀಕ್ಷಕ ಸುರೇಶ ಬಾಬು ಅವರು ಗ್ರಾಮಲೆಕ್ಕಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ದೋಷಾರೋಪಣ ಪಟ್ಟಿ ತಯಾರಿಸಿ ಸಲ್ಲಿಸುವಂತೆ ಸೂಚಿಸಲಾಗಿತ್ತು. 3 ವರ್ಷ ಗತಿಸಿದರೂ ಇವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿರುವುದಿಲ್ಲ. ಪದೋನ್ನತಿ ಸಮಿತಿ ಸಭೆ ನಡೆಸಲು ಅರ್ಹ ಸಿಬ್ಬಂದಿಗಳ ವಿವರ ಸಲ್ಲಿಸುವಂತೆ ಸೂಚಿಸಿದಾಗ ಸದರಿ ಸಿಬ್ಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕಡತ ಬಾಕಿ ಇದ್ದಾಗಿಯೂ ಅದನ್ನು ಪರಿಶೀಲಿಸದೇ ಸುರೇಶಬಾಬು ಅವರ ಬಗ್ಗೆ ವಿಶೇಷ ವರದಿ ಸಲ್ಲಿಸುವ ಸಮಯದಲ್ಲಿ ಸರಿಯಾಗಿ ಪರಿಶೀಲಿಸದೇ ಯಾವುದೇ ವಿಚಾರಣೆ ಬಾಕಿ ಇರುವುದಿಲ್ಲವೆಂದು ವರದಿ ಸಲ್ಲಿಸಿದ್ದರು. ಪದೋನ್ನತಿ ಸಮಿತಿಯ ಮುಂದೆ ಮಂಡಿಸಿದಾಗ ಸದರಿ ಸಿಬ್ಬಂದಿ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರುವುದು ತಿಳಿದುಬಂದಿದೆ. ಈ ರೀತಿಯ ಗಂಭೀರ ವಿಷಯಗಳ ಬಗ್ಗೆ ನಿರ್ಲಕ್ಷ್ಯದಿಂದ ಕಡತ ಪರಿಶೀಲಿಸದೇ ಮೇಲಾಧಿಕಾರಿಗಳಿಗೆ ತಪ್ಪು ವರದಿ ಸಲ್ಲಿಸಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದ ಕಾರಣ ಅವರನ್ನು ಅಮಾನತುಪಡಿಸಲಾಗಿದೆ.

ಶಂಭುಲಿಂಗ ಗ್ರಾಮಲೆಕ್ಕಾಧಿಕಾರಿ ಸೋಗಿ ಪ್ರಭಾರೆ ಹುಗುಲೂರು, ಗೋವಿಂದ ಪುರ ತಾಂಡ-01, ಅಡವಿ ಮಲ್ಲನಕೇರಿ ಗ್ರಾಮಲೆಕ್ಕಾಧಿಕಾರಿ ಇವರು 2019ರ ಸೆಪ್ಟಂಬರ್. ಮತ್ತು ಅಕ್ಟೋಬರ್ ತಿಂಗಳಲ್ಲಿ ಅತೀವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಆರ್‍ಜಿಆರ್‍ಎಚ್‍ಸಿಎಲ್ ತಂತ್ರಾಂಶದಲ್ಲಿ ಡಾಟಾಎಂಟ್ರಿ ಮಾಡಿ ಪರಿಹಾರ ನೀಡಲು ಸೂಚಿಸಲಾಗಿತ್ತು. ಅದರಂತೆ ಹಡಗಲಿ
ತಾಲೂಕಿನಲ್ಲಿ 2019ರ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಬಿದ್ದ ಮನೆಗಳ ನೈಜತೆ ಬಗ್ಗೆ ಪರಿಶೀಲಿಸಲು ತಹಶೀಲ್ದಾರರು ಹೆಚ್.ಬಿ ಹಳ್ಳಿ ಇವರನ್ನು ನಿಯೋಜಿಸಿದ್ದು, ಸದರಿ ಅಧಿಕಾರಿಗಳು ಹಡಗಲಿ ತಾಲೂಕಿನ ಇಟ್ಟಿಗಿ ಹೋಬಳಿಯಲ್ಲಿ ಬರುವ ಗ್ರಾಮಗಳ ಬಿದ್ದ ಮನೆಗಳ ಕುರಿತು ಸ್ಥಳ ತನಿಖೆ ಮಾಡಿ ವರದಿ ಸಲ್ಲಿಸಿದ್ದು ಸದರಿ
ಅಧಿಕಾರಿಗಳ ವರದಿಯ ಪ್ರಕಾರ ಹುಗುಲೂರು, ಗೋವಿಂದಪುರ ತಾಂಡ-01, ಅಡವಿ ಮಲ್ಲನಕೇರಿ ಗ್ರಾಮಗಳಲ್ಲಿ
ತುಂಬಾ ವ್ಯತ್ಯಾಸದ ವರದಿಗಳನ್ನು ಗ್ರಾಮಲೆಕ್ಕಾಧಿಕಾರಿಗಳು ಸಲ್ಲಿಸಿದ್ದಾರೆ ಎಂದು ತಹಶೀಲ್ದಾರರು ವರದಿ ಸಲ್ಲಿಸಿರುತ್ತಾರೆ.
ವಾಸ್ತವವಾಗಿ ಸೆಪ್ಟಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ ಉಂಟಾದ ಅತೀವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಬಗ್ಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಸಂಬಂಧಿಸಿದ ಎಲ್ಲಾ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ. ಆದರೆ ಹಡಗಲಿ ತಾಲೂಕಿನ ಸೋಗಿ ಪ್ರಭಾರೆ ಹುಗುಲೂರು, ಗೋವಿಂದ ಪುರ
ತಾಂಡ-01, ತಡವಿ ಮಲ್ಲನಕೇರಿ ಗ್ರಾಮಗಳಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ಮಾಡುವಲ್ಲಿ ಗ್ರಾಮಲೆಕ್ಕಾಧಿಕಾರಿ ಶಂಭುಲಿಂಗ ಇವರು ಕರ್ತವ್ಯ ನಿರ್ಲಕ್ಷ ತೋರಿ ಬೇಜವಬ್ದಾರಿಯಿಂದ ವರದಿ ಸಲ್ಲಿಸಿದ್ದಾರೆ. ವಾಸ್ತವವಾಗಿ ಕೇವಲ 38 ಮನೆಗಳ ಮಾತ್ರ ಹಾನಿಗೊಳಗಾಗಿದ್ದು, 86 ಮನೆಗಳು ಹಾನಿಗೊಳಗಾಗಿರುತ್ತವೆ ಎಂದು
ವರದಿ ಸಲ್ಲಿಸಿದ್ದು, ಒಟ್ಟು 48 ಮನೆಗಳು ಹಾನಿಗೊಳಗಾಗದಿದ್ದರೂ ತಪ್ಪು ವರದಿ ಸಲ್ಲಿಸಿ ಸರ್ಕಾರದ ಬೊಕ್ಕಸಕ್ಕೆ 
ಸುಮಾರು ರೂ.24ಲಕ್ಷ ಹೆಚ್ಚುವರಿ ಹಣ ನಷ್ಟವಾಗಲು ಕಾರಣವಾಗುವ ರೀತಿಯಲ್ಲಿ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿಯಿಂದ ತನ್ನ ಕರ್ತವ್ಯವನ್ನು ದುರುಪಯೋಗ ಪಡಿಸಿಕೊಂಡು ಮೇಲಾಧಿಕಾರಿಗಳಿಗೆ ತಪ್ಪಾಗಿ ವರದಿಯನ್ನು ಸಲ್ಲಿಸಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಶಂಭುಲಿಂಗ ಅವರನ್ನು ಅಮಾನತು ಮಾಡಲಾಗಿದೆ.

*Conclusion:ಕೆಲಸದಲ್ಲಿ ನಿರ್ಲಕ್ಷ್ಯ:ಮದ್ದಿಲೆಟ್ಟಿ ಅಮಾನತು*

ಸರಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ‌ ಕರ್ತವ್ಯ ದುರುಪಯೋಗಪಡಿಸಿಕೊಂಡಿರುವುದರ ಆಧಾರದ ಮೇರೆಗೆ ಸಿರಗುಪ್ಲ ತಾಲೂಕು ಕಚೇರಿ ಪ್ರಥಮ‌ದರ್ಜೆ ಸಹಾಯಕ ಮದ್ದಿಲೆಟ್ಟಿ ಅವರನ್ನು ಅಮಾನತುಗೊಳಿಸಿ ಡಿಸಿ ನಕುಲ್ ಅವರು ಆದೇಶ ಹೊರಡಿಸಿದ್ದಾರೆ.
ಕೆಸಿಎಸ್ಆರ್ ನಿಯಮಗಳು 1957ರ ನಿಯಮ 10(1)ರಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಹಾಲಿ ಸಿರಗುಪ್ಪ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಮದ್ದಿಲೇಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಅಮಾನತು ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಮತ್ತು ಅಮಾನತು ಅವಧಿಯಲ್ಲಿ ನೌಕರರು ಸಕ್ಷಮ ಅಧಿಕಾರಿಗಳ ಪರವಾನಿಗೆ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದಲ್ಲ. ನೌಕರನ ಲೀನ್ ಅನ್ನು ಕೂಡ್ಲಿಗಿ ತಾಲೂಕಿಗೆ ವರ್ಗಾಯಿಸಿ ಆದೇಶಿಸಲಾಗಿದೆ.

ಮದ್ದಿಲೆಟ್ಟಿ ಅವರು ಗ್ರಾಮಲೆಕ್ಕಾಧಿಕಾರಿಗಳು ಹಾಲಿ ಸಿರಗುಪ್ಪ ತಾಲೂಕು ಕಚೇರಿ ಪ್ರದಸ ಅವರು ಸಿರಿಗೇರಿ‌ ಗ್ರಾಮದ ಸ.ನಂ.189(ಪೈಕಿ) ವಿಸ್ತೀರ್ಣ: 13.45 ಎಕರೆ ಸರಕಾರಿ(ತೆಕ್ಕಲಕೋಟೆ) ಜಮೀನನ್ನು ಅನಧಿಕೃತವಾಗಿ ತೆಕ್ಕಲಕೋಟೆಪ್ಪ ತಂ ದುರುಗಪ್ಪ ಸಿರಿಗೇರಿ ಗ್ರಾಮ ಇವರ ಹೆಸರಿಗೆ ಹಕ್ಕುಬದಲಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆ ಅಮಾನತುಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.