ETV Bharat / state

ಬಳ್ಳಾರಿ: ತಾರಾನಗರ ಜಲಾಶಯದ ಹೊರಹರಿವಿಗೆ ಅಪಾರ ಬೆಳೆ ಹಾನಿ, ರೈತ ಕಂಗಾಲು

author img

By

Published : Aug 7, 2022, 12:55 PM IST

ಬಳ್ಳಾರಿಯಲ್ಲಿ ಮಳೆ ಮುಂದುವರಿದಿದ್ದು ತಾರಾನಗರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಜಲಾಶಯದ ಹೊರಹರಿವಿನಿಂದಾಗಿ ಸುಮಾರು 400 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.

crop loss due to Outflow of Taranagara reservoir in Bellary
ಬಳ್ಳಾರಿಯಲ್ಲಿ ಮಳೆ ಅವಾಂತರ

ಬಳ್ಳಾರಿ: ನಿರಂತರ ಮಳೆಗೆ ಜಿಲ್ಲೆಯ ಜನರು ನಲುಗಿದ್ದಾರೆ. ತಾರಾನಗರ ಜಲಾಶಯದಿಂದ ಹೊರಬಿಡುವ ನೀರೇ ಕುರೇಕುಪ್ಪ, ಬಸಾಪುರ, ತಾಳೂರು ಗ್ರಾಮಗಳ ತರಕಾರಿ ಬೆಳೆಯುವ ರೈತರಿಗೆ ಶಾಪವಾಗಿ‌ ಪರಿಣಮಿಸಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆಸಿರುವ ತರಕಾರಿ ಈಗಾಗಲೇ ನೀರು ಪಾಲಾಗಿದೆ. ‌

ಸಂಡೂರು ತಾಲೂಕಿನಲ್ಲಿ ತಾರಾನಗರ ಜಲಾಶಯ (ನಾರಿಹಳ್ಳ)ದ ಅನತಿ ದೂರದಲ್ಲಿಯೇ ಕುರೇಕುಪ್ಪ, ಬಸಾಪುರ, ತಾಳೂರು ಸೇರಿದಂತೆ ಕೆಲ ಗ್ರಾಮಗಳು ಬರುತ್ತವೆ. ಕುರೇಕುಪ್ಪದಲ್ಲಿ ಹೆಚ್ಚಾಗಿ ತರಕಾರಿ ಬೆಳೆಯುವುದರಿಂದ ಇದನ್ನು ಅಖಂಡ ಬಳ್ಳಾರಿ ಜಿಲ್ಲೆಯ ತರಕಾರಿ ಕಣಜ ಎಂದೇ ಕರೆಯುತ್ತಾರೆ. ಇಲ್ಲಿ ಬೆಳೆದ ತರಕಾರಿಗಳು ಬಳ್ಳಾರಿ ಮತ್ತು ಹೊಸಪೇಟೆ ಮಾರುಕಟ್ಟೆಗೆ ಪೂರೈಕೆಯಾಗುತ್ತವೆ.

ತಾರಾನಗರ ಜಲಾಶಯದ ಹೊರಹರಿವಿಗೆ ಬೆಳೆ ಹಾನಿ

ಮಳೆಯಿಂದ ಹಳ್ಳ ತುಂಬಿ ಹರಿದರೆ ಹಳ್ಳದ ಎರಡೂ‌ ಬದಿಯಲ್ಲಿರುವ ಜಮೀನುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ತಾರಾನಗರ ಜಲಾಶಯದಿಂದ ನೀರನ್ನು ಏಕಾಏಕಿ ಹಳ್ಳಕ್ಕೆ ಬಿಡುವುದರಿಂದ ಹಳ್ಳದ ಇಬ್ಬದಿಯಲ್ಲಿರುವ ಜಮೀನುಗಳು ಜಲಾವೃತವಾಗುತ್ತವೆ. ಜಲಾಶಯಕ್ಕೆ ಕಬ್ಬಿಣದ ಅದಿರಿನ ಗುಡ್ಡಗಳ ಮೂಲಕ ಕೆಂಪನೆಯ ನೀರು ಹರಿದು ಬರುತ್ತದೆ. ಜಲಾಶಯದಿಂದ ಇಂತಹ ನೀರು ಹಳ್ಳಕ್ಕೆ ಬಿಡುವುದರಿಂದ ಜಮೀನುಗಳ ಜಲಾವೃತವಾಗಿ ಬೆಳೆದಿರುವ ತರಕಾರಿ ಬೆಳೆಗಳು ಹಾನಿಯಾಗುತ್ತಿವೆ. ಹಳ್ಳದ ನೀರು ಕಡಿಮೆಯಾದ ಮೇಲೆ ಕೆಂಪನೆಯ ಕೆನೆಯಾಕಾರದ ಪದರ ಜಮೀನಿನ ಮೇಲೆ ಹರಡಿ ಬೆಳೆ ನಾಶವಾಗುತ್ತದೆ.

ಜಲಾಶಯದಿಂದ ಆಗಾಗ ನೀರು ಹೊರಬಿಟ್ಟರೆ ಏನೂ ಸಮಸ್ಯೆ ಇಲ್ಲ. ಆದರೆ ಒಮ್ಮೆಲೆ ಯಾವುದೇ ಸೂಚನೆ ಇಲ್ಲದೇ ಬಿಡುವುದು ರೈತರನ್ನು ಆತಂಕಕ್ಕೆ ತಳ್ಳಿದೆ. ಈ ಬಾರಿ ಜಲಾಶಯದಿಂದ ಹಳ್ಳಕ್ಕೆ ಬಿಟ್ಟಿರುವ ನೀರಿನಿಂದಾಗಿ ಕುರೇಕುಪ್ಪದ ಜಮೀನಿನಲ್ಲಿ ಬೆಳೆದಿರುವ ಹೂಕೋಸು, ಈರೇಕಾಯಿ, ತುಪ್ರೆಕಾಯಿ, ಚೌಳೇ ಕಾಯಿ, ಬೆಂಡೆಕಾಯಿ, ಈರುಳ್ಳಿ, ಟೊಮೆಟೋ, ಮೆಣಸಿನಕಾಯಿ ಸೇರಿದಂತೆ ಸುಮಾರು 400 ಎಕರೆ ಪ್ರದೇಶದಲ್ಲಿ ಬೆಳೆದ ತರಿಕಾರಿ ಬೆಳೆ ಹಾನಿಯಾಗಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಡೋಣಿ ನದಿ ಪ್ರವಾಹ: ಆಂಜನೇಯ ಸ್ವಾಮಿ ದೇಗುಲ ಜಲಾವೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.