ಬಳ್ಳಾರಿ : ನಗರದ ಹೃದಯ ಭಾಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಿಡಾಡಿ ದನಗಳು ಬೀಡು ಬಿಟ್ಟಿವೆ.
ನಗರದ ಗಡಿಗಿ ಚನ್ನಪ್ಪ ವೃತ್ತದಿಂದ ಅಣತಿ ದುರದಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಅತ್ಯಾಧುನಿಕವಾಗಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಬಸ್ ನಿಲ್ದಾಣದ ಸೌಂದರ್ಯೀಕರಣಕ್ಕಾಗಿ ಮುಂಭಾಗದಲ್ಲಿ ಹುಲ್ಲು ಹಾಸಿಗೆಯನ್ನು ನಿರ್ಮಿಸಲಾಗಿದೆ. ಆದರೀಗ ಅದು ಜಾನುವಾರುಗಳಿಗೆ ಆಹಾರ ಒದಗಿಸುವ ತಾಣವಾಗಿ ಪರಿಣಮಿಸಿದೆ.
ಬೀಡುಬಿಟ್ಟ ಹತ್ತಾರು ಬಿಡಾಡಿ ದನಗಳು:
ಬಸ್ ನಿಲ್ದಾಣದ ಹುಲ್ಲನ್ನು ಮೇಯುತ್ತ ದನಗಳು ಇಲ್ಲೇ ಬೀಡು ಬಿಟ್ಟಿವೆ. ಅವುಗಳ ನಿಯಂತ್ರಣಕ್ಕೆ ಕೆಎಸ್ಆರ್ಟಿಸಿ ನೌಕರರು ಮುಂದಾಗುತ್ತಿಲ್ಲ. ಸಾರ್ವಜನಿಕರೂ ಕೂಡ ತಮಗರಿವಿಲ್ಲದಂತೆ ಓಡಾಡಿಕೊಂಡೆ ಕಾಲ ಕಳೆಯುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.