ETV Bharat / state

ಬಳ್ಳಾರಿ: ಹೆರಿಗೆ, ಎಲುಬು-ಕೀಲು, ಕಣ್ಣಿನ ಆಸ್ಪತ್ರೆಗಳೇ ಈಗ ಕೋವಿಡ್​ ಆಸ್ಪತ್ರೆಗಳು! - ಬಳ್ಳಾರಿ ಕೋವಿಡ್​ ಆಸ್ಪತ್ರೆ ಸುದ್ದಿ

ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಕರ್ಯಗಳಿದೆಯೇ ಎಂಬುದನ್ನು ಪರಿಗಣಿಸದೇ ತರಾತುರಿಯಲ್ಲಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

ಕೋವಿಡ್​ ಆಸ್ಪತ್ರೆಗಳು
ಕೋವಿಡ್​ ಆಸ್ಪತ್ರೆಗಳು
author img

By

Published : Jun 28, 2020, 10:52 AM IST

ಬಳ್ಳಾರಿ: ಕೊರೊನಾ ಸೋಂಕಿನ ಚಿಕಿತ್ಸೆಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಪೂರಕ ಸೌಲಭ್ಯಗಳನ್ನು ಪರಿಶೀಲಿಸದೆ, ಆಸ್ಪತ್ರೆಗಳನ್ನು ಆಯ್ಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಕರ್ಯಗಳಿದೆಯೇ ಎಂಬುದನ್ನು ಸರಿಯಾಗಿ ಪರಿಗಣಿಸದೇ ತರಾತುರಿಯಲ್ಲಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಪ್ರತೀ ಜಿಲ್ಲೆಯಲ್ಲಿ ಕೋವಿಡ್​ ಚಿಕಿತ್ಸೆಗೆಂದು ಕೆಲವು ಖಾಸಗಿ ಆಸ್ಪತ್ರೆಗಳನ್ನು ಸೂಚಿಸಿದೆ. ಹೀಗೆ ಜಿಲ್ಲೆಯಲ್ಲೂ ಖಾಸಗಿ ಆಸ್ಪತ್ರೆಗಳ ವ್ಯವಸ್ಥೆ ಮಾಡಿದ್ದು ಈ ಆಸ್ಪತ್ರೆಗಳಲ್ಲಿ ಕೋವಿಡ್​ ಚಿಕಿತ್ಸೆ ನೀಡಲು ಮೂಲ ಸೌಕರ್ಯಗಳೇ ಇಲ್ಲದಿರುವುದು ತಿಳಿದುಬಂದಿದೆ.

ಕೋವಿಡ್​ ಆಸ್ಪತ್ರೆಗಳ ಪರಿಸ್ಥಿತಿ ಬಗ್ಗೆ ವಿಶೇಷ ವರದಿ..

ಸರ್ಕಾರ ಕಾಯ್ದಿರಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅಗತ್ಯವಾದ ವೈದ್ಯರು, ನರ್ಸ್ ಅಷ್ಟೇ ಯಾಕೆ? ಸರಿಯಾದ ಬೆಡ್ ಸಹ ಇಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರ ಒಟ್ಟು 7 ಖಾಸಗಿ ಆಸ್ಪತ್ರೆಯನ್ನು ಗುರುತಿಸಿದೆ. ಅದರಲ್ಲಿ ಜಿಂದಾಲ್‌ನಲ್ಲಿರುವ ಸಂಜೀವಿನಿ ಆಸ್ಪತ್ರೆಯನ್ನು ಹೊರತುಪಡಿಸಿ ಯಾವುದೇ ಆಸ್ಪತ್ರೆಗಳು ಕೊರೊನಾ ರೋಗಿಗಳನ್ನು ಇರಿಸಲು ಯೋಗ್ಯವಾಗಿಲ್ಲ. ಜಿಲ್ಲೆಯಲ್ಲಿ ಗುರುತಿಸಿದ ಬಹುತೇಕ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಫಿಜಿಷಿಯನ್ ಕೂಡಾ ಇಲ್ಲ. ಇನ್ನೂ ಹೇಳಬೇಕೆಂದರೆ, ಸರ್ಕಾರ ಗುರುತು ಮಾಡಿರುವ ಆಸ್ಪತ್ರೆಯಲ್ಲಿ ಬಹುತೇಕವು ಹೆರಿಗೆ ಹಾಗೂ ಎಲುಬು-ಕೀಲು, ಕಣ್ಣಿನ ಆಸ್ಪತ್ರೆಗಳಾಗಿವೆ.

ಹೊಸಪೇಟೆಯಲ್ಲಿ ಉಮಾಕಾಂತ್ ಕಣ್ಣಿನ ಆಸ್ಪತ್ರೆಯನ್ನೂ ಕೋವಿಡ್ ಆಸ್ಪತ್ರೆ ಮಾಡಲಾಗಿದೆ. ನಾವು ಕಣ್ಣಿನ ಆಸ್ಪತ್ರೆಯಲ್ಲಿ ಹೇಗೆ ಕೊರೊನಾಗೆ ಚಿಕಿತ್ಸೆ ನೀಡಲು ಸಾಧ್ಯ? ಎನ್ನುತ್ತಾರೆ ಡಾ.ಸಾಲಿಯಾ.

ಬಳ್ಳಾರಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳ ವಿವರ :

  • ಆರೋಗ್ಯ ಧಾಮ ಹಾಸ್ಪಿಟಲ್ ಹೂವಿನ ಹಡಗಲಿ (ಎಲುಬು ಮತ್ತು ಕೀಲು ಆಸ್ಪತ್ರೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್, ಫಿಜಿಷಿಯನ್ ಇಲ್ಲ)
  • ಸಿಟಿ ಹಾಸ್ಪಿಟಲ್, ಹೊಸಪೇಟೆ (ಎಲುಬು ಕೀಲು ಹಾಗೂ ಹೆರಿಗೆ ಆಸ್ಪತ್ರೆ)
  • ದೀಪಾಲಿ ನರ್ಸಿಂಗ್ ಹೋಮ್ ಹೊಸಪೇಟೆ, ಹೆರಿಗೆ ಆಸ್ಪತ್ರೆ
  • ಮಹೇಶ ನರ್ಸಿಂಗ್ ಹೋಮ್, ಹೆರಿಗೆ ಆಸ್ಪತ್ರೆ
  • ಉಮಾಕಾಂತ ಕಣ್ಣಿನ ಆಸ್ಪತ್ರೆ, ಹೊಸಪೇಟೆ
  • ಕೆ.ಎಲ್.ಎಸ್ ಹೆರಿಗೆ ಆಸ್ಪತ್ರೆ
  • ಸಂಜೀವಿನಿ ಜಿಂದಾಲ್ ಆಸ್ಪತ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.