ETV Bharat / state

ನಗರಸಭೆ ಸದಸ್ಯ- ಆನಂದ್​ ಸಿಂಗ್ ನಡುವೆ ವಾಗ್ದಾಳಿ.. ರಾಜೀನಾಮೆ ಚಾಲೆಂಜ್​ - ಹೊಸಪೇಟೆ ನಗರಸಭೆ ಸದಸ್ಯ ಖದೀರ್

ಸಚಿವ ಆನಂದ ಸಿಂಗ್ ಅವರು ಸರ್ವೆ ನಂ. 66 ಬಿ 2 ರಲ್ಲಿ ಚರಂಡಿ ಜಾಗ 5 ಸೆಂಟ್ಸ್ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದೇವೆ ಎಂದು ಹೊಸಪೇಟೆ ನಗರಸಭೆ ಸದಸ್ಯ ಖದೀರ್ ಅವರು ಹೇಳಿದ್ದಾರೆ.

ನಗರಸಭೆ ಸದಸ್ಯ ಹಾಗೂ ಆನಂದ್​ ಸಿಂಗ್
ನಗರಸಭೆ ಸದಸ್ಯ ಹಾಗೂ ಆನಂದ್​ ಸಿಂಗ್
author img

By

Published : Sep 9, 2022, 7:52 PM IST

Updated : Sep 9, 2022, 8:50 PM IST

ವಿಜಯನಗರ: ಸಚಿವ ಆನಂದ್ ಸಿಂಗ್ ದೌರ್ಜನ್ಯ ಆರೋಪ ಪ್ರಕರಣ ಸದ್ಯಕ್ಕೆ ಮುಗಿಯುವ ಸಾಧ್ಯತೆಗಳಿಲ್ಲ.‌ ನಿತ್ಯ ಹೊಸಹೊಸ ರೂಪ ಪಡೆದುಕೊಳ್ತಿದೆ. ಇದೀಗ ಮಿನಿಸ್ಟರ್ ವರ್ಸಸ್ ಕಾರ್ಪೋರೇಟರ್ ಹಂತಕ್ಕೆ ತಲುಪಿದ್ದು, ಇಬ್ಬರೂ ಪರಸ್ಪರ ರಾಜೀನಾಮೆ ಕೊಡೊ ಚಾಲೆಂಜ್ ಹಾಕಿಕೊಂಡಿದ್ದಾರೆ.

ನಗರಸಭೆ ಸದಸ್ಯ- ಆನಂದ್​ ಸಿಂಗ್ ನಡುವೆ ವಾಗ್ದಾಳಿ

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಅವರು ಇತ್ತೀಚೆಗೆ ಪ್ರೆಸ್ ಮೀಟ್ ಮಾಡಿ, ತಮ್ಮ ಮೇಲಿರೋ ಭೂ ಕಬಳಿಕೆ ಆರೋಪ ಸುಳ್ಳು ಅಂತ ಹೇಳಿದರು. ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿರುವ ಹೊಸಪೇಟೆ ನಗರಸಭೆ 6 ನೇ ವಾರ್ಡ್​​​ನ ಕಾರ್ಪೋರೇಟರ್ ಖದೀರ್ ಆನಂದ್ ಸಿಂಗ್ ಅವರ ಮನೆಯ ನಿರ್ಮಾಣವೇ ಅಕ್ರಮ ಅಂತ ದಾಖಲೆ ಬಿಡುಗಡೆ ಮಾಡಿದ್ರು.

ಈ ವೇಳೆ ಚಾಲೆಂಜ್ ಹಾಕಿರೋ ಅವರು, ಆನಂದ್ ಸಿಂಗ್ ಅವರೇ ನಿಮ್ಮ ಅಕ್ರಮ ಸಾಬೀತು ಮಾಡಿದ್ದೀನಲ್ಲ ಈಗ ರಾಜೀನಾಮೆ ಕೊಡಿ. ನೀವು ಅಕ್ರಮ ಮಾಡಿಲ್ಲ ಅಂತ ಸಾಬೀತು ಮಾಡಿದ್ರೆ ನಾನು ರಾಜೀನಾಮೆ ಕೊಡ್ತೀನಿ ಅಂತ ಸವಾಲೆಸೆದಿದ್ದಾರೆ.

ವರದಿಯನ್ನೇ ಚಾಲೇಂಜ್​ ಮಾಡ್ತೇವಿ: ಹೊಸಪೇಟೆಯ ಬೈಪಾಸ್ ರಸ್ತೆಯ ಬಳಿ ಸಚಿವ ಆನಂದ್ ಸಿಂಗ್ ನಿರ್ಮಾಣ ಮಾಡಿರೋ ಮನೆಗಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ. ಸರ್ವೆ 63 ರ ಬಗ್ಗೆ ನಮಗೂ ತಕರಾರು ಇದೆ. ಈ ವರದಿಯನ್ನು ನಾವು ಚಾಲೆಂಜ್​​ ಮಾಡುತ್ತೇವೆ. ಸಚಿವರ ಭೂ ಒತ್ತುವರಿ ಬಗ್ಗೆ ಕಾನೂನಾತ್ಮಕ ಹೋರಾಟ ಕೂಡ ಮಾಡುತ್ತೇವೆ. ಸಚಿವ ಆನಂದ ಸಿಂಗ್ ಅವರು ಸರ್ವೆ ನಂ. 66 ಬಿ 2 ರಲ್ಲಿ ಚರಂಡಿ ಜಾಗ 5 ಸೆಂಟ್ಸ್ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದೇವೆ ಎಂದರು.

ಮೆ. ಸುರಕ್ಷಾ ಎಂಟರ್​ಪ್ರೈಸ್​ನವರು ಕೂಡ ಅಂದಾಜು 70 ಸೆಂಟ್ಸ್ವರೆಗೂ ಜಾಗ ಒತ್ತುವರಿ ಮಾಡಿದ್ದಾರೆ. ಹಳ್ಳದ ನೀರು ಸರಾಗವಾಗಿ ಕಾಲುವೆಯಲ್ಲಿ ಹರಿದು ಹೋಗಲು ಇದ್ದ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಪ್ಯಾಸೇಜ್ ಗೇಟ್‌ನ ನೀರು ಮುಂದೆ ಹರಿದು ಹೋಗಲು ವ್ಯವಸ್ಥೆ ಇಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅಂದಾಜು 20 ಕೋಟಿ ರೂ. ಬೆಲೆಬಾಳುವ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ನಾವು ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಆರ್‌ಟಿಐ ಕಾರ್ಯಕರ್ತ ಟಿ. ಶ್ರೀಧರ್ ನೀಡಿದ ಸರ್ವೆ ನಂಬರ್‌ಗಳೇ ಬೇರೆ. ನಾವು ಸರ್ವೆ ನಂ. 186ಬಿ, 73ಬಿ, 74ಎ/2, 74ಬಿ/2, 75ಬಿ1/ಬಿ, 75ಬಿ2/ಬಿ, 65ಎ/2, 66ಬಿ, 67ಬಿ2, 81ಎ/2, 81ಬಿ/2 ಸರ್ವೆಗಳಲ್ಲಿ ಸರ್ವೆ ನಡೆಯಲಿ ಎಂದು ಒತ್ತಾಯಿಸುತ್ತಿದ್ದೇವೆ.

ಇಲ್ಲಿ ಸರ್ವೆ ನಡೆದರೆ, ಸಚಿವರು 67ಬಿ2 ಸರ್ವೆಯಲ್ಲಿ ಚರಂಡಿ ಜಾಗ ಐದು ಸೆಂಟ್ಸ್ ಒತ್ತುವರಿ ಮಾಡಿ ಮನೆ ನಿರ್ಮಿಸಿರುವುದು ಸಾಬೀತಾಗಲಿದೆ. ಇನ್ನೂ ಸರ್ವೆ ನಂ. 63 ರಲ್ಲೂ ಒತ್ತುವರಿಯಾಗಿರುವುದು ಗೊತ್ತಾಗಲಿದೆ ಎಂದರು.

ಸರ್ಕಾರಿ ಜಾಗ ಒತ್ತುವರಿ ಆರೋಪ: ಮೆ. ಸುರಕ್ಷಾ ಎಂಟರ್‌ಪ್ರೈಸ್ ನವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಹಳ್ಳದ ನೀರು ಸರಾಗವಾಗಿ ಹರಿದು ಹೋಗಲು ಇದ್ದ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಅನ್ನೋದು ಖದೀರ್ ಆರೋಪ.

ಓದಿ: ಜನರು ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ.. ಕೋಡಿಮಠ ಶ್ರೀ ಭವಿಷ್ಯ

Last Updated : Sep 9, 2022, 8:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.