ETV Bharat / state

ಕೊರೊನಾ ವಾರಿಯರ್ಸ್​ ಬೆನ್ನೇರಿದ ಮಹಾಮಾರಿ: ಬಳ್ಳಾರಿಯ ಪೊಲೀಸ್​ ಸಿಬ್ಬಂದಿಗೆ ಸೋಂಕು ದೃಢ..! - ಬಳ್ಳಾರಿ ಕೊರೊನಾ ಸುದ್ದಿ

ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯ ಎಎಸ್​​ಐ ಮತ್ತು ಕಂಪ್ಲಿ ಠಾಣೆಯ ಸಿಪಿಐ ಗೆ ಕೊರೊನಾ ಸೋಂಕು ದೃಢವಾಗಿದೆ.

corona virus-found for police staff of Bellary
ಬಳ್ಳಾರಿಯ ಪೊಲೀಸ್​ ಸಿಬ್ಬಂದಿಗೆ ಸೋಂಕು ದೃಢ
author img

By

Published : Jul 3, 2020, 12:58 PM IST

ಬಳ್ಳಾರಿ: ಕೊರೊನಾ ವಾರಿಯರ್ಸ್​ಗೂ ಬೆಂಬಿಡದೆ ಕಾಡುತ್ತಿರುವ ಡೆಡ್ಲಿ ವೈರಸ್​​ ಇದೀಗ ನಗರದ ಪೊಲೀಸ್ ಸಿಬ್ಬಂದಿಗೆ ಕಂಟಕವಾಗಿ ಪರಿಣಮಿಸಿದೆ.

ಜಿಲ್ಲೆಯ ಹೊಸಪೇಟೆ ತಾಲೂಕು ಮತ್ತು ಕಂಪ್ಲಿ ತಾಲೂಕಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯ ಎಎಸ್​​ಐ ಮತ್ತು ಕಂಪ್ಲಿ ಠಾಣೆಯ ಸಿಪಿಐಗೆ ಸೋಂಕು ದೃಢವಾಗಿದೆ.

ಬಳ್ಳಾರಿಯ ಪೊಲೀಸ್​ ಠಾಣೆ ಸೀಲ್​ಡೌನ್​​
ಜೂನ್ 25 ರಂದು ಕಂಪ್ಲಿ ಠಾಣೆಯ ಕಾನ್ಸ್​ಟೇಬಲ್​ವೋರ್ವರಿಗೆ ಕೋವಿಡ್​-19 ದೃಢವಾಗಿತ್ತು. ನಂತರ ಸೋಂಕಿತ ಕಾನ್ಸ್​ಟೇಬಲ್​ ಸಂಪರ್ಕದಿಂದ ಕಂಪ್ಲಿ ಸಿಪಿಐ ಗೆ ವೈರಸ್​​ ತಗುಲಿದೆ. ಇದಾದ ನಂತರ ಜೂನ್ 29 ರಂದು ಅವರ ಸ್ವ್ಯಾಬ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆ ವರದಿ ಪಾಸಿಟಿವ್ ಬಂದಿದೆ.

ಕಂಪ್ಲಿ ಠಾಣೆಯ ಸಿಪಿಐ ಅಲ್ಲಿನ ಅನೇಕ ಹೋಟೆಲ್​​, ಅಂಗಡಿಗಳು ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿದ ಪರಿಣಾಮ ಅಲ್ಲಿನ ಅನೇಕ ಮಂದಿ ವೈರಸ್ ಭಯದಿಂದ ತಮ್ಮ ಅಂಗಡಿಗಳನ್ನು ಬಂದ್​​ ಮಾಡಿದ್ದಾರೆ.

ಕಂಪ್ಲಿ ಪೊಲೀಸ್ ಠಾಣೆಯನ್ನು ಸಂಪೂರ್ಣ ಸೀಲ್​​ಡೌನ್​​ ಮಾಡಲಾಗಿದ್ದು, ಸಿಪಿಐ ಮತ್ತು ಎಎಸ್​ಐ ಅವರ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್​ ಮಾಡಲು ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.