ETV Bharat / state

ಕೋವಿಡ್ ಕೇಂದ್ರದಲ್ಲಿ ಧ್ಯಾನ, ಪ್ರಾಣಾಯಾಮ: ವಿಮ್ಸ್​​​ ಸಿಬ್ಬಂದಿ ಕಾರ್ಯಕ್ಕೆ ಸೋಂಕಿತರು ಖುಷ್​​​​ - ವಿಮ್ಸ್​​ ಕೋವಿಡ್​ ಕೇಂದ್ರದಲ್ಲಿ ಧ್ಯಾನ

ಬಳ್ಳಾರಿ ವಿಮ್ಸ್​​ ಆವರಣದಲ್ಲಿರುವ ಕೋವಿಡ್​ ಕೇಂದ್ರದಲ್ಲಿನ ರೋಗಿಗಳಿಗೆ ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಮಾಡಿಸುವುದರ ಮೂಲಕ ಸೋಂಕಿತರಿಗೆ ಧನಾತ್ಮಕ ಆಲೋಚನೆಗಳನ್ನು ತುಂಬುವ ಪ್ರಯತ್ನವನ್ನು ಅಲ್ಲಿನ ಸಿಬ್ಬಂದಿ ಮಾಡುತ್ತಿದ್ದು, ಪ್ರಶಂಸೆಗೆ ಪಾತ್ರರಾಗಿದ್ದಾರೆ.

corona-patient-doing-meditation-in-bellaery-vims
ವಿಮ್ಸ್ ಆಸ್ಪತ್ರೆ
author img

By

Published : Aug 21, 2020, 11:22 PM IST

ಬಳ್ಳಾರಿ : ನಗರದ ವಿಮ್ಸ್ ಆವರಣದಲ್ಲಿ ಇರುವ ಕೋವಿಡ್ -19 ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಮಾಡಿದರು. ಇನ್ನು ಕೆಲವರು ಚಿತ್ರ ಗೀತೆಗಳನ್ನು ಹಾಡುವ ಮೂಲಕ ಧನಾತ್ಮಕ ಆಲೋಚನೆಗಳಲ್ಲಿ ತೊಡಗಿಕೊಂಡಿದ್ದರು‌.

ನಾಲ್ಕು ಗೋಡೆಗೆ ಸೀಮಿತವಾಗಿರುವ ಕೋವಿಡ್​​ ಸೋಂಕಿತರು ಧನಾತ್ಮಕ ಆಲೋಚನೆಗಳಿಂದ ವಾಸ್ತವದ ಬಗ್ಗೆ ಅರಿಯಲು ಮತ್ತು ಆರೋಗ್ಯ ವೃದ್ಧಿಯ ಕಡೆ ಗಮನಹರಿಸಲು ವಿಮ್ಸ್​​ ಆಸ್ಪತ್ರೆಯಲ್ಲಿ ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಮಾಡಿಸಲಾಗುತ್ತಿದೆ. ಸಿಬ್ಬಂದಿಯ ಈ ಪ್ಲಾನ್​ಗೆ ಸೋಂಕಿತರು ಖುಷಿಯಾಗಿದ್ದು ಸಂತೋಷ ಹಂಚಿಕೊಂಡಿದ್ದಾರೆ.

ಕೋವಿಡ್ ಕೇಂದ್ರದಲ್ಲಿ ಧ್ಯಾನ, ಪ್ರಾಣಾಯಾಮ

ಭಾನುವಾರ ಕೊರೊನಾ ವೈರಸ್ ಪಾಸಿಟಿವ್ ಎಂದು ನನಗೆ ಮಾಹಿತಿ ಬಂದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಕೊಡಲ್ಲ ಹೋಗಬೇಡ ಎಂದು ಕೆಲವರು ತಿಳಿಸಿದರು. ಆದರೆ ಖಾಸಗಿ ಹಾಸ್ಪಿಟಲ್​​ನಲ್ಲಿ ಚಿಕಿತ್ಸೆ ಪಡೆಯಬೇಕೆಂದ್ರೆ 80 ಸಾವಿರ ಖರ್ಚಾಗುತ್ತದೆ. ಆದಕ್ಕೆ ಬಳ್ಳಾರಿಗೆ ಆಗಮಿಸಿದೆ. ಇಲ್ಲಿಯ ವೈದ್ಯರು, ನರ್ಸ್​ಗಳು, ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸೋಂಕಿತರೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ರೋಗಿಗಳು ಉತ್ತಮ ಸೌಲಭ್ಯದ ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಮಾಹಿತಿ ಪ್ರಸಾರ ಗ್ರೂಪ್​​ನಲ್ಲಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.