ETV Bharat / state

ಕೊರೊನಾ ಎಫೆಕ್ಟ್​ : ತರಕಾರಿ ಕೊಳ್ಳಲು ಮುಗಿಬಿದ್ದ ಹೊಸಪೇಟೆ ಜನತೆ

ಕೊರೊನಾ ಹಬ್ಬುವಿಕೆಯ ಆತಂಕದಿಂದ ರಾಜ್ಯಾದ್ಯಂತ್ ಲಾಕ್​ಡೌನ್ ಘೋಷಿಸಲಾಗಿದೆ. ಹೊಸಪೇಟೆ ನಗರದ ಸಂತೆ ಮಾರುಕಟ್ಟೆಯಲ್ಲಿ ಭಾನುವಾರ ಸಂಜೆ ಜನರು ತರಕಾರಿಕೊಳ್ಳಲು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದರು.

market
ಮಾರುಕಟ್ಟೆ
author img

By

Published : Mar 24, 2020, 4:57 AM IST

ಹೊಸಪೇಟೆ: ಕೊರೊನಾ ಭೀತಿಯಿಂದ ಜನರು ಹೊರಗೆ ಬರಲು ಹಿಂಜರಿಯುತ್ತಿದ್ದರೂ ಮನೆಗೆ ಬೇಕಾಗಿರುವ ನಿತ್ಯ ಬಳಕೆಯ ವಸ್ತಗಳು ಹಾಗೂ ತರಕಾರಿಗಳನ್ನು ಖರೀದಿಸಲು ಸ್ಥಳೀಯರು ಮಾರುಕಟ್ಟೆ ಹಾಗೂ ಹಣ್ಣಿನ ಅಂಗಡಿಗಳ ಮುಂದಾ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಹೊಸಪೇಟೆಯಲ್ಲಿ ತರಕಾರಿ ಕೊಳ್ಳಲು ಮುಗಿಬಿದ್ದಿರುವ ಜನರು

ನಗರದ ಸಂತೆ ಮಾರುಕಟ್ಟೆಯಲ್ಲಿ ಭಾನುವಾರ ಸಂಜೆ ವೇಳೆಯಲ್ಲಿ ಜನರು ತರಕಾರಿ ಹಾಗೂ ಇತರೆ ವಸ್ತುಗಳನ್ನು ಖರೀದಿಸಲು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದರು. ಇನ್ನೊಂದು ಕಡೆ ಗ್ರಾಹಕರು ಬೇಡಿದ ಸರಕುಗಳನ್ನು ನೀಡಲು ವ್ಯಾಪಾರಿಗಳು ಉತ್ಸಾಹದಿಂದ ತೊಡಗಿಸಿಕೊಂಡಿದ್ದು ಸಾಮಾನ್ಯವಾಗಿತ್ತು.

ಭಾನುವಾರದಂತೆ ಮುಂದಿನ ದಿನವೂ ಜನತಾ ಕರ್ಫ್ಯೂ ನಡೆಯಬಹುದು ಎಂಬ ಆತಂಕದಿಂದಾಗಿ ಮಾರುಕಟ್ಟೆಯಲ್ಲಿ ಗ್ರಾಹಕರ ದಟ್ಟಣೆ ಕಂಡುಬಂದಿತ್ತು. ವ್ಯಾಪಾರಿಗಳು ಸಿಕ್ಕಿದ್ದೆ ಒಳ್ಳೆಯ ಅವಕಾಶವೆಂದು ತರಕಾರಿ ಹಾಗೂ ಹಣ್ಣುಗಳ ಬೆಲೆಯನ್ನು ದುಬಾರಿ ಬೆಲೆ ಮಾರಾಟ ಮಾಡಿದ್ದಾರೆ. ಕೆ.ಜಿ. ಟೊಮೊಟೋ 30ರಿಂದ 40 ರೂ., ಆಲೂಗಡ್ಡೆ 40 ರೂ. ಸೇರಿದಂತೆ ಇತರೆ ತರಕಾರಿಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.