ಬಳ್ಳಾರಿ: ಕೊರೊನಾದಿಂದಾಗಿ ಜಿಲ್ಲೆಯ ಯಾಲ್ಪಿ ಗ್ರಾಮದಲ್ಲಿ ಬೆಳೆದ ಸಾವಿರಾರು ಎಕರೆ ಹೂ ವ್ಯಾಪಾರವಾಗದೆ ಹೊಲದಲ್ಲೇ ನಾಶವಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಕೂಡಲೇ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ರೈತ ಮಲ್ಲಿಕಾರ್ಜುನ ಎಂಬುವವರು ಮಾತನಾಡಿ, ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮಲ್ಲಿಗೆ ಕಟಾವು ಮಾಡದೆ ಮೂರು ಲಕ್ಷ ನಷ್ಟ ಉಂಟಾಗಿದೆ. ಹೀಗೆಯೇ ಆದ್ರೆ ನಾವು ಬದುಕುವುದು ಹೇಗೆ.? ತಿನ್ನಲು ಅನ್ನ ಇಲ್ಲ. ಹೂ ಮಾರಾಟ ಮಾಡಿದ್ರೆ ಮಾತ್ರ ನಮ್ಮ ಬದುಕು ಸಾಗುತ್ತದೆ. ಇಲ್ಲದೆ ಇದ್ದರೆ ಹಸಿವಿನಿಂದ ಸಾಯಬೇಕು ಎಂದು ತಮ್ಮ ನೋವು ಹೇಳಿಕೊಂಡಿದ್ದಾರೆ.
ಯಾಲ್ಪಿ ಗ್ರಾಮದಲ್ಲಿ ಮಲ್ಲಿಗೆ ಹೂವು ಬೆಳೆದ ಪ್ರತಿಯೊಬ್ಬ ರೈತನಿಗೆ ಎರಡು ಲಕ್ಷ ನಷ್ಟವಾಗಿದೆ. ಈ ಭಾಗದಲ್ಲಿ ನೂರಾರು ರೈತರು ಮಲ್ಲಿಗೆ ಹೂ ಬೆಳೆದಿದ್ದಾರೆ. ಇದಕ್ಕೆ ಎರಡರಿಂದ ಎರಡೂವರೆ ಲಕ್ಷದವರೆಗೆ ಖರ್ಚು ಮಾಡಿದ್ದಾರೆ. ಸರ್ಕಾರ ಈ ಕುರಿತು ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.