ಬಳ್ಳಾರಿ: ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಾಕ್ಷ್ಯ ಚಿತ್ರವೊಂದನ್ನು ಬಿಡುಗಡೆ ಮಾಡಲಾಗಿದೆ.
ನಗರದ ಎಸ್.ಪಿ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ ಬಾಬಾ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದರು. ಹೊಸಪೇಟೆಯ ಯುವಕರ ತಂಡ, ಪೊಲೀಸ್ ಇಲಾಖೆ ಮತ್ತು ಮಾಧ್ಯಮ ಪ್ರತಿನಿಧಿಗಳು ಒಟ್ಟಾಗಿ ಈ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಟಿ.ಬಿ ಡ್ಯಾಂ ಪೊಲೀಸ್ ಠಾಣೆಯ ಮುಖ್ಯಪೇದೆ ಎಸ್.ಕೆ ಜಿಲಾನಿ ಬಾಷ, ಪತ್ರಿಕಾ ಛಾಯಾಗ್ರಾಹಕ ಮತ್ತು ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ನಟಿಸಿದ್ದು, ತಾಂತ್ರಿಕವಾಗಿ ಹೊಸಪೇಟೆಯ ಯುವಕರಾದ ಮಹಿನ್ ಜೈನ್ ,ಸೂರಜ್ ಸೋನಿ, ಮಹಿನ್ ಜೈನ್, ತರುಣ್ ಜೈನ್ಕ್ ಕಾರ್ಯನಿರ್ವಹಿಸಿದ್ದಾರೆ.