ಬಳ್ಳಾರಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕಲಘಟಗಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಮಾಜಿ ಸಚಿವ ಸಂತೋಷ್ ಎಸ್ ಲಾಡ್ ಸ್ಪಷ್ಟಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹಾಗೂ ಧಾರವಾಡ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ನಡುವೆ ಇದ್ದ ಸಣ್ಣ-ಪುಟ್ಟ ವೈಮನಸ್ಸನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ದೂರ ಮಾಡಿದ್ದಾರೆ. ಹೀಗಾಗಿ, ನನ್ನ ಪರ್ಯಾಯವಾಗಿ ಮತ್ತೊಬ್ಬ ಅಭ್ಯರ್ಥಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರು ಬೆಳೆಸುತ್ತಾರೆ ಎನ್ನುವುದು ಶುದ್ಧ ಸುಳ್ಳು. ಅದೆಲ್ಲ ಊಹಾಪೋಹದ ಸುದ್ದಿ ಎಂದರು.
2008ರಲ್ಲೇ ಸಂಡೂರು ವಿಧಾನಸಭಾ ಕ್ಷೇತ್ರದ ಋಣ ತೀರಿತು. ಹೀಗಾಗಿ, ನಾನು ನನ್ನ ಎಲ್ಲಾ ಜವಾಬ್ದಾರಿಯನ್ನು ಶಾಸಕ ತುಕರಾಂ ಅವರಿಗೆ ನೀಡಿದ್ದೇನೆ ಎನ್ನುವ ಮೂಲಕ ತುಕಾರಂ ಅವರ ಭುಜ ತಟ್ಟಿದರು.
ಮತ್ತೊಬ್ಬರ ಆಸ್ತಿ ಲಪಟಾಯಿಸುವ ಗತಿ ಇನ್ನೂ ನನ್ನ ಕುಟುಂಬಕ್ಕೆ ಬಂದಿಲ್ಲ : ಮತ್ತೊಬ್ಬರ ಆಸ್ತಿಯನ್ನು ಲಪಟಾಯಿಸುವ ಗತಿ ಇನ್ನೂ ನನ್ನ ಕುಟುಂಬಕ್ಕೆ ಬಂದಿಲ್ಲ. ಸಂಡೂರು ತಾಲೂಕಿನ ಮಾಳಾಪುರ ಗ್ರಾಮದ ನಿವಾಸಿ ಹನುಮಗಾರಿ ಹೊನ್ನೂರಪ್ಪ ತಂದೆ ಹನುಮಂತಪ್ಪ ಎಂಬುವರಿಂದ 1996ರಲ್ಲೇ ನನ್ನ ಕುಟುಂಬದ ಪೂರ್ವಿಕರು ಅಂದಾಜು 47.63 ಸೆಂಟ್ಸ್ ಜಮೀನನ್ನು ಕಾನೂನಿನ ಚೌಕಟ್ಟಿನಲ್ಲೇ ಖರೀದಿಸಿದ್ದಾರೆ.
ಆದರೆ, ಕಳೆದ ತಿಂಗಳಿಂದ ಕೆಲ ಸ್ವಹಿತಾಸಕ್ತಿವುಳ್ಳ ವ್ಯಕ್ತಿಗಳು, ರಾಜಕೀಯ ವಿರೋಧಿಗಳು ಕ್ಷುಲ್ಲಕ ಮನೋಭಾವದಿಂದ ಸದರಿ ಜಮೀನಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಹಾಗೂ ನಮ್ಮ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ನಮ್ಮ ತೇಜೋವಧೆ ಮಾಡುತ್ತಿದ್ದಾರೆ. ಇದನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ ಎಂದರು.
ಓಸಿ: ನಾನು ಸಿನಿಮಾದವನಾಗಿ ಮಾತನಾಡಿದ್ದೇನೆ, ಹೆಚ್ಡಿಕೆ ರಾಜಕೀಯ ಬಗ್ಗೆ ಮಾತನಾಡಿಲ್ಲ : ರಾಕ್ಲೈನ್ ವೆಂಕಟೇಶ್
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ್, ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಬಿ.ಎಂ.ಪಾಟೀಲ್, ವಿಲ್ಸನ್ ನೋವೆಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ಮುಂಡರಗಿ ನಾಗರಾಜ, ಎ.ಮಾನಯ್ಯ ಸೇರಿದಂತೆ ಅನೇಕು ಭಾಗವಹಿಸಿದ್ದರು.